Film News

ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸೋಕೆ ನಾನು ನಾಚಿಕೆ ಪಡೋಲ್ಲ ಎಂದ ಆಂಡ್ರಿಯಾ, ವೈರಲ್ ಆದ ಕಾಮೆಂಟ್ಸ್……!

ಸೌತ್ ಸಿನಿರಂಗದ ನಟಿ ಆಂಡ್ರಿಯಾ ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಹ ಆಕೆ ಸೈ ಎನ್ನುತ್ತಿರುತ್ತಾರೆ. ಇನ್ನೂ ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ವಿವಾದಗಳೂ ಸಹ ಮನೆ ಮಾಡಿದೆ.  ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುವ ಈಕೆ ಇದೀಗ ಕೆಲವೊಂದು ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಮೊದಲಿಗೆ ಆಕೆ ಗಾಯಕಿಯಾಗಿ ಎಂಟ್ರಿ ಕೊಟ್ಟರು. ಬಳಿಕ ಆಕೆ ನಟಿಯಾಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ಆಕೆಯ ಹಾಡುಗಳಲ್ಲಿ ಅನೇಕವು ಸೂಪರ್‍ ಹಿಟ್ ಸಹ ಆಗಿದೆ. 2005 ರಲ್ಲಿ ತೆರೆಕಂಡ ಕಂದಾ ನಾಲ್ ಮುದಲ್ ಎಂಬ ಸಿನೆಮಾದ ಮೂಲಕ ಆಕೆ ನಟಿಯಾಗಿ ಎಂಟ್ರಿ ಕೊಟ್ಟರು. ನಟಿಯಾಗಿ ಮುಂದುವರೆಯುತ್ತಾ ಕೆಲವೊಂದು ಸಿನೆಮಾಗಳಲ್ಲಿ ಹಾಡುಗಳನ್ನು ಸಹ ಹಾಡಿದ್ದಾರೆ. ಬ್ಲಾಕ್ ಬ್ಲಸ್ಟರ್‍ ಹಿಟ್ ಪಡೆದುಕೊಂಡ ಯುಗಾನಿಕಿ ಒಕ್ಕಡು ಸಿನೆಮಾದಲ್ಲೂ ಸಹ ಒಂದು ಹಾಡನ್ನು ಆಂಡ್ರಿಯಾ ಹಾಡಿದ್ದಾರೆ. ಜೊತೆಗೆ ಆಕೆ ಹಾಟ್ ಆಗಿಯೂ ಸಹ ಈ ಸಿನೆಮಾದಲ್ಲಿ ನಟಿಸಿದ್ದಾರೆ. ತಡಕಾ, ಉತ್ತಮ ವಿಲನ್, ವಾಡಾ ಚೆನೈ, ಮಾಸ್ಟರ್‍, ವಿಶ್ವರೂಪಂ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದಾರೆ.

ಸದ್ಯ ಆಂಡ್ರಿಯಾ ತೆಲುಗು, ತಮಿಳು ಹಾಗೂ ಮಲಯಾಳ ಸೇರಿದಂತೆ ಹಲವು ಭಾಷೆಗಳಲ್ಲಿ ಆಕೆ ನಟಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ಕಥಾನಾಯಕಿಯಾಗಿಯೂ ಸಹ ಆಕೆ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ನೀಡಿದ ಕೆಲವೊಂದು ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಕಾಲಿವುಡ್ ಸ್ಟಾರ್‍ ನಟ ಧನುಷ್ ಅಭಿನಯದ ವಾಡ ಚೆನೈ ಎಂಬ ಸಿನೆಮಾದಲ್ಲಿ ಆಂಡ್ರಿಯಾ ನಿರ್ದೇಶಕ ಅಮೀರ್‍ ಪತ್ನಿಯಾಗಿ ಚಾಲೆಂಜಿಗ್ ಪಾತ್ರದಲ್ಲಿ ನಟಿಸಿದ್ದರು. ತನ್ನ ಪತಿಯನ್ನು ಕೊಲೆ ಮಾಡಿದಂತಹವರ ಮೇಲೆ ಆಕೆ ಪ್ರತಿಕಾರ ತೀರಿಸಿಕೊಳ್ಳಲು ಎದುರು ನೋಡುವಂತ ಪಾತ್ರದಲ್ಲಿ ಆಕೆ ನಟಿಸಿ ಎಲ್ಲರನ್ನೂ ರಂಜಿಸಿದ್ದರು. ಈ ಬಗ್ಗೆ ಆಕೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ.

ಇತ್ತಿಚಿಗೆ ಈ ಬಗ್ಗೆ ಆಕೆ ಮಾತನಾಡಿ ವಾಡಾ ಚೆನೈ ಸಿನೆಮಾದಲ್ಲಿನ ಒಂದು ರೊಮ್ಯಾನ್ಸ್ ದೃಶ್ಯದ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ನಾನು ಆ ದೃಶ್ಯದಲ್ಲಿ ನಟಿಸಲು ನಾಚಿಕೆ ಪಡಲಿಲ್ಲ. ಆದರೆ ಕ್ಯಾಮೆರಾಗಳ ಮುಂದೆ ಮಾಡುವ ರೊಮ್ಯಾನ್ಸ್ ಗೆ ನಿರ್ದೇಶಕ ಅಮೀರ್‍ ತುಂಬಾ ನಾಚಿಕೆ ಪಟ್ಟಿದ್ದಾರೆ ಎಂದು ಆಂಡ್ರಿಯಾ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಲು ಸಖತ್ ವೈರಲ್ ಆಗಿದೆ. ಇನ್ನೂ ಆಂಡ್ರಿಯಾ ಸದ್ಯ ಪಿಶಾಚಿ-2 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top