ಶಾಕಿಂಗ್ ಕಾಮೆಂಟ್ಸ್ ಮಾಡಿದ ಪಾಯಲ್ ಘೋಷ್, ಬಾಲಿವುಡ್ ನಲ್ಲಿ ನನ್ನ ಬಟ್ಟೆ ಬಿಚ್ಚಿಬಿಡುತ್ತಿದ್ದರು ಎಂದ ನಟಿ…..!

Follow Us :

ಸಿನಿರಂಗದಲ್ಲಿ ಮಿಟೂ ಅಭಿಯಾನ ಸದ್ದು ಮಾಡಿದ ಬಳಿಕ ಅನೇಕ ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಕಾರಳ ಸತ್ಯಗಳನ್ನು ಹೊರಹಾಕಿದ್ದರು. ಇದೀಗ ಬಾಲಿವುಡ್ ನಟಿ ಪಾಯಲ್ ಘೋಷ್ ಕಾಸ್ಟಿಂಗ್ ಕೌಚ್ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ ಗಳನ್ನು ಹೊರಹಾಕಿದ್ದಾರೆ. ಈ ಹಿಂದೆ ಸಹ ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ನೀಡಿದ್ದರು. ಇದೀಗ ಆಕೆ ಮತ್ತೊಮ್ಮೆ ಕೆಲವೊಂದು ಸಂಚಲನಾತ್ನಕ ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳ ವೈರಲ್ ಆಗುತ್ತಿವೆ.

ಈ ಹಿಂದೆ ಮೀಟೂ ಉದ್ಯಮ ಸಮಯದಲ್ಲಿ ಪಾಯಲ್ ಘೋಷ್ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮೇಲೆ ಕಾಸ್ಟಿಂಗ್ ಕೌಚ್ ಆರೋಪಗಳನ್ನು ಮಾಡಿದ್ದರು. ಅಂದು ಪಾಯಲ್ ಮಾಡಿದ ಕಾಮೆಂಟ್ ಗಳು ಸಖತ್ ಸದ್ದು ಮಾಡಿತ್ತು. ಇದೀಗ ಮತ್ತೊಮ್ಮೆ ಬಾಲಿವುಡ್ ಮೇಲೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಬಾಲಿವುಡ್ ಸಿನಿರಂಗವನ್ನು ಟಾರ್ಗೆಟ್ ಮಾಡಿದ್ದಾರೆ. ಇದೇ ಸಮಯದಲ್ಲಿ ಸೌತ್ ಸಿನಿರಂಗವನ್ನು ಕೊಂಡಾಡಿದ್ದಾರೆ. ನಾನು ದೇವರ ದಯೆಯಿಂದ ಸೌತ್ ಸಿನಿರಂಗದಲ್ಲಿ ನಟಿಯಾಗಿ ಪರಿಚಯವಾದೆ. ಒಂದು ವೇಳೆ ನಾನು ಬಾಲಿವುಡ್ ನಲ್ಲಿ ಲಾಂಚ್ ಆಗಿದ್ದರೇ, ನನ್ನ ಬಟ್ಟೆ ಬಿಚ್ಚಿ ಶರೀರವನ್ನು ಬಳಸಿಕೊಳ್ಳುತ್ತಿದ್ದರು. ಬಾಲಿವುಡ್ ನಲ್ಲಿ ಹುಡುಗಿಯರ ಕ್ರಿಯೇಟಿವಿಟಿ, ಟ್ಯಾಲೆಂಟ್ ಗಿಂತಲೂ ಅವರ ಶರೀರವನ್ನೆ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಅವರಿಗೆ ಅದೇ ಬೇಕು ಎಂಬಂತೆ ವರ್ತನೆ ಮಾಡುತ್ತಾರೆ ಸೋಷಿಯಲ್ ಮಿಡಿಯಾದಲ್ಲಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ಪಾಯಲ್ ಘೋಷ್ ನೀಡಿದ ಕಾಮೆಂಟ್ ಗಳು ಮತ್ತೊಮ್ಮೆ ಜೋರಾದ ಚರ್ಚೆ ಶುರುವಾಗಿದೆ. ಆಕೆ ಹೆಚ್ಚಾಗಿ ಹಿಂದಿ ಸಿನೆಮಾಗಳಲ್ಲಿ ನಟಿಸಿಲ್ಲ. ಆಗಾಗ ಒಂದೊಂದು ಸಿನೆಮಾದಲ್ಲಿ ಮಾತ್ರ ನಟಿಸಿದ್ದಾರೆ. ಹೆಚ್ಚಾಗಿ ಆಕೆ ಸೌತ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಳೆದ 2011 ರಲ್ಲಿ ಜೂನಿಯರ್‍ ಎನ್.ಟಿ.ಆರ್‍ ಹಾಗೂ ತಮನ್ನಾ ಕಾಂಬಿನೇಷನ್ ನಲ್ಲಿ ಬಂದಂತಹ ಊಸರವಲ್ಲಿ ಎಂಬ ಸಿನೆಮಾದಲ್ಲಿ ತಮನ್ನಾ ಸ್ನೇಹಿತೆಯಾಗಿ ನಟಿಸಿದ್ದರು. ಈ ಸಿನೆಮಾದಲ್ಲಿ ಪಾಯಲ್ ತುಂಬಾನೆ ಬೋಲ್ಡ್ ಆಗಿ ನಟಿಸಿದ್ದರು. ಈ ಸಿನೆಮಾದ ಜೊತೆಗೆ ಆಕೆ ಪ್ರಯಾಣಂ, ಮಿಸ್ಟರ್‍ ರಾಸ್ಕಲ್ ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ನಟಿಸಿದ್ದಾರೆ.  ಈ ಹಿಂದೆ RRR ಸಿನೆಮಾದಲ್ಲಿ ಜೂನಿಯರ್‍ ಎನ್.ಟಿ.ಆರ್‍ ರವರ ಅಭಿನಯವನ್ನು ಹಾಡಿ ಹೊಗಳಿದ್ದರು.