Film News

ನನ್ನನ್ನು ಸುಪಾರಿ ಕೊಟ್ಟು ಸಾಯಿಸ್ತಾರಂತೆ, ಆದಿಲ್ ವಿರುದ್ದ ರಾಖಿ ಸಾವಂತ್ ಆರೋಪ….!

ಬಾಲಿವುಡ್ ನಟಿ ರಾಖಿ ಸಾವಂತ್ ಸದಾ ಒಂದಲ್ಲ ಒಂದು ರೀತಿಯ ವಿವಾದಗಳಲ್ಲಿ, ಸಮಸ್ಯೆಗಳಲ್ಲಿ ಸಿಲುಕುತ್ತಿರುತ್ತಾರೆ. ಇತ್ತಿಚಿಗೆ ಆಕೆ ಮೈಸೂರು ಮೂಲದ ಉದ್ಯಮಿ ಆದಿಲ್ ಖಾನ್ ಎಂಬಾತನೊಂದಿಗೆ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಬದಲಾಗಿದ್ದರು ಎನ್ನಲಾಗಿದೆ. ಆದರೆ ಇಬ್ಬರ ನಡುವೆ ವಿಬೇದಗಳು ಹುಟ್ಟಿಕೊಂಡಿದೆ. ತನ್ನ ಪತಿ ಬೇರೆ ಯುವತಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಸಹ ರಾಖಿ ಆರೋಪ ಮಾಡಿದ್ದರು. ಇದೀಗ ರಾಖಿ ಮತ್ತೊಂದು ಗಂಭೀರ ಆರೋಪವನ್ನು ತನ್ನ ಪತಿ ಆದಿಲ್ ವಿರುದ್ದ ಮಾಡಿದ್ದಾರೆ.

ಆದಿಲ್ ಖಾನ್ ಗೆ ಅನೈತಿಕ ಸಂಬಂಧ ಇದೆ. ಬೇರೆ ಯುವತಿಯ ಜೊತೆ ತಿರುಗಾಡುತ್ತಿದ್ದಾನೆ. ಆಕೆಯನ್ನು ಬಿಟ್ಟು ಬಿಡುತ್ತೇನೆ ಎಂದು ನನ್ನ ಮೇಲೆ ಆಣೆ ಮಾಡಿದ್ದ. ಆದರೂ ಸಹ ಆತ ಆ ಯುವತಿಯನ್ನು ಬಿಡದೇ ಆಕೆಯೊಂದಿಗೆ ಅಫೈರ್‍ ನಡೆಸುತ್ತಿದ್ದಾನೆ. ಇದೀಗ ಆಕೆ ಆತನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಆಕೆಯ ಬಳಿ ಆದಿಲ್ ಖಾನ್ ನ ಪರ್ಸನಲ್ ವಿಡಿಯೋ, ಆಡಿಯೋಗಳು ಇದೆ. ಆದಿಲ್ ಖಾನ್ ದೊಡ್ಡ ಸುಳ್ಳುಗಾರ ಎಂದು ಸೀರಿಯಸ್ ಆರೋಪಗಳನ್ನು ಮಾಡಿದ್ದರು. ಇನ್ನೂ ಅನೈತಿಕ ಸಂಬಂಧ ಹಾಗೂ ಹಲ್ಲೆ ಆರೋಪದ ಮೇರೆಗೆ ಕಳೆದ ಫೆ.7 ರಂದು ಮುಂಬೈ ಪೊಲೀಸರು ಸಹ ಆದಿಲ್ ನನ್ನು ಅರೆಸ್ಟ್ ಮಾಡಿದ್ದರು. ಇನ್ನೂ ಅಂದೇರಿ ಕೋರ್ಟ್‌ನಲ್ಲೂ ವಿಚಾರಣೆಗೆ ಸಹ ಹಾಜರಾಗಿದ್ದರು. ಈ ವೇಳೆ ರಾಖಿಯನ್ನು ಮೆಡಿಕಲ್ ಟೆಸ್ಟ್ ಗೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆದಿಲ್ ಬಗ್ಗೆ ರಾಖಿ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ.

ನಾನು ಕೋರ್ಟ್‌ನಲ್ಲಿ ಆದಿಲ್ ವಿರುದ್ದ ಕೇಸ್ ಗಳನ್ನು ಹಾಕಿದ್ದೇನೆ. ಎಲ್ಲವನ್ನೂ ಬಗೆಹರಿಸಿಕೊಳ್ಳೋಣ ಎಂದು ಆದಿಲ್ ಗೆ ನೂರು ಅವಕಾಶ ಕೊಟ್ಟಿದ್ದೇನೆ. ನನಗೆ ಯಾಕೆ ಈ ರೀತಿಯಾಗುತ್ತಿದೆ ಎಂದು ಆ ದೇವರಿಗೆ ಗೊತ್ತು. ನಾನು ಎಲ್ಲವನ್ನೂ ಎಲ್ಲರ ಮುಂದೆ ಬಂದು ಹೇಳುತ್ತೇನೆ. ಮಹಿಳೆಯರು ಈ ರೀತಿ ಧೈರ್ಯ ಮಾಡಲ್ಲ. ನಾನು ಆ ರೀತಿಯಲ್ಲ. ಆದಿಲ್ ಖಾನ್ ನನ್ನು ನಾನು ಸದಾ ಪ್ರೀತಿ ಮಾಡುತ್ತೇನೆ. ಆದರೆ ಅವನು ಮೋಸ ಮಾಡಿದ್ದಾನೆ, ನನಗೆ ಹೊಡೆದಿದ್ದೇನೆ. ನನ್ನನ್ನು ಹಿರೋ ಮಾಡು ಎಂದು ಪೀಡಿಸುತ್ತಿದ್ದ. ನಾನು ದೊಡ್ಡ ಉದ್ಯಮಿ ಮನೆಯನ್ನು ಕೊಡಿಸಿದ್ದೇನೆ ಎಂದು ಎಲ್ಲರ ಮುಂದೆ ಹೇಳು ಎನ್ನುತ್ತಿದ್ದ. ನಾನು ಆ ರೀತಿ ಹೇಳದೇ ಇದ್ದಿದ್ದರೇ ನನಗೆ ಮದುವೆಯಾಗುತ್ತಿರಲಿಲ್ಲ. ನಾನು ಬೇರೆ ಹೆಂಗಸಿನ ಜೊತೆ ಮಲಗಿ ವಿಡಿಯೋ ಮಾಡಿ ನಿನಗೆ ಕಳುಹಿಸುತ್ತೇನೆ, ನೀನು ಅದನ್ನು ನೋಡಿ ಅಸೂಯೆಯಿಂದ ಹೃದಯಘಾತದಿಂದ ಸಾಯಬೇಕು ಎಂದು ಹೇಳುತ್ತಿದ್ದ. ಇದು ಸಾಲದು ಎಂಬಂತೆ ಐವತ್ತು ಸಾವಿರ ಕೊಟ್ಟು ನಿನ್ನ ಮೇಲೆ ಲಾರಿ ಹರಿಸ್ತೀನಿ ಎಂದು ಧಮ್ಕಿ ಸಹ ಹಾಕಿದ್ದ ಎಂದು ರಾಖಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇನ್ನೂ ರಾಖಿ ಸಾವಂತ್ ಆದಿಲ್ ನನ್ನು ಪ್ರೀತಿ ಮಾಡಿದಾಗಿನಿಂದ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತಾರೆ. ಇನ್ನೂ ರಾಖಿ ಹೊರಬಂದರೇ ಸಾಕು ಪಾಪರಾಜಿಗಳು ಆಕೆಯ ಹಿಂದೆ ಬೀಳುತ್ತಿರುತ್ತಾರೆ. ಆ ವೇಳೆ ಆಕೆ ಅನೇಕ ವಿಚಾರಗಳನ್ನು ಆರೋಪಗಳನ್ನು ಮಾಡುತ್ತಿರುತ್ತಾರೆ.

Most Popular

To Top