ಯೋಗರಾಜ್ ಭಟ್ಟರ ಗರಡಿ ಸಿನೆಮಾ ಹೊಡಿರೆಲೆ ಹಲಗಿ ಹಾಡಿನಲ್ಲಿ ಭರ್ಜರಿಯಾಗಿ ಕುಣಿದ ನಿಶ್ವಿಕಾ ನಾಯ್ಡು…..!

Follow Us :

ಸ್ಯಾಂಡಲ್ ವುಡ್ ಸಿನಿರಂಗದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿದೇರ್ಶನದ ಗರಡಿ ಸಿನೆಮಾ ಸೆಟ್ಟೇರಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಈ ಸಿನೆಮಾದ ಹೊಡಿರೆಲೆ ಹಲಗಿ ಎಂಬ ಹಾಡು ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ಹಾಡನ್ನು ಉತ್ತರ ಕರ್ನಾಟಕದ ಸೊಗಡಿನಲ್ಲಿ ಯೋಗರಾಜ್ ಭಟ್ ರವರೇ ಬರೆದಿದ್ದಾರೆ. ಈ ಹಾಡಿನಲ್ಲಿ ನಿಶ್ವಿಕಾ ನಾಯ್ಡು ಭರ್ಜರಿಯಾಗಿ ನೃತ್ಯ ಮಾಡಿದ್ದಾರೆ. ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂಬಂತೆ ಮಾದಕ ನೃತ್ಯದ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದಿದ್ದಾರೆ.

ಕನ್ನಡದ ಯಂಗ್ ಬ್ಯೂಟಿ ನಿಶ್ವಿಕಾ ನಾಯ್ಡು ಒಳ್ಳೆಯ ಡ್ಯಾನ್ಸರ್‍ ಎಂದು ಹೇಳಬಹುದಾಗಿದೆ. ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದು, ಆ ಸಿನೆಮಾಗಳ ಮೂಲಕ ಒಳ್ಳೆಯ ಕ್ರೇಜ್ ಸಹ ಪಡೆದುಕೊಂಡಿದ್ದಾರೆ. ಕೆಲವೊಂದು ಸಿನೆಮಾಗಳಲ್ಲಿ ಭರ್ಜರಿಯಾಗಿ ಕುಣಿದಿದ್ದಾರೆ. ಇದೀಗ ಆಕೆ ಗರಡಿ ಎಂಬ ಸಿನೆಮಾದಲ್ಲೂ ಸಹ ಸ್ಪೇಷಲ್ ಸಾಂಗ್ ನಲ್ಲಿ ಒಳ್ಳೆಯ ನೃತ್ಯ ಮಾಡಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ರವರು ಬರೆದಂತಹ ಹೊಡಿರೆಲೆ ಹಲಗಿ ಎಂಬ ಲಿರಿಕಲ್ ವಿಡಿಯೋ ಒಂದು ಜೂ.14 ರಂದು ಬಿಡುಗಡೆಯಾಗಿದೆ. ಈ ವಿಡಿಯೋದಲ್ಲಿ ನಿಶ್ವಿಕಾ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಇದರ ಜೊತೆಗೆ ಮೇಕಿಂಗ್ ವಿಡಿಯೋ ಸಹ ಹಂಚಿಕೊಂಡಿದ್ದಾರೆ.  ಇನ್ನೂ ಎ.ಹರ್ಷ ಈ ಹಾಡಿಗೆ ನೃತ್ಯ ನಿರ್ದೇಶಕರಾಗಿದ್ದಾರೆ. ಆಕೆಯ ಈ ಮಾದಕ ನೃತ್ಯ ಪಡ್ಡೆ ಹುಡುಗರಿಗೆ ಕಿಕ್ಕೇರಿಸುವಂತಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಡಿಫರೆಂಟ್ ನಿರ್ದೇಶಕರೆಂದು ಯೋಗರಾಜ್ ಭಟ್ ರವರನ್ನು ಕರೆಯಬಹುದಾಗಿದೆ. ಅವರ ಸಿನೆಮಾಗಳಲ್ಲಿ ಎಲ್ಲವೂ ಒಳಗೊಂಡಿರುತ್ತದೆ. ಯಾರೂ ಊಹಿಸಿದಂತಹ ಪದಪುಂಜಗಳ ಮೂಲಕ ವಿಶೇಷವಾದ ಸಾಹಿತ್ಯ ಸಹ ಬರೆಯುತ್ತಾರೆ. ಅವರ ಪ್ರತಿಯೊಂದು ಸಿನೆಮಾದಲ್ಲೂ ಯೋಗರಾಜ್ ಭಟ್ ರ ಸಾಹಿತ್ಯದ ಹಾಡು ತುಂಬಾನೆ ಫೇಮಸ್ ಆಗಿರುತ್ತದೆ. ಈ ಹಾದಿಯಲ್ಲೇ ಗರಡಿ ಸಿನೆಮಾದಲ್ಲೂ ಸಹ ಭಟ್ಟರು ಹೊಡಿರೆಲೆ ಹಲಗಿ ಎಂಬ ಹಾಡನ್ನು ಬರೆದಿದ್ದಾರೆ. ಈ ಹಾಡು ಉತ್ತರ ಕರ್ನಾಟಕದ ಸೊಗಡಿನಲ್ಲಿ ಬರೆದಿದ್ದಾರೆ ಇನ್ನೂ ಹಾಡಿನ ಚಿತ್ರೀಕರಣಕ್ಕಾಗಿ ವಿಶೇಷ ಸೆಟ್ ಗಳನ್ನು ಸಹ ಹಾಕಲಾಗಿತ್ತು. ಇದೀಗ ಈ ಹಾಡು ಕನ್ನಡ ಸಿನಿಮಾ ರಸಿಕರನ್ನು ಸೆಳೆಯುತ್ತಿದೆ.

ಇನ್ನೂ ಈ ಸಿನೆಮಾ ಸೌಮ್ಯ ಫಿಲ್ಮಂಸ್ ಹಾಗೂ ಕೌರವ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದೆ. ಈ ಸಿನೆಮಾದಲ್ಲಿ ಸೂರ್ಯ, ಬಿಸಿ ಪಾಟೀಲ್, ಧರ್ಮಣ್ಣ, ಪೃಥ್ವಿ ಶಾಮನೂರು ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಇನ್ನೂ ನಿಶ್ವಿಕಾ ನಾಯ್ಡು ರವರನ್ನು ಡ್ಯಾನ್ಸಿಂಗ್ ಡಾನ್ ಎಂದು ಚಿತ್ರತಂಡದವರು ಪ್ರಶಂಸೆ ಸಹ ಮಾಡಿದ್ದಾರೆ.