ಮತ್ತೊಮ್ಮೆ ಪ್ರೀತಿಗೆ ಬಿದ್ದ ಬಾಲಿವುಡ್ ಹಾಟ್ ಬಾಂಬ್ ರಾಖಿ, ಮೂರನೇ ಮದುವೆಯಾಗುತ್ತಾರಾ ರಾಖಿ?

Follow Us :

ಬಾಲಿವುಡ್ ನ ಐಟಂ ಬಾಂಬ್ ಎಂತಲೇ ಖ್ಯಾತಿ ಪಡೆದುಕೊಂಡ ರಾಖಿ ಸಾವಂತ್ ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಕಳೆದೆರಡು ತಿಂಗಳಿನಿಂದ ಸದಾ ಅವರ ಹೆಸರು ಕೇಳಿಬರುತ್ತಲೇ ಇದೆ. ಸಿನೆಮಾ ಕಥೆಯಂತೆ ಆಕೆಯ ಲವ್ ಸ್ಟೋರಿ ಸಹ ಸಾಗಿದೆ. ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಎಂಬಾತನೊಂದಿಗೆ ಪ್ರೇಮಪಯಣ, ಬಳಿಕ ನಿಗೂಡ ಮದುವೆ, ಬಳಿಕ ಆರೋಪಗಳು ಮಾಡಿದ್ದು, ಇದಾದ ನಂತರ ಆದಿಲ್ ನನ್ನು ಜೈಲಿಗೆ ಕಳುಹಿಸಿದ್ದು, ಹೀಗೆ ಅವರ ಲವ್ ಸ್ಟೋರಿ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಇದೀಗ ಆಕೆ ಮತ್ತೊಮ್ಮೆ ಪ್ರೀತಿಗೆ ಬಿದ್ದಿದ್ದಾರಂತೆ. ಆ ವಿಚಾರವನ್ನು ಆಕೆಯೇ ಹೊರಹಾಕಿದ್ದಾರೆ.

ನಟಿ ರಾಖಿ ಸಾವಂತ್ ಲೈಫ್ ಸ್ಟೋರಿ ಒಂದು ಮಾದರಿಯ ಸಿನೆಮಾದಂತೆ ನಡೆಯುತ್ತಿದೆ. ಬಾಲಿವುಡ್ ಹಾಟ್ ಬಾಂಬ್ ರಾಖಿ ಸಾವಂತ್ ಹಾಗೂ ಉದ್ಯಮಿ ಆದಿಲ್ ದುರಾನಿ ಸುಮಾರು ತಿಂಗಳುಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದರು. ಈಗಾಗಲೇ ಅನೇಕ ಬಾರಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಕಳೆದ ಜನವರಿ 11 ರಂದು ನ್ಯಾಯಾಲಯದಲ್ಲಿ ನಿಗೂಡವಾಗಿ ಮದುವೆಯಾಗಿದ್ದರು. ಬಳಿಕ ಆತನ ವಿರುದ್ದ ಅನೇಕ ಆರೋಪಗಳನ್ನು ಮಾಡಿ ಆತನ್ನನ್ನು ಜೈಲಿಗೆ ಸಹ ಕಳುಹಿಸಿದ್ದಾರೆ. ಆದಿಲ್ ಖಾನ್ ಗೆ ಅನೈತಿಕ ಸಂಬಂಧ ಇದೆ. ಬೇರೆ ಯುವತಿಯ ಜೊತೆ ತಿರುಗಾಡುತ್ತಿದ್ದಾನೆ. ಆಕೆಯನ್ನು ಬಿಟ್ಟು ಬಿಡುತ್ತೇನೆ ಎಂದು ನನ್ನ ಮೇಲೆ ಆಣೆ ಮಾಡಿದ್ದ. ಆದರೂ ಸಹ ಆತ ಆ ಯುವತಿಯನ್ನು ಬಿಡದೇ ಆಕೆಯೊಂದಿಗೆ ಅಫೈರ್‍ ನಡೆಸುತ್ತಿದ್ದಾನೆ. ಇದೀಗ ಆಕೆ ಆತನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಆಕೆಯ ಬಳಿ ಆದಿಲ್ ಖಾನ್ ನ ಪರ್ಸನಲ್ ವಿಡಿಯೋ, ಆಡಿಯೋಗಳು ಇದೆ. ಆದಿಲ್ ಖಾನ್ ದೊಡ್ಡ ಸುಳ್ಳುಗಾರ ಎಂದು ಸೀರಿಯಸ್ ಆರೋಪಗಳನ್ನು ಮಾಡಿದ್ದರು.

ಇನ್ನೂ ಇದೀಗ ರಾಖಿ ಸಾವಂತ್ ಮತ್ತೊಮ್ಮೆ ಪ್ರೀತಿಗೆ ಬಿದ್ದದ್ದಾರಂತೆ. ನನಗೆ ಒಬ್ಬರು ಪರಿಚಯವಾಗಿದ್ದಾರೆ. ಆತ ತುಂಬಾ ಒಳ್ಳೆಯ ವ್ಯಕ್ತಿ. ಆದರೆ ಆತನೊಂದಿಗೆ ಜೀವನ ಹಂಚಿಕೊಳ್ಳಲು ನಾನು ಸಿದ್ದವಾಗಿಲ್ಲ. ನಾನು ಈಗಾಗಲೇ ಮೊದಲ ಮದುವೆಯ ಕಾರಣದಿಂದ ತುಂಭಾನೆ ಸಮಸ್ಯೆಯನ್ನು ಅನುಭವಿಸಿದ್ದೆ. ಬಳಿಕ ಮತ್ತೊಂದು ಮದುವೆಯ ಕಾರಣದಿಂದ ಮತ್ತೆ ಸಮಸ್ಯೆಗೆ ಸಿಲುಕಿದ್ದೆ. ಆ ಡಿಪ್ರೆಷನ್ ನಿಂದ ಹೊರಬರಲು ನಾನು ದುಬೈಗೆ ಹೋಗಿ ಬಂದೆ. ಸದ್ಯ ನಾನು ತುಂಬಾ ಸಂತೋಷದಿಂದ ಇದ್ದೀನಿ. ನಮ್ಮ ಜೀವನದಲ್ಲಿ ನಮ್ಮನ್ನು ನೋಯಿಸುವವರು ಇರುತ್ತಾರೆ. ಗಾಯದ ಮೇಲೆ ಖಾರ ಹಾಕುತ್ತಿರುತ್ತಾರೆ. ಆದರೆ ಆ ಗಾಯಕ್ಕೆ ಮುಲಾಮು ಹಾಕುವವರೂ ಸಹ ಕೆಲವರು ಇರುತ್ತಾರೆ. ಅವರನ್ನು ಬಿಡದೇ ನಮ್ಮೊಂದಿಗೆ ಇಟ್ಟುಕೊಂಡರೇ ನಮಗೆ ಒಳ್ಳೆಯದು ಎಂದು ಹೇಳಿದ್ದಾರೆ. ಈ ಕಾರಣದಿಂದ ಆಕೆ ಮತ್ತೆ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಚರ್ಚೆ ಶುರುವಾಗಿದೆ.

ಇನ್ನೂ ರಾಖಿ ಸಾವಂತ್ ಆದಿಲ್ ನನ್ನು ಪ್ರೀತಿ ಮಾಡಿದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇನ್ನೂ ರಾಖಿ ಹೊರಬಂದರೇ ಸಾಕು ಪಾಪರಾಜಿಗಳು ಆಕೆಯ ಹಿಂದೆ ಬೀಳುತ್ತಿರುತ್ತಾರೆ. ಇನ್ನೂ ಈಗಾಗಲೇ ಆದಿಲ್ ಜೊತೆಗೆ ವಿಚ್ಚೇದನಕ್ಕೆ ಮುಂದಾಗಿದ್ದು, ಆಕೆ ವಿಚ್ಚೇದನಕ್ಕಾಗಿ ಕಾಯುತ್ತಿದ್ದಾರೆ.