Film News

ಮತ್ತೆ ಮದುವೆಯಾಗಲಿದ್ದಾರಂತೆ ಸ್ವರಾ ಭಾಸ್ಕರ್, ಮದುವೆಯ ಆಮಂತ್ರಣ ಪತ್ರಿಕೆ ಸಖತ್ ವೈರಲ್…!

ಬಾಲಿವುಡ್ ಸಿನಿರಂಗದಲ್ಲಿ ಸದಾ ವಿವಾದಗಳ ಮೂಲಕ ಸುದ್ದಿಯಾಗುವುದರಲ್ಲಿ ಸ್ವರಾ ಭಾಸ್ಕರ್‍ ಮುಂದಿರುತ್ತಾರೆ. ಸುಮಾರು 20 ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ಈಕೆ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಕೆಲವು ದಿನಗಳ ಹಿಂದೆಯಷ್ಟೆ ತಾನು ಮದುವೆಯಾದ ಬಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಕೆಲ ಪೊಟೋಗಳನ್ನು ಹಂಚಿಕೊಂಡಿದ್ದರು. ಬಳಿಕ ಮೊದಲ ರಾತ್ರಿ ಸಿದ್ದತೆಯ ಪೊಟೋಗಳನ್ನು ಸಹ ಹಂಚಿಕೊಂಡು ಸುದ್ದಿಯಾಗಿದ್ದರು. ಇದೀಗ ಆಕೆ ಮತ್ತೊಂದು ಪೋಸ್ಟ್ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್‍ ಸೌಂದರ್ಯದ ಜೊತೆಗೆ ನಟನೆಯ ಮೂಲಕ ತುಂಬಾ ಫೇಂ ಪಡೆದುಕೊಂಡಿದ್ದಾರೆ. ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲೇ ತುಂಬಾ ಫೇಮಸ್ ಆಗಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ತಾನು ಸಮಾಜವಾದಿ ಪಾರ್ಟಿಯ ಯುವ ರಾಜಕಾರಣಿ ಅಹ್ಮದ್ ಫಹಾದ್ ಎಂಬಾತನನ್ನು ಮದುವೆಯಾಗಿದ್ದಾಗಿ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದರು. ಸ್ವರಾ ಭಾಸ್ಕರ್‍ ಹಾಗೂ ಫಹಾದ್ ಸುಮಾರು ದಿನಗಳಿಂದ ರಿಲೇಷನ್ ಶಿಪ್ ನಲ್ಲಿದ್ದರಂತೆ. ಫಹಾದ್ ಸಹ ಮೋದಿ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿರುತ್ತಾರೆ. ಈ ಕಾರಣದಿಂದ ಅವರಿಬ್ಬರ ನಡುವೆ ಪರಿಚಯ ಏರ್ಪಟ್ಟು ಪರಿಚಯ ಪ್ರೀತಿಯಾಗಿ ಇದೀಗ ಮದುವೆಯಾಗಿದ್ದಾರೆ. ಇನ್ನೂ ತಾವು ಮದುವೆಯಾದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿಕೊಟ್ಟಿದ್ದರು. ಇನ್ನೂ ಅಲ್ಲಿಂದ ಆಕೆಯನ್ನು ಮತಷ್ಟು ಟ್ರೋಲ್ ಮಾಡಿದ್ದರು. ಮೊದಲಿಗೆ ಆಕೆ ಫಹಾದ್ ರನ್ನು ಅಣ್ಣ ಎಂದು ಕರೆದಿದ್ದರು. ಅಣ್ಣ ಎಂದು ಕರೆದವರನ್ನು ಮದುವೆಯಾಗುತ್ತೀಯಾ ಎಂದೂ ಸಹ ಟ್ರೋಲ್ ಮಾಡಿದ್ದರು.

ಬಳಿಕ ಆಕೆ ಮೊದಲ ರಾತ್ರಿಯ ಸಿದ್ದತೆಗೆ ಸಂಬಂಧಿಸಿದ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಕಾರಣಕ್ಕೂ ಸಹ ಆಕೆಯನ್ನು ಸಖತ್ ಟ್ರೋಲ್ ಮಾಡಲಾಗಿತ್ತು. ಮದುವೆಯ ಬಳಿಕ ಆಕೆ ಕೆಲವೊಂದು ಪೊಟೋಗಳನ್ನು ಸಹ ಹಂಚಿಕೊಂಡಿದ್ದರು. ತಮ್ಮ ಮೊದಲ ರಾತ್ರಿಯ ಸಿದ್ದತೆಯ ಬಗ್ಗೆ ಪೊಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಆಕೆ ಮತ್ತೊಂದು ಪೋಸ್ಟ್ ಮೂಲಕ ಸುದ್ದಿಯಾಗಿದ್ದಾರೆ. ಮೊದಲು ಕೋರ್ಟ್ ಪದ್ದತಿಯಂತೆ ಮದುವೆಯಾದ ಈ ಜೋಡಿ ಬಳಿಕ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದರು. ಇದೀಗ ಈ ಜೋಡಿ ಮತ್ತೊಮ್ಮೆ ಮದುವೆಯಾಗಲಿದ್ದಾರಂತೆ.

ಹೌದು ಸ್ವರಾ ಭಾಸ್ಕರ್‍ ಹಾಗೂ ಫಹಾದ್ ಅಹ್ಮದ್ ಮತ್ತೊಮ್ಮೆ ಮದುವೆಯಾಗಲಿದ್ದಾರೆ. ಈ ಹಿಂದೆ ರಿಜಿಸ್ಟರ್‍ ಮ್ಯಾರೇಜ್ ಮಾಡಿಕೊಂಡ ಈ ಜೋಡಿ ಇದೀಗ ಸಂಪ್ರದಾಯದಂತೆ ಮದುವೆಯಾಗಲಿದ್ದಾರಂತೆ. ಇದೇ ಮಾರ್ಚ್ 15 ಹಾಗೂ 16 ರಂದು ಕುಟುಂಬಸ್ಥರು ಹಾಗೂ ಹತ್ತಿರದವರ ಸಮ್ಮುಖದಲ್ಲಿ ಮತ್ತೊಮ್ಮೆ ಮದುವೆಯಾಗಲಿದ್ದಾರೆ. ಈ ಸಂಬಂಧ ಸ್ವರಾ ವೆಡ್ಡಿಂಗ್ ಇನ್ವಿಟೇಷನ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

Most Popular

To Top