Film News

ಆತನನ್ನು ಪ್ರೀತಿಸಿ ಮೋಸಹೋದೆ, ನನ್ನ ಹೃದಯ ಚೂರು ಚೂರು ಮಾಡಿದ ಎಂದ ಬಾಲಿವುಡ್ ನಟಿ ವಿದ್ಯಾಬಾಲನ್, ಎಮೋಷನಲ್ ಆದ ನಟಿ…..!

ಹಿಂದಿ ಸಿನಿರಂಗದ ಬಹುಬೇಡಿಕೆ ನಟಿಯರಲ್ಲಿ ವಿದ್ಯಾಬಾಲನ್ ಸಹ ಒಬ್ಬರಾಗಿರುತ್ತಾರೆ. ಡರ್ಟಿ ಪಿಕ್ಚರ್‍, ಷೆರ್‍ನಿ, ಕಹಾನಿ ಮೊದಲಾದ ಸಿನೆಮಾಗಳ ಮೂಲಕ ಫೇಮಸ್ ಆದ ನಟಿ ವಿದ್ಯಾಬಾಲನ್ ಸದ್ಯ ಲೇಡಿ ಓರಿಯೆಂಟೆಡ್ ಸಿನೆಮಾಗಳ ಮೇಲೆ ಹೆಚ್ಚು ಪೋಕಸ್ ಇಟ್ಟಿದ್ದಾರೆ. ಇನ್ನೂ ವಿದ್ಯಾ ಬಾಲನ್ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತನ್ನ ಮೊದಲ ಬಾಯ್ ಫ್ರೆಂಡ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಬಾಲಿವುಡ್ ನಟಿ ವಿದ್ಯಾಬಾಲನ್ ಮುಂದಿನಂತೆ ಹೆಚ್ಚಾಗಿ ಸಿನೆಮಾಗಳನ್ನು ಮಾಡುತ್ತಿಲ್ಲ. ಮದುವೆಯಾಗಿ ಆಕೆ ವೈವಾಹಿಕ ಜೀವನದ ಜೊತೆಗೆ ಆಗಾಗ ಸಣ್ಣಪುಟ್ಟ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾದ ವಿದ್ಯಾ ಬಾಲನ್ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ತನ್ನ ಮೊದಲ ಬಾಯ್ ಫ್ರೆಂಡ್ ಬಗ್ಗೆ ಆಕೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಮಾತನಾಡುತ್ತಾ ನಾನು ಒಬ್ಬನ್ನನ್ನು ಪ್ರೀತಿಸಿದ್ದೆ. ಆದರೆ ಆತ ನನ್ನನ್ನು ಮೋಸ ಮಾಡಿದ. ನಾನು ಡೇಟಿಂಗ್ ಮಾಡಿದಂತಹ ಮೊದಲ ವ್ಯಕ್ತಿ ನನ್ನನ್ನು ಮೋಸ ಮಾಡಿದ. ನಮ್ಮ ನಡುವೆ ಬ್ರೇಕಪ್ ಆಯ್ತು.  ಪ್ರೇಮಿಕರ ದಿನದಂದು ಆತನೊಂದಿಗೆ ಕಾಲೇಜಿನಲ್ಲಿ ಗಲಾಟೆ ಮಾಡಿಕೊಂಡೆ. ಆತ ನನ್ನ ಮಾಜಿ ಪ್ರೇಯಸಿಯನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಹೇಳಿದ. ಅದರಿಂದ ನನ್ನ ಹೃದಯ ಚುರಾಯ್ತು. ನಾನು ಕೆಲವರನ್ನು ಪ್ರೀತಿಸಿದೆ. ಆದರೆ ಯಾರೊಂದಿಗೂ ಡೀಪ್ ರಿಲೇಷನ್ ಶಿಪ್ ಇಟ್ಟುಕೊಂಡಿರುಲಿಲ್ಲ ಎಂದಿದ್ದಾರೆ.

ಬಳಿಕ ನಾನು ಹಿರೋಯಿನ್ ಆದೆ. ಈ ವೇಳೆ ಕೆಲವು ಹಿರೋಗಳು ನನ್ನ ಜೊತೆಗೆ ಸಿನೆಮಾ ಮಾಡೋಕೆ ಇಷ್ಟಪಟ್ಟಿರಲಿಲ್ಲ. ಕೆಲವು ನಿರ್ಮಾಪಕರು ನನ್ನನ್ನು ಐರನ್ ಲೆಗ್ ಎಂದು ಹೇಳುತ್ತಿದ್ದರು. ನನಗೆ ಲೇಡಿ ಓರಿಯೆಂಟೆಡ್ ಸಿನೆಮಾಗಳು ತುಂಬಾ ಉತ್ಸಾಹವನ್ನು ನೀಡುತ್ತದೆ. ಅಂತಹ ಸಿನೆಮಾಗಳನ್ನು ಮಾಡಿದರೇ ಜನರು ಮೆಚ್ಚುವುದಿಲ್ಲ ಎಂದು ನಾನು ಹೇಳೊಲ್ಲ. ಮಹಿಳೆಯರು ತುಂಬಾ ಹೈಲೈಟ್ ಆದರೇ ಹಿರೋಗಳು ಸಂತೋಷ ಪಡೊಲ್ಲ. ನನ್ನ ಜೊತೆಗೆ ನಟಿಸದೇ ಇದ್ದರೇ ಅವರಿಗೆ ನಷ್ಟ ಎಂದು ಹೇಳಿದ್ದಾರೆ. ಇನ್ನೂ ನಟಿ ವಿದ್ಯಾಬಾಲನ್ ದೋ ಔರ್‍ ದೋ ಪ್ಯಾರ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಕಾಮಿಡಿ ರೊಮ್ಯಾಂಟಿಕ್ ಸಿನೆಮಾ ಆಗಿದ್ದು, ವಿದ್ಯಾಬಾಲನ್ ಜೊತೆಗೆ ಬಿಕಿನಿ ಬ್ಯೂಟಿ ಇಲಿಯಾನಾ ಸಹ ನಟಿಸುತ್ತಿದ್ದಾರೆ ಎನ್ನಲಾಗಿದೆ.

Most Popular

To Top