ಆ ದಿನ ನನ್ನನ್ನು ಬೇಕು ಎಂತಲೇ ಸಿಲುಕಿಸಿದ್ದರು, ಈಗಲೂ ಕಿರುಕುಳ ತಪ್ಪಿಲ್ಲ ಎಂದು ಆವೇದನೆ ವ್ಯಕ್ತಪಡಿಸಿದ ನಟಿ ಯಮುನ…..!

ತೆಲುಗು ಸಿನಿರಂಗದ ಸೀನಿಯರ್‍ ನಟಿ ಯಮುನಾ ಮೊದಲಿಗೆ ನಟಿಯಾಗಿ ಕೆರಿಯರ್‍ ಆರಂಭಿಸಿ, ಬಳಿಕ ಸೀರಿಯಲ್ ಗಳ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ವಿಧಿ, ಅನ್ವೇಷಿತಾ, ಮೌನ ಪೋರಾಟಂ, ಅಮೃತಂ ಸೇರಿದಂತೆ ಅನೇಕ ಸೀರಿಯಲ್ ಗಳ…

ತೆಲುಗು ಸಿನಿರಂಗದ ಸೀನಿಯರ್‍ ನಟಿ ಯಮುನಾ ಮೊದಲಿಗೆ ನಟಿಯಾಗಿ ಕೆರಿಯರ್‍ ಆರಂಭಿಸಿ, ಬಳಿಕ ಸೀರಿಯಲ್ ಗಳ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ವಿಧಿ, ಅನ್ವೇಷಿತಾ, ಮೌನ ಪೋರಾಟಂ, ಅಮೃತಂ ಸೇರಿದಂತೆ ಅನೇಕ ಸೀರಿಯಲ್ ಗಳ ಮೂಲಕ ಅಪಾರ ಸಂಖ್ಯೆಯ ಕಿರುತೆರೆ ಅಭಿಮಾನಿಗಳನ್ನು ಪಡೆದುಕೊಂಡರು. ಇನ್ನೂ ಈ ಹಿಂದೆ ಆಕೆ ವ್ಯಭಿಚಾರ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿದ್ದರು. ಇನ್ನೂ ಈ ಘಟನೆ ನಡೆದು ಅನೇಕ ತಿಂಗಳುಗಳು ಕಳೆದರೂ ಸಹ ಇಂದಿಗೂ ಸಹ ಆಕೆಯನ್ನು ಸೊಷಿಯಲ್ ಮಿಡಿಯಾದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ಯಮುನಾ ಆವೇದನೆಯನ್ನು ವ್ಯಕ್ತಪಡಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ನಟಿ ಯಮುನಾ ವ್ಯಭಿಚಾರ ಕೇಸ್ ಒಂದರಲ್ಲಿ ಸಿಲುಕಿಕೊಂಡಿದ್ದರು. ಆ ಸಮಯದಲ್ಲಿ ಈ ಸುದ್ದಿ ತುಂಬಾನೆ ವೈರಲ್ ಆಗಿತ್ತು. ಬೆಂಗಳೂರಿನ ಹೋಟೆಲ್ ಒಂದರಲ್ಲಿ ವ್ಯಭಿಚಾರ ಮಾಡುತ್ತಾ ಸಿಲುಕಿದ್ದರು ಎಂದು ಸುದ್ದಿಗಳು ಕೇಳಿಬಂದವು. ಬಳಿಕ ಆಕೆ ಕೋರ್ಟ್ ಮೊರೆ ಹೋಗಿ ತನಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಕ್ಲೀನ್ ಚೀಟ್ ಸಹ ಪಡೆದುಕೊಂಡರು. ಆದರೆ ಆಕೆ ವ್ಯಭಿಚಾರದಲ್ಲಿ ಸಿಲುಕಿಕೊಂಡಾಗ ಹರಿದಾಡಿದ ಸುದ್ದಿ ಈಗಲೂ ಸಹ ಆಕೆಯನ್ನು ಬೆಂಬಿಡದೇ ಕಾಡುತ್ತಿವೆ ಅಂತೆ. ಅದರಲ್ಲೂ ಸೊಷಿಯಲ್ ಮಿಡಿಯಾದಲ್ಲಿ ಮಾತ್ರ ಹೆಚ್ಚಾಗಿ ನಡೆಯುತ್ತಿವೆ ಎಂದು ತನ್ನ ಮನದಲ್ಲಿನ ಆವೇದನೆಯನ್ನು ಇನ್ಸ್ಟಾಗ್ರಾಂ ನಲ್ಲಿ ವಿಡಿಯೋ ಹಂಚಿಕೊಂಡು ಹೊರಹಾಕಿದ್ದಾರೆ.

ನಟಿ ಯಮುನಾ ತನ್ನ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತನ್ನ ಮನಸ್ಸಿನಲ್ಲಿನ ಆವೇದನೆಯನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ಯಮುನಾ ನನ್ನನ್ನು ನಾನು ತುಂಬಾನೆ ಮೋಟಿವೇಟ್ ಮಾಡಿಕೊಂಡಿದ್ದೇನೆ. ಆದರೆ ಏನೋ ತಿಳಿಯದ ಒಂದು ನೋವು ನನ್ನನ್ನು ಹಿಂಬಾಲಿಸುತ್ತಲೇ ಇದೆ. ಅದೂ ಸೋಷಿಯಲ್ ಮಿಡಿಯಾ ಮೂಲಕ. ಕೆಲವು ವರ್ಷಗಳ ಹಿಂದೆ ನಾನು ಒಂದು ಸಮಸ್ಯೆಯಲ್ಲಿ ಸಿಲುಕಿದ್ದೆ. ಆ ಸಮಸ್ಯೆಯಲ್ಲಿ ನಾನು ಏಕೆ ಸಿಲುಕಿದೆ ಎಂಬುದನ್ನು ಅನೇಕ ಸಂದರ್ಶನಗಳಲ್ಲಿ ಸಹ ಹೇಳಿದ್ದೇನೆ. ಜೊತೆಗೆ ಆ ವಿಚಾರದಲ್ಲಿ ನನಗೆ ನ್ಯಾಯಾಲಯ ಕ್ಲೀನ್ ಚೀಟ್ ಸಹ ನೀಡಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಇಂದಿಗೂ ಸಹ ನನ್ನ ಮೇಲೆ ವಿವಿಧ ರೀತಿಯ ಥಂಬನೈಲ್ ಹಾಕಿ ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಅದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನಾನು ಸಹ ನೋಡಲ್ಲ. ಅದರಲ್ಲಿ ಏನಿದೆ ಎಂಬುದನ್ನೂ ಸಹ ಎಂದೂ ನೋಡಲಿಲ್ಲ. ಆದರೆ ಆ ಥಂಬನೈಲ್ಸ್ ಮಾತ್ರ ನನಗೆ ತುಂಬಾ ನೋವು ನೀಡುತ್ತಿದೆ ಎಂದಿದ್ದಾರೆ.

ಇನ್ನೂ ಈ ವಿಚಾರದಲ್ಲಿ ನಾನು ನನ್ನನ್ನು ತುಂಬಾನೆ ಮೋಟಿವೇಟ್ ಮಾಡಿಕೊಳ್ಳುತ್ತಿದ್ದೇನೆ. ನಾನು ಸಹ ಮನುಷ್ಯಳೇ, ನನಗೂ ಸಹ ದುಃಖ ಆಗುತ್ತದೆ. ನಾನು ಸತ್ತರೂ ಸಹ ನನ್ನನ್ನು ಬಿಡದೇ ಕಿರುಕುಳ ನೀಡುತ್ತಾರೆ ಎಂದೂ ಅನ್ನಿಸುತ್ತಿದೆ. ಇನ್ನೂ ನಾನು ಏನು ಎಂಬುದು ನನ್ನ ಕುಟುಂಬಕ್ಕೂ ಗೊತ್ತು, ನನ್ನ ಅಭಿಮಾನಿಗಳಿಗೂ ಗೊತ್ತು. ತಿಳಿಯದವರು ಅರ್ಥ ಮಾಡಿಕೊಳ್ಳಿ, ಸಿನೆಮಾಗಳಲ್ಲಿ ಬರುವುದೆಲ್ಲಾ ನಿಜವಲ್ಲ. ಯಾರೂ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.