ಆತನೊಂದಿಗೆ ಡೇಟಿಂಗ್ ಕಾರಣದಿಂದಲೇ ಸ್ಲಿಮ್ ಆದೆ ಎಂದು ಅಭಿಮಾನಿಗಳ ತಲೆಗೆ ಹುಳು ಬಿಟ್ಟ ಬ್ಯೂಟಿ ರಾಶಿ ಖನ್ನಾ……!

Follow Us :

ಬಹುಬೇಡಿಕೆ ನಟಿ ರಾಶಿ ಖನ್ನಾ ಊಹಲು ಗುಸಗುಸಲಾಡೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನೆಮಾದ ಮೂಲಕವೇ ಆಕೆ ಅನೇಕರ ಯುವಕರ ಕನಸಿನ ರಾಣಿಯಾದರು. ಇದೀಗ ಬಾಲಿವುಡ್ ನಲ್ಲೂ ಸಹ ಕೆಲವೊಂದು ಸಿನೆಮಾಗಳನ್ನು ಮಾಡುತ್ತಿದ್ದಾರೆ. ಮೊದಲಿಗೆ ಸಂಪ್ರದಾಯಬದ್ದವಾಗಿಯೇ ಕಾಣಿಸಿಕೊಂಡ ರಾಶಿ ಖನ್ನಾ ಇದೀಗ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಆತನೊಂದಿಗೆ ಡೇಟಿಂಗ್ ಮಾಡಿದ ಕಾರಣದಿಂದಲೇ ವೈಟ್ ಲಾಸ್ ಆದೆ ಎಂದು ರಾಶಿ ಖನ್ನಾ ಹೇಳಿದ್ದು, ರಾಶಿ ಖನ್ನಾ ಪ್ರೀತಿಗೆ ಬಿದ್ದಿದ್ದಾರಾ ಎಂಬ ಚರ್ಚೆಗಳು ಶುರುವಾಗುವಂತೆ ಮಾಡಿದ್ದಾರೆ.

ಸ್ಟಾರ್‍ ನಟಿ ರಾಶಿ ಖನ್ನಾ ಕೆಲವು ವರ್ಷಗಳ ಕಾಲ ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಆಕೆ ಭಾರಿ ಕ್ರೇಜ್ ಸಂಪಾದಿಸಿಕೊಂಡರು. ಈ ಹಿಂದೆ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದ ನಟಿ ರಾಶಿ ಖನ್ನಾ ಇದೀಗ ತನ್ನ ದಿಕ್ಕನ್ನು ಬದಲಿಸಿದ್ದಾರೆ.  ಆದರೆ ಸರಿಯಾದ ಅವಕಾಶಗಳನ್ನು ಪಡೆದುಕೊಳ್ಳಲು ಗ್ಲಾಮರ್‍ ಶೋ ಮಾಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಬಳಿಕ ಮತಷ್ಟು ಹಾಟ್ ಅವತಾರ ತಾಳಿದ್ದಾರೆ. ಸದ್ಯ ಸೌತ್ ಸಿನೆಮಾಗಳ ಜೊತೆಗೆ ಬಾಲಿವುಡ್ ನಲ್ಲಿ ಸಿನೆಮಾಗಳು ವೆಬ್ ಸಿರೀಸ್ ಗಳ ಮೂಲಕ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ಇನ್ನೂ ರಾಶಿ ಸಂದರ್ಶನವೊಂದರಲ್ಲಿ ತನ್ನ ಆರೋಗ್ಯದ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ. ಡೇಟಿಂಗ್ ಕಾರಣದಿಂದ ಸ್ಲಿಮ್ ಆಗಿದ್ದು, ಬ್ರೇಕಪ್ ಕಾರಣದಿಂದ ತೂಕ ಹೆಚ್ಚಾಯ್ತು ಎಂದು ಆಕೆ ತಿಳಿಸಿದ್ದಾರೆ. ಆಕೆ ಮಾತನಾಡುತ್ತಾ ಈ ಹಿಂದೆ ನಾನು ವ್ಯಕ್ತಿಯೊಬ್ಬರ ಜೊತೆಗೆ ಡೇಟಿಂಗ್ ನಲ್ಲಿದ್ದೆ. ಆತನೊಂದಿಗೆ ಬ್ರೇಕಪ್ ಆಯ್ತು. ಆ ಡಿಪ್ರೆಷನ್ ನಿಂದ ಹಾಗೂ ಥೈರಾಯಿಡ್ ಸಮಸ್ಯೆಯಿಂದ ಭಾರಿ ದಪ್ಪವಾದೆ. ಭಾರಿ ವರ್ಕೌಟ್ಸ್ ಸೇರಿದಂತೆ ಅನೇಕ ಪ್ರಯತ್ನಗಳನ್ನು ಮಾಡಿದರೂ ತೂಕ ಕಡಿಮೆಯಾಗಲಿಲ್ಲ. ಜಿಮ್ ಕೋಚ್ ಸಹ ಬದಲಿಸಿದ್ದೆ. ಆದರೂ ಸಹ ಸಣ್ಣ ಆಗಲಿಲ್ಲ. ದಪ್ಪ ಆದ ಹಿನ್ನೆಲೆಯಲ್ಲಿ ನನಗೆ ಸಿನೆಮಾ ಅವಕಾಶಗಳೂ ಸಹ ಕಡಿಮೆಯಾದವು. ಮತ್ತೆ ನನ್ನನ್ನು ಅರ್ಥ ಮಾಡಿಕೊಳ್ಳುವಂತಹ  ವ್ಯಕ್ತಿ ಸಿಕ್ಕಿದ್ದಾನೆ. ಆತನೊಂದಿಗೆ ಡೇಟಿಂಗ್ ಶುರು ಮಾಡಿದ ಬಳಿಕ ನಾನು ಸ್ಲಿಮ್ ಆಗಿದ್ದಾನೆ. ಅಂದುಕೊಂಡಂತೆ ನನ್ನನ್ನು ನಾನು ಬದಲಿಸಿಕೊಂಡಿದ್ದೇನೆ ಎಂದು ರಾಶಿ ಖನ್ನಾ ಹೇಳಿದ್ದಾರೆ.

ಇದೀಗ ರಾಶಿ ಖನ್ನಾ ಹೇಳಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ರಾಶಿ ಖನ್ನಾ ಡೇಟಿಂಗ್ ಯಾರ ಜೊತೆ ನಡೆಸುತ್ತಿದ್ದಾರೆ ಎಂಬ ಚರ್ಚೆಗಳು ಶುರುವಾಗಿದ್ದು, ಆಕೆಯ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ. ಸದ್ಯ ರಾಶಿ ಖನ್ನಾ ಕೈಯಲ್ಲಿ ನಾಲ್ಕೈದು ಸಿನೆಮಾಗಳಿದ್ದು, ಹಿಂದಿಯಲ್ಲಿ ಯೋಧ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.