ಮದುವೆಯಾಗಬೇಕೆಂದು ಆಸೆಯಿದೆ, ಆದರೆ ಅವರಿಬ್ಬರು ಅಡ್ಡಿ ಹೇಳುತ್ತಿದ್ದಾರೆ ಎಂದ ಸೀನಿಯರ್ ನಟಿ ಸುಸ್ಮೀತಾ ಸೇನ್…..!

Follow Us :

ಮಾಜಿ ವಿಶ್ವ ಸುಂದರಿ ಬಾಲಿವುಡ್ ಸ್ಟಾರ್‍ ನಟಿ ಸುಸ್ಮಿತಾ ಸೇನ್ ವಯಸ್ಸಾದರೂ ಸಹ ಸಿನೆಮಾಗಳೂ ಹಾಗೂ ವೆಬ್ ಸೀರಿಸ್ ಗಳಲ್ಲಿ ನಟಿಸುತ್ತಾ ಇನ್ನೂ ತಾನು ಸಿನಿ ರಂಗದಲ್ಲಿ ಬ್ಯುಸಿಯಾಗಿಯೇ ಸಾಗುತ್ತಿದ್ದಾರೆ. ಇನ್ನೂ ಹೆಚ್ಚಾಗಿ ಸುದ್ದಿಯಾಗುವ ನಟಿಯರಲ್ಲಿ ಸುಸ್ಮೀತಾ ಸೇನ್ ಸಹ ಒಬ್ಬರಾಗಿದ್ದಾರೆ. ಆಕೆ ಡೇಟಿಂಗ್, ಲವ್ ವಿಚಾರದ ಕಾರಣದಿಂದ ಹೆಚ್ಚು ಸುದ್ದಿಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಸದಾ ಹೊಸ ಭಾಯ್ ಪ್ರೆಂಡ್ ಗಳ ಜೊತೆಗೆ ಪ್ರೀತಿಗೆ ಬೀಳುತ್ತಾ ಶಾಕ್ ಮೇಲೆ ಶಾಕ್ ಕೊಡುತ್ತಿರುತ್ತಾರೆ. ಇದೀಗ ಆಕೆ ಮದುವೆಯಾಗಬೇಕೆಂಬ ಮನದಾಸೆಯನ್ನು ಹೊರಹಾಕಿದ್ದಾರೆ.

ಸದಾ ತಮ್ಮ ಡೇಟಿಂಗ್ ಬಗ್ಗೆ ಮಾತನಾಡುತ್ತಿದ್ದಂತಹ ನಟಿ ಸುಸ್ಮೀತಾ ಸೇನ್ ಸುಮಾರು ದಿನಗಳ ಬಳಿಕ ಮದುವೆಯಾಗುವ  ಬಗ್ಗೆ ಮಾತನಾಡಿದ್ದಾರೆ. ಮದುವೆಯಾಗುವ ಬಯಕೆಯನ್ನು ಹೊರಹಾಕಿದ್ದಾರೆ. ತನಗೆ ಮದುವೆಯಾಗಬೇಕೆಂಬ ಬಯಕೆಯಾಗಿದೆ. ಮದುವೆಯ ಅವಶ್ಯಕತೆಯಿದೆ. ಆದರೆ ತನ್ನ ಮಕ್ಕಳು ಬೇಡ ಎಂದು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಸುಸ್ಮೀತಾ ಸೇನ್ ಮದುವೆಯಾಗದೇ ಇದ್ದರೂ ಸಹ ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ಸದ್ಯ ಸುಸ್ಮೀತಾ ಸೇನ್ ರವರ ದತ್ತು ಮಕ್ಕಳಾದ ರೌನಿ, ಆಲಿಷಾ ದೊಡ್ಡವರಾಗಿದ್ದಾರೆ. ಇದೀಗ ಆಕೆಗೆ ಮದುವೆಯಾಗಬೇಕೆಂಬ ಬಯಕೆ ಹುಟ್ಟುತ್ತಿದೆಯಂತೆ. ಈ ವಿಚಾರವನ್ನು ಸುಸ್ಮಿತಾ ಹಂಚಿಕೊಂಡಿದ್ದಾರೆ.

ಇನ್ನೂ ನನ್ನ ಮಕ್ಕಳು ಎಂದೂ ಸಹ ತಂದೆ ಇಲ್ಲ ಎಂದು ಫೀಲ್ ಆಗಿಲ್ಲ. ಏಕೆಂದರೇ ನಮ್ಮಲ್ಲಿರುವುದನ್ನು ನಾವು ಕಳೆದುಕೊಂಡರೇ ಮಾತ್ರ ಮಿಸ್ ಆಗುತ್ತೇವೆ. ಇಲ್ಲದೇ ಇರುವದನ್ನು ಮಿಸ್ ಆಗುವ ಭಾವನೆ ಸಹ ಹುಟ್ಟುವುದಿಲ್ಲ. ನಾನು ಮದುವೆಯಾಗಬೇಕು ಅಂದುಕೊಂಡರೂ ಈಗ ಏತಕೆ ಮದುವೆ ಎಂದು ಪ್ರಶ್ನೆ ಮಾಡುತ್ತಾರಂತೆ ಸುಸ್ಮಿತಾ ಮಕ್ಕಳು. ನಮಗಾದರೇ ತಂದೆಯ ಅವಶ್ಯಕತೆಯಿಲ್ಲ. ನಾನು ಬಯಸುತ್ತಿದ್ದೇನೆ ಎಂದೂ ಸಹ ಅವರು ಅಂದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ತಂದೆಯಿಲ್ಲದೇ ಇದ್ದರೂ ತಾತ ಇದ್ದಾನೆ. ತಂದೆಯಿಲ್ಲದ ಭಾವನೆ ಇಲ್ಲದಂತೆ ನೋಡುತ್ತಿದ್ದಾರೆ. ನಮ್ಮ ತಂದೆಯೇ ಅವರಿಗೆ ಎಲ್ಲಾ ಆಗಿ ನೋಡಿಕೊಳ್ಳುತ್ತಿದ್ದಾರೆ. ಅವರಿಗೆ ತಾತನೇ ಲೋಕ ಎಂದು ಸುಸ್ಮೀತಾ ಹೇಳಿದ್ದಾರೆ.

ಇನ್ನೂ ಸುಸ್ಮೀತಾ ಕಳೆದ 1994 ರಲ್ಲಿ ಮಿಸ್ ಯೂನಿವರ್ಸ್ ಆಗಿ ಕಿರೀಟ ಧರಿಸಿದರು. ಬಳಿಕ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದರು. ಸಿನಿರಂಗದಲ್ಲಿ ಅನೇಕ ಹಿರೋಗಳ ಜೊತೆಗೆ ರಿಲೇಷನ್ ಶಿಪ್ ನಲ್ಲಿದ್ದರು. ಜೊತೆಗೆ ಐಪಿಲ್ ಸೃಷ್ಟಿಕರ್ತ ಲಲಿತ್ ಮೋದಿ ಜೊತೆಗೂ ಸಹ ಡೇಟಿಂಗ್ ಮಾಡಿದ್ದರು. ಇತ್ತಿಚಿಗಷ್ಟೆ ಸ್ಟ್ರೀಮಿಂಗ್ ಆಗುತ್ತಿರುವ ತಾಲಿ ಎಂಬ ವೆಬ್ ಸಿರೀಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಆರ್ಯ-3 ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ.