Film News

ಡಿಸೈನರ್ ಡ್ರೆಸ್ ನಲ್ಲಿ ಮೈಲಾಕಾ ರನ್ನು ಈ ರೀತಿ ನೋಡಿದರೇ ಆಕೆಗೆ ಅಷ್ಟು ವಯಸ್ಸಾಗಿದೆ ಎನ್ನಲು ಸಾಧ್ಯವೇ ಇಲ್ಲ ಎಂದ ಅಭಿಮಾನಿಗಳು….!

ಬಾಲಿವುಡ್ ಸಿನಿರಂಗದಲ್ಲಿ ಗ್ಲಾಮರ್‍ ಪ್ರದರ್ಶನಕ್ಕೆ ಮೊದಲ ಆದ್ಯತೆ ಎನ್ನಬಹುದಾಗಿದೆ. ವಯಸ್ಸಾದರೂ ಸಹ ಗ್ಲಾಮರ್‍ ಮೂಲಕ ಅನೇಕ ನಟಿಯರು ಅವಕಾಶಗಳನ್ನು ಪಡೆದುಕೊಳ್ಳುತ್ತಿರುತ್ತಾರೆ. ಸಿನೆಮಾಗಳಲ್ಲಿ ಓವರ್‍ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಯಾವುದೇ ಅಡ್ಡಿಯಿಲ್ಲ ಎಂಬಂತೆ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಸೀನಿಯರ್‍ ಬ್ಯೂಟಿ ಮಲೈಕಾ ಅರೋರ ಸಹ ಹಾಟ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳನ್ನು ನೋಡಿದರೇ ಆಕೆಗೆ ವಯಸ್ಸಾಗಿದೆ ಎಂದು ಅನ್ನಿಸುವುದಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.

ಬಾಲಿವುಡ್ ನಲ್ಲಿ ಐಟಂ ಬಾಂಬ್ ಎಂದೇ ಖ್ಯಾತಿ ಪಡೆದುಕೊಂಡ ಮಲೈಕಾ ಎರಡು ದಶಕಗಳಿಂದ ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಆಕೆ ಕಾಣಿಸಿಕೊಂಡ ಅನೇಕ ಹಾಡುಗಳು ಆಲ್ ಟೈಮ್ ಹಿಟ್ಸ್ ಆಗಿದೆ. ಇಂದಿಗೂ ಸಹ ಪ್ರಚಲಿತದಲ್ಲಿವೆ. ಇನ್ನೂ ತೆಲುಗಿನಲ್ಲಿ ಪವನ್ ಕಲ್ಯಾಣ್ ರವರ ಗಬ್ಬರ್‍ ಸಿಂಗ್ ಸಿನೆಮಾದಲ್ಲೂ ಸಹ ಐಟಂ ಸಾಂಗ್ ಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದರು. ಕಳೆದ 1998ರಲ್ಲಿ ಮಲೈಕಾ ಸಲ್ಮಾನ್ ಖಾನ್ ತಮ್ಮ ಅರ್ಬಾಜ್ ಖಾನ್ ಜೊತೆ ವಿವಾಹವಾದರು. ಸುಮಾರು ವರ್ಷಗಳ ಕಾಲ ಜೀವನ ಸಾಗಿಸಿ 2017 ರಲ್ಲಿ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನಕ್ಕೂ ಮುಂಚೆ ಆಕೆ ಬಾಲಿವುಡ್ ಯಂಗ್ ಹಿರೋ ಅರ್ಜುನ್ ಕಪೂರ್‍ ಜೊತೆಗೆ ಅಫೈರ್‍ ಇತ್ತು ಎಂದು ಸಹ ಹೇಳಲಾಗಿದೆ. ಸದ್ಯ ಮಲೈಕಾ ಹಾಗೂ ಅರ್ಜುನ್ ಕಪೂರ್‍ ಬಹಿರಂಗವಾಗಿಯೇ ತಿರುಗಾಡುತ್ತಿದ್ದಾರೆ.

ನಟಿ ಮಲೈಕಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಸದ್ಯ ಮಲೈಕಾ ಮಾಡಲ್ ಆಗಿ, ಕಿರುತೆರೆ ಶೋಗಳಲ್ಲಿ ಭಾಗಿಯಾಗುತ್ತಿದ್ದಾರೆ. ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನೂ ಇದೀಗ ಹಂಚಿಕೊಂಡ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಡಿಸೈನರ್‍ ಬಾಡಿಕಾನ್ ಡ್ರೆಸ್ ನಲ್ಲಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಈ ಮಾದಕತೆ ತುಂಬಿದ ಪೊಟೋಗಳನ್ನು ನೋಡಿದರೇ ಆಕೆಗೆ 48 ವರ್ಷ ವಯಸ್ಸಾಗಿದೆ ಎನ್ನಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯಗಳು ಕೆಲ ಅಭಿಮಾನಿಗಳಿಂದ ಕೇಳಿಬರುತ್ತಿದೆ. ಆಕೆ ತನ್ನ ವಯಸ್ಸು ಹೆಚ್ಚಾಗದಂತೆ ಪ್ರತಿನಿತ್ಯ ಕಠಿಣವಾದ ವ್ಯಾಯಾಮ, ಯೋಗ ಮಾಡುತ್ತಾ ತನ್ನ ಗ್ಲಾಮರ್‍ ಕಾಪಾಡಿಕೊಳ್ಳುತ್ತಿದ್ದಾರೆ.

ಇನ್ನೂ ಮಲೈಕಾ ಸದ್ಯ ಮಾಡಲ್ ಆಗಿ, ಕಿರುತೆರೆ ಶೋಗಳಲ್ಲಿ ಜಡ್ಜ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಾಲಿವುಡ್ ನಟ ಅರ್ಜುನ್ ಕಪೂರ್‍ ಹಾಗೂ ನಟಿ ಮಲೈಕಾ ಅರೋರ ಪ್ರೇಮ ಪಯಣ ಸಾಗಿಸುತ್ತಿದ್ದು, ಒಪೆನ್ ಆಗಿಯೇ ಊರೂರು ಸುತ್ತಾಡುತ್ತಿದ್ದಾರೆ. ಇನ್ನೂ ಮಲೈಕಾಗಿಂತ ಅರ್ಜುನ್ ಕಪೂರ್‍ ಚಿಕ್ಕವನು. ಶೀಘ್ರದಲ್ಲೇ ಈ ಜೋಡಿಯ ಮದುವೆ ಸಹ ನಡೆಯಲಿದೆ ಎಂದು ಹೇಳಲಾಗುತ್ತಿದ್ದು, ಅವರಿಬ್ಬರ ಮದುವೆ ನಡೆದರೇ ಬಾಲಿವುಡ್ ನಲ್ಲಿ ಸಂಚಲನ ಸೃಷ್ಟಿಯಾಗಲಿದೆ ಎಂದು ಹೇಳಬಹುದಾಗಿದೆ.

Most Popular

To Top