News

ಇಸ್ರೋ ಮತ್ತೊಂದು ಸಾಧನೆ, ಸೂರ್ಯನ ಶಕ್ತಿ ಸ್ಪೋಟವನ್ನು ಸೆರೆ ಹಿಡಿದ ಆದಿತ್ಯ L1…..!

ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಇಸ್ರೋ ಚಂದ್ರಯಾನ -3 ರ  ಸಕ್ಸಸ್ ಬೆನ್ನಲ್ಲೇ ಇಸ್ರೋ ಮತ್ತೊಂದು ಸಾಧನೆ ಮಾಡಿದೆ. ಸೂರ್ಯನ ಅಧ್ಯಯನಕ್ಕೆ ಈಗಾಗಲೇ ಆದಿತ್ಯ L1 ನೌಕೆಯನ್ನು ಕಳುಹಿಸಿದ್ದು, ಅಲ್ಲಿಂದ ಮೊದಲ ಶಕ್ತಿ ಸ್ಪೋಟವನ್ನು ಸೆರೆಹಿಡಿದಿದೆ. ಸೂರ್ಯನ ಮೇಲೆ ನಡೆಯುವಂತಹ ಸೌರ ಜ್ವಾಲೆಗಳ ಸ್ಪೋಟ ಸೆರೆಹಿಡಿದಿದೆ ಎಂದು ತಿಳಿದುಬಂದಿದೆ.

ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಆದಿತ್ಯ L1 ನೌಕೆಯನ್ನು ಕಳುಹಿಸಿದೆ. ಈ ನೌಕೆಯಲ್ಲಿ ಏಳು ಪ್ಲೇಲೋಡ್ ಗಳಿದ್ದು, ಇದರಲ್ಲಿ ಹೈಎನರ್ಜಿ L1 ಆರ್ಬಿಟಿಂಗ್ ಎಕ್ಸ್-ರೇ-ಸ್ಪೆಕ್ಟ್ರೋಮೀಟರ್‍ ಪ್ಲೇಲೋಡ್ ಸೂರ್ಯನ ಮೇಲೆ ನಡೆಯುವಂತಹ ಸೌರ ಜ್ವಾಲೆಗಳ ಸ್ಪೋಟವನ್ನು ಅ.29 ರಂದು ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಸೂರ್ಯನ ಮೇಲೆ ಎಕ್ಸ್ ಕಿರಣಗಳ ಮಾದರಿಯಲ್ಲಿ ಶಕ್ತಿ ಹಾಗೂ ವಿಕರಣವನ್ನು ಹೊರಸೂಸುತ್ತದೆ. ಈ ಸಮಯದಲ್ಲೇ ಹಠಾತ್ ಸ್ಪೋಟ ಸಂಭವಿಸಿದ್ದು, ಅದರ ತೀವ್ರತೆಯನ್ನು ಆದಿತ್ಯ L1 ದಾಖಲು ಮಾಡಿದೆ. ಈ ವೇಳೆ ಕೆಲವು ಭಾರಿ ಸ್ಪೋಟವಾಗಿದ್ದರೇ ಮತ್ತೆ ಕೆಲವು ಸ್ಪೋಟಗಳು ಸಾಮಾನ್ಯವಾಗಿರುತ್ತದೆಯಂತೆ. ಈ ಸ್ಪೋಟದ ತೀವ್ರತೆಯನ್ನು ಇಸ್ರೋ ಉಪಗ್ರಹ ದಾಖಲು ಮಾಡಿದೆ ಎನ್ನಲಾಗಿದೆ.

ಸೂರ್ಯನ ಅಧ್ಯಯನಕ್ಕಾಗಿ ಸೆ.9 ರಂದು ಆದಿತ್ಯ L1 ನೌಕೆಯನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗಿತ್ತು. PSLV-C57 ರಾಕೆಟ್ ಮೂಲಕ ಆದಿತ್ಯ L1 ನೌಕೆಯನ್ನು ಹಾರಿಸಲಾಯಿತು. ಈ ನೌಕೆ 15 ಲಕ್ಷ ಕಿ.ಮೀ ದೂರಕ್ಕೆ ಸಾಗಿ ಸೂರ್ಯನ ಎಲ್-1 ಪಾಯಿಂಟ್ ನಲ್ಲಿ ಸೂರ್ಯನ ಅಧ್ಯಯನ ನಡೆಸಲಿದೆ. ಇನ್ನೂ ಈ ದೂರಕ್ಕೆ ಕ್ರಮಿಸಲು 125 ದಿನಗಳು ಬೇಕಾಗಿದೆ. ಭೂಮಿಯಿಂದ ಸೂರ್ಯನ ದೂರ 15 ಕೋಟಿ ಕಿ.ಮೀ. ಆಗಿರುತ್ತದೆ. ಇನ್ನೂ ಈ ನೌಕೆಯಲ್ಲಿರುವ ನಾಲ್ಕು ಉಪಕರಣಗಳು ನಿರಂತರವಾಗಿ ಸೂರ್ಯನನ್ನು ವೀಕ್ಷಣೆ ಮಾಡುತ್ತಾ ಮಾಹಿತಿ ಸಂಗ್ರಹ ಮಾಡಲಿದ್ದು, ಅದರ ಬಗ್ಗೆ ಮಾಹಿತಿಯನ್ನು ಇಸ್ರೋಗೆ ರವಾನಿಸಲಿದೆ ಎನ್ನಲಾಗಿದೆ.

Most Popular

To Top