ಒಳ್ಳೆಯ ಕೆಲಸ ಮಾಡಿದ್ದೀರಾ ಎಂದು ಹೊಗಳುತ್ತೀರಾ, ಮತಗಟ್ಟೆಗೆ ಹೋದಾಗ ನನ್ನ ಮರೆತು ಬಿಡ್ತೀರಾ ಎಂದ ಮಲ್ಲಿಕಾರ್ಜುನ್ ಖರ್ಗೆ….!

Follow Us :

ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಕಾಂಗ್ರೇಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದೆ. ಈ ಹಾದಿಯಲ್ಲೇ ಕಲಬುರ್ಗಿಯಲ್ಲಿ ನಡೆದ ಲೊಕಸಭಾ ಚುನಾವಣೆಯ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಒಳ್ಳೆಯ ಕೆಲಸ ಮಾಡಿದ್ದೀರಾ ಎಂದು ಹೇಳ್ತೀರಾ, ಮತಗಟ್ಟೆಗೆ ಹೊದಾಗ ನಿಮಗೆ ಏನು ಅನ್ನಿಸುತ್ತದೆಯೋ ಗೊತ್ತಿಲ್ಲ, ನಮ್ಮನ್ನು ಮರೆತು ಬಿಡುತ್ತೀರಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಸಲು ನಾಡು ಎಂದೇ ಕರೆಯಲಾಗುವ ಕಲರ್ಬುಗಿಯಲ್ಲಿ ಎಐಸಿಸಿ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಚಾರ ನಡೆಸುತ್ತಾ ತಮ್ಮ ಪಕ್ಷದ ಅಭ್ಯರ್ಥಿ ರಾಧಾಕೃಷ್ಣಗೆ ವೋಟ್ ಮಾಡಿ, ಕಲಬುರ್ಗಿ ಮುಂದಿನ 5 ವರ್ಷಗಳಲ್ಲಿ ಬದಲಾವಣೆ ಆಗುತ್ತದೆ. ನಾನು ಇನ್ನೂ ಸತ್ತಿಲ್ಲ, ಬದುಕಿದ್ದೇನೆ, ಜನರ ಸೇವೆ ಮಾಡಲು ಬದ್ದನಾಗಿ‌ದ್ದೇನೆ. ನನ್ನ ಗುರಿ ನಿಜವಾಗಿಯೂ ಕಲ್ಯಾಣ ಕರ್ನಾಟಕ ಮಾಡುವುದಾಗಿದೆ. ಈ ಭಾಗಕ್ಕೆ 371ಜೆ ಸ್ಥಾನಮಾನ ತಂದುಕೊಟ್ಟಿದ್ದೇನೆ. ಅದರ ಮೂಲಕ ಸಂವಿಧಾನದ ಪುಸ್ತಕದಲ್ಲಿ ಹೆಸರು ಸೇರಿಸಿದ್ದೇನೆ ಎಂದು ಭಾವುಕರಾಗಿದ್ದಾರೆ.

ಅಷ್ಟೇಅಲ್ಲದೇ ಕಲರ್ಬುಗಿಯಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ, ಇ.ಎಸ್.ಐ, ಜವಳಿ ಪಾರ್ಕ್, ನ್ಯಾಷನಲ್ ಹೈವೇ ಎಲ್ಲವನ್ನೂ ಮಾಡಿದ್ದೇನೆ. ಬಿಜೆಪಿ ಪಕ್ಷದವರಿಗೆ ಈ ಭಾಗದ ಅಭಿವೃದ್ದಿ ಬೇಕಾಗಿಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಜೆಪಿ ಶೂನ್ಯ ಕೊಡುಗೆ ನೀಡಿದೆ. ಆದರೆ ನನ್ನ ಗುರಿಯೊಂದೆ ಈ ಭಾಗವನ್ನು ಅಭಿವೃದ್ದಿ ಮಾಡಬೇಕು. ಬಸವಣ್ಣ ಹಾಗೂ ಅಂಬೇಡ್ಕರ್‍ ತತ್ವ ಉಳಿಯಬೇಕು ಎಂಬುದು ನನ್ನ ಗುರಿಯಾಗಿದೆ. ಇದು ರಾಧಕೃಷ್ಣ ಎಲೆಕ್ಷನ್ ಅಲ್ಲ, ದೇಶದ ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಚುನಾವಣೆಯಾಗಿದೆ. ಎನ್.ಡಿ.ಎ ಸರ್ಕಾರ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿದೆ. ಅದನ್ನು ನಾವು ಉಳಿಸಬೇಕಾಗಿದೆ. ಈ ಕಾರಣದಿಂದ ತಾವೆಲ್ಲರೂ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.