Film News

ಸೌತ್ ನಲ್ಲಿ ಮೊದಲನೇ ಸಿನೆಮಾಗಾಗಿಯೇ ಭಾರಿ ಸಂಭಾವನೆ ಪಡೆದುಕೊಂಡ ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್…!

ಅತಿಲೋಕ ಸುಂದರಿ ದಿವಂಗತ ಶ್ರೀದೇವಿ ಪುತ್ರಿ NTR30 ಸಿನೆಮಾದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ. ಸುಮಾರು ದಿನಗಳಿಂದ ಜಾನ್ವಿ ಕಪೂರ್‍ ರವರನ್ನು ಸೌತ್ ಸಿನೆಮಾಗಳಲ್ಲಿ ನಟಿಸುವಂತೆ ಶ್ರೀದೇವಿ ಅಭಿಮಾನಿಗಳ ಬೇಡಿಕೆಯಾಗಿತ್ತು. ಇದೀಗ ಅಭಿಮಾನಿಗಳ ಬೇಡಿಕೆ ಈಡೇರಿದೆ. ಜೂನಿಯರ್‍ ಎನ್.ಟಿ.ಆರ್‍ ಜೊತೆಗೆ NTR30 ಸಿನೆಮಾದಲ್ಲಿ ಜಾನ್ವಿ ಕಪೂರ್‍ ನಟಿಸಲಿದ್ದಾರೆ. ಜಾನ್ವಿ ಹುಟ್ಟುಹಬ್ಬದ ಅಂಗವಾಗಿ ಆಕೆಯ ಸ್ಪೇಷಲ್ ಪೋಸ್ಟರ್‍ ಸಹ ರಿಲೀಸ್ ಮಾಡಿತ್ತು. ಈ ಸಿನೆಮಾಗಾಗಿ ಆಕೆ ಭಾರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರಂತೆ. ಈ ಸುದ್ದಿ ಇದೀಗ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಬಾಲಿವುಡ್ ಯಂಗ್ ಅಂಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್‍ NTR30 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಶ್ರೀದೇವಿ ಪುತ್ರಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಈಗಾಗಲೇ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ.  ಆದರೆ ಯಾವುದೇ ಸಿನೆಮಾಗಳು ಆಕೆಗೆ ಬಿಗ್ ಬ್ರೇಕ್ ನೀಡಿಲ್ಲ ಎಂದು ಹೇಳಬಹುದಾಗಿದೆ. ಆದರೆ ಆಕೆ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಆಕೆಗೆ ಅವಕಾಶಗಳು ಸ್ಟಾರ್‍ ಕಿಡ್ ಎಂಬ ಕಾರಣದಿಂದ ಬರುತ್ತಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಇನ್ನೂ ಈ ಬಗ್ಗೆ ಆಕೆ ಅನೇಕ ಸಂದರ್ಶನಗಳಲ್ಲಿ ಈ ಬಗ್ಗೆ ರಿಯಾಕ್ಟ್ ಆಗಿದ್ದರು. ನಾನು ನಟನೆಗಾಗಿ ನಾನು ರಕ್ತವನ್ನು ಸಹ ಹರಿಸಲು ಸಿದ್ದ ಎಂದು ಜಾನ್ವಿ ಹೇಳಿದ್ದರು. ಹಾಗೂ ನಟನೆಗಾಗಿ ತಾನು ತುಂಬಾ ಕಷ್ಟಪಡುತ್ತಿದ್ದಾಗಿ ಸಹ ಹೇಳಿದ್ದರು. ಇದೀಗ ಆಕೆ NTR30 ಸಿನೆಮಾಗಾಗಿ ಟಾಲಿವುಡ್ ಸ್ಟಾರ್‍ ನಟಿಯರನ್ನು ಮೀರಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರಂತೆ ಜಾನ್ವಿ ಕಪೂರ್‍.

ಸದ್ಯ ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟಿಯರು ಎರಡರಿಂದ ಮೂರು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಜಾನ್ವಿ ಕಪೂರ್‍ ಅವರೆಲ್ಲರನ್ನೂ ಮೀರಿ ಸಂಭಾವನೆ ಪಡೆದುಕೊಳ್ಳಲಿದ್ದಾರಂತೆ. ಬಾಲಿವುಡ್ ಹಾಟ್ ಅಂಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ NTR30 ಸಿನೆಮಾಗಾಗಿ ಬರೊಬ್ಬರಿ ನಾಲ್ಕು ಕೋಟಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರಂತೆ. ಸ್ಟಾರ್‍ ಕಿಡ್ ಎಂಬ ಕಾರಣದಿಂದ ಆಕೆಗೆ ಅಷ್ಟೊಂದು ಸಂಭಾವನೆ ಆಫರ್‍ ಮಾಡಲಾಗಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ. ಅಷ್ಟೇಅಲ್ಲದೇ ಆಕೆ ಈ ನಾಲ್ಕು ಕೋಟಿ ಸಂಭಾವನೆಯ ಕಾರಣದಿಂದಲೇ ಈ ಸಿನೆಮಾಗೆ ಒಪ್ಪಿಗೆ ನೀಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ನೂ ಜಾನ್ವಿ ಕಪೂರ್‍ ಸಂಭಾವನೆಯ ವಿಚಾರ ಟಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ. ಇನ್ನೂ ಈ ಸಿನೆಮಾದ ಬಳಿಕ ಜಾನ್ವಿ ಕಪೂರ್‍ ರೇಂಜ್ ಸಹ ಬದಲಾಗಲಿದೆ ಎಂದೂ ಸಹ ಹೇಳಲಾಗುತ್ತಿದೆ. NTR30 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆದ ಕಾರಣದಿಂದ ಬಾಲಿವುಡ್ ನಟಿ ಜಾನ್ವಿ ಕಪೂರ್‍ ರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾತುಗಳು ಸಹ ಇದೆ. ಸದ್ಯ RRR ಸಿನೆಮಾದ ಬಳಿಕ ಜೂನಿಯರ್‍ ಎನ್.ಟಿ.ಆರ್‍ ರವರ NTR30 ಸಿನೆಮಾ ತುಂಬಾನೆ ನಿರೀಕ್ಷೆ ಹುಟ್ಟಿಸಿದೆ ಎಂದು ಹೇಳಲಾಗುತ್ತಿದೆ.

Most Popular

To Top