Film News

ನನ್ನ ಪ್ಯಾಂಟ್ ನೊಳಗೆ ಇಲಿ ತೂರಿದೆ ಎಂದು ಇಂಟ್ರಸ್ಟಿಂಗ್ ಪೋಸ್ಟ್ ಹಂಚಿಕೊಂಡ ಬಾಲಿವುಡ್ ಬಿಗ್ ಬಿ ಅಮಿತಾಭ್….!

ದೇಶದ ಸಿನಿರಂಗದಲ್ಲಿ ದೊಡ್ಡ ನೇಮ್, ಫೇಮ್ ಹೊಂದಿರುವ ನಟರಲ್ಲಿ ಅಮಿತಾಬ್ ಬಚ್ಚನ್ ಅಗ್ರ ಸ್ಥಾನದಲ್ಲಿದ್ದಾರೆ. ಇಂದಿಗೂ ಸಹ ಅಮಿತಾಬ್ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇಂದಿಗೂ ಸಹ ಅಮಿತಾಬ್ ರವರಿಗೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಇದೆ. ಆತನ ಅನೇಕ ಸಿನೆಮಾಗಳು ಎವರ್‍ ಗ್ರೀನ್ ಆಗಿದೆ. ಇನ್ನೂ ಅಮಿತಾಭ್ ಅಭಿನಯದ ದೋ ಔರ್‍ ದೋ ಪಾಂಚ್ ಎಂಬ ಸಿನೆಮಾ ಸಹ ಸಖತ್ ಹಿಟ್ ಹೊಡೆದಿತ್ತು. ಈ ಸಿನೆಮಾ ಬಿಡುಗಡೆಯಾಗಿ 43 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಸಿನೆಮಾವನ್ನು ನೆನಪಿಸಿಕೊಂಡು ಆಸಕ್ತಿಕರವಾದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ನಟ ಅಮಿತಾಭ್ ಬಚ್ಚನ್ ಅಭಿನಯದ ದೋ ಔರ್‍ ದೋ ಪಾಂಚ್ ಎಂಬ ಸಿನೆಮಾ ಬಿಡುಗಡೆಯಾಗಿ 43 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಮಿತಾಭ್ ಆ ಸಿನೆಮಾವನ್ನು ನೆನಪಿಸಿಕೊಂಡು ಇಂಟ್ರಸ್ಟಿಂಗ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಮಯದಲ್ಲಿ ಬೆಲ್ ಬಾಟಂ ಪ್ಯಾಂಟ್ ಧರಿಸಿದ್ದರಂತೆ. ಅಂದಿನ ಕಾಲದಲ್ಲಿ ಬೆಲ್ ಬಾಟಂ ಪ್ಯಾಂಟ್ ಗಳು ಫ್ಯಾಷಾನ್ ಆಗಿದ್ದು, ಅನೇಕ ಸಿನೆಮಾಗಳಲ್ಲಿ ಅದೇ ಇರುತ್ತಿತ್ತು. ಇನ್ನೂ ಈ ಪ್ಯಾಂಟ್ ದೊಡ್ಡದಾಗಿದ್ದ ಹಿನ್ನೆಲೆಯಲ್ಲಿ ತನ್ನ ಪ್ಯಾಂಟ್ ಒಳಗೆ ಇಲಿಯೊಂದು ತೂರಿತ್ತೆಂದು ಹೇಳಿದ್ದಾರೆ. ದೋ ಔರ್‍ ದೋ ಪಾಂಚ್ ಸಿನೆಮಾ ಬಿಡುಗಡೆಯಾಗಿ 43 ವರ್ಷ ಆಗಿದ್ದು, ಈ ಸಿನೆಮಾ ಎಂದಿಗೂ ಮರೆಯುವುದಿಲ್ಲ. ಈ ಸಿನೆಮಾ ಬಿಡುಗಡೆಯಾದ ಬಳಿಕ ಬೆಲ್ ಬಾಟಂ ಪ್ಯಾಂಟ್ ಧರಿಸಿ ಸಿನೆಮಾ ನೋಡಲು ಹೋಗಿದ್ದೆ. ಆದರೆ ಸೀಟ್ ನಲ್ಲಿ ಕುಳಿತ ಕಡಿಮೆ ಸಮಯದಲ್ಲೆ ಒಂದು ಇಲಿ ಪ್ಯಾಂಟ್ ನೊಳಗೆ ಸೇರಿಕೊಂಡಿತ್ತು ಎಂದು ಈ ಹಾಸ್ಯ ಘಟನೆಯನ್ನು ಹಂಚಿಕೊಂಡಿದ್ದಾರೆ.

ಇನ್ನೂ ಅಮಿತಾಭ್ ಹಂಚಿಕೊಂಡ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ಆತನ ಪೋಸ್ಟ್ ಹೊರಬಂದಿದ್ದೆ ತಡ ನೆಟ್ಟಿಗರಿಂದ ಒಳ್ಳೆಯ ಸ್ಪಂದನೆ ದೊರೆತಿದೆ. ಅನೇಕರು ಅಮಿತಾಭ್ ಬಚ್ಚನ್ ಬೆಲ್ ಬಾಟಂ ಪ್ಯಾಂಟ್ ಧರಿಸಿದ ಸಿನೆಮಾಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಅಮಿತಾಭ್ ರವರ ಸಿನೆಮಾಗಳನ್ನು ನೆನಪಿಸಿಕೊಂಡಿದ್ದಾರೆ. ಅವರ ಸಿನೆಮಾಗಳಲ್ಲಿನ ನಟನೆಯ ಬಗ್ಗೆ ಸಹ ಹೊಗಳಿದ್ದಾರೆ. ಇನ್ನೂ ಅಮಿತಾಭ್ ರವರ ಹಿಂದೆ ಹೇಗೆ ನಟಿಸುತ್ತಿದ್ದರೋ ಈಗಲೂ ಸಹ ಅದೇ ಎನರ್ಜಿಯಿಂದ ನಟಿಸುತ್ತಿದ್ದಾರೆ. ಈಗಲೂ ಸಹ ಅನೇಕ ಬಿಗ್ ಬಜೆಟ್ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಇನ್ನೂ ಪ್ರಭಾಸ್ ದೀಪಿಕಾ ಪಡುಕೋಣೆ ಕಾಂಬಿನೇಷನ್ ನಲ್ಲಿ ಬರುತ್ತಿರುವ ಪ್ರಾಜೆಕ್ಟ್ ಕೆ ಸಿನೆಮಾದಲ್ಲೂ ಸಹ ಅಮಿತಾಭ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Most Popular

To Top