ತಮಿಳು ನಟಿ ಜ್ಯೋತಿಕಾ ಬಗ್ಗೆ ಬಾಲಿವುಡ್ ನಟಿ ಕಂಗನಾ ಇಂಟ್ರಸ್ಟಿಂಗ್ ಕಾಮೆಂಟ್ಸ್, ನನಗೆ ಅಷ್ಟು ಸೀನ್ ಇಲ್ಲ ಎಂದು ನಟಿ….!

Follow Us :

ಬಾಲಿವುಡ್ ಸ್ಟಾರ್‍ ನಟ ಕಂಗನಾ ರಾಣವತ್ ರನ್ನು ಫೈರ್‍ ಬ್ರಾಂಡ್ ಎಂತಲೇ ಕರೆಯುತ್ತಾರೆ. ಆಕೆಗೆ ಇಷ್ಟವಾಗದ ಎಂತಹುದೇ ವಿಚಾರವಿರಲಿ, ಎಂತಹ ವ್ಯಕ್ತಿಯಾಗಲಿ ನೇರವಾಗಿ ಕಾಮೆಂಟ್ ಮಾಡುವ ವ್ಯಕ್ತಿತ್ವ ಹೊಂದಿದ್ದಾರೆ. ದೊಡ್ಡ ದೊಡ್ಡ ರಾಜಕಾರಣಿಗಳಿಂದ, ದೊಡ್ಡ ಸ್ಟಾರ್‍ ನಟರನ್ನೂ ನೇರವಾಗಿ ಟಾರ್ಗೆಟ್ ಮಾಡುತ್ತಾ ಬಾಲಿವುಡ್ ನಲ್ಲಿ ಕಾಂಟ್ರವರ್ಸಿ ಕ್ವೀನ್ ಎಂತಲೇ ಖ್ಯಾತಿ ಸಹ ಪಡೆದುಕೊಂಡಿದ್ದಾರೆ. ಜೊತೆಗೆ ಆಗಾಗ ಸಿನೆಮಾ ಕಲಾವಿದರ ಪ್ರತಿಭೆಯನ್ನು ಸಹ ಮೆಚ್ಚುತ್ತಾರೆ. ಇದೀಗ ಕಾಲಿವುಡ್ ನಟಿ ಜ್ಯೂತಿಕಾ ರವರ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸದ್ಯ ನಟಿ ಕಂಗನಾ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಕೆ ಬಾಲಿವುಡ್ ಸಿನೆಮಾಗಳಿಗಿಂತ ಹೆಚ್ಚಾಗಿ ಸೌತ್ ಸಿನೆಮಾಗಳ ಮೇಲೆ ದೃಷ್ಟಿಯನ್ನಿಟ್ಟಿದ್ದಾರೆ. ಅದರಲ್ಲೂ ತಮಿಳು ಸಿನೆಮಾಗಳ ಮೇಲೆ ಹೆಚ್ಚಿನ ಪೋಕಸ್ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ತೆಲುಗಿನಲ್ಲಿ ಪ್ರಭಾಸ್ ಜತೆಗೆ ಏಕ್ ನಿರಂಜನ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕಂಗನಾ, ಬಳಿಕ ಬಾಲಿವುಡ್ ಗೆ ಹಾರಿಬಿಟ್ಟರು. ಬಳಿಕ ಬಾಲಿವುಡ್ ನಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು. ತಮಿಳಿನಲ್ಲೂ ಸಹ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಇದೀಗ ಚಂದ್ರಮುಖಿ ಸೀಕ್ವೇಲ್ ನಲ್ಲಿ ಕಂಗನಾ ನಟಿಸುತ್ತಿದ್ದಾರೆ. ಈ ಸಿನೆಮಾ ಕಳೆದ 2005ರಲ್ಲಿ ತೆರೆಕಂಡ ಚಂದ್ರಮುಖಿ ಸಿನೆಮಾದ ಸೀಕ್ವೆಲ್ ಆಗಿದೆ. ಸದ್ಯ ಈ ಸಿನೆಮಾ ಶೂಟಿಂಗ್ ಹಂತದಲ್ಲಿದೆ. ಇನ್ನೂ ಈ ಸಿನೆಮಾದ ಬಗ್ಗೆ ಕಂಗನಾ ಕೆಲವೊಂದು ವಿಚಾರಗಳನ್ನು ಮಿಡಿಯಾದೊಂದಿಗೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಚಂದ್ರಮುಖಿ ಸಿನೆಮಾದಲ್ಲಿ ನಟಿಸಿದ್ದಂತಹ ಜ್ಯೋತಿಕಾ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ.

ನಟಿ ಕಂಗನಾ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಚಂದ್ರಮುಖಿ ಸಿನೆಮಾದಲ್ಲಿ ಜ್ಯೋತಿಕಾ ನಟನೆಯ ಬಗ್ಗೆ ಮಾತನಾಡಿದ್ದಾರೆ. ಜ್ಯೋತಿಕಾ ಆ ಸಿನೆಮಾದಲ್ಲಿ ತುಂಬಾ ಅದ್ಬುತವಾಗಿ ನಟಿಸಿದ್ದಾರೆ. ಆಕೆಗೆ ಸರಿಯಾಗಿ ತನಗೆ ಮಾತ್ರವಲ್ಲ ಬೇರೆ ಯಾರಿಗೂ ಸಹ ಸಾಧ್ಯವಾಗುವುದಿಲ್ಲ. ಚಂದ್ರಮುಖಿ-2 ಸಿನೆಮಾದಲ್ಲಿ ನನ್ನ ನಟನೆ ಜ್ಯೋತಿಕಾ ರವರಂತೆ ಇರುವುದಿಲ್ಲ. ಚಂದ್ರಮುಖಿ ಸಿನೆಮಾವನ್ನು ನಿರ್ದೇಶನ ಮಾಡಿದಂತಹ ನಿರ್ದೇಶಕರೇ ಚಂದ್ರಮುಖಿ-2 ಸಿನೆಮಾವನ್ನು ಸಹ ನಿರ್ದೇಸನ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ನಟ, ನಿರ್ದೆಶಕ, ಕೊರಿಯೋಗ್ರಾಫರ್‍ ರಾಘವ ಲಾರೆನ್ಸ್ ನಾಯಕನಾಗಿ ನಟಿಸುತ್ತಿದ್ದಾರೆ.

ಇನ್ನೂ ಚಂದ್ರಮುಖಿ-2 ಸಿನೆಮಾದಲ್ಲಿ ಮೊದಲಿಗೆ ಜ್ಯೋತಿಕಾರವರನ್ನೇ ಅಪ್ರೋಚ್ ಮಾಡಿದ್ದರಂತೆ. ಆದರೆ ಜ್ಯೋತಿಕಾ ನಟಿಸಲು ಒಪ್ಪಿಕೊಳ್ಳಲಿಲ್ಲವಂತೆ. ಈ ಕಾರಣದಿಂದ ಆಕೆಯ ಬದಲಿಗೆ ಕಂಗನಾ ರಾಣವತ್ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಇನ್ನೂ ಕಾಜಲ್ ಅಗರ್ವಾಲ್ ರವರನ್ನು ಸಹ ಈ ಸಿನೆಮಾಗೆ ಕರೆತರುವ ಪ್ರಯತ್ನ ಮಾಡಲಾಗಿತ್ತು ಎಂದು ಸಹ ಹೇಳಲಾಗಿದೆ. ಈ ಹಿಂದೆ ಕಂಗನಾ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಬಯೋಪಿಕ್ ನಲ್ಲಿ ನಟಿಸಿದ್ದರು. ಇದೀಗ ದೇಶದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಪಾತ್ರದಲ್ಲಿ ಎಮರ್ಜೆನ್ಸಿ ಸಿನೆಮಾದಲ್ಲಿ ನಟಿಸಿದ್ದು ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.