News

ಮಹಿಳೆಯರ ಹಾಸ್ಟಲ್ ಬಳಿ ಕಾಮುಕನ ಹಸ್ತಮೈಥುನದ ವಿಡಿಯೋ ವೈರಲ್, ವಿದ್ಯಾರ್ಥಿಗಳ ಆಕ್ರೋಷ….!

ನಾಗರೀಕತೆ ಬೆಳೆದಂತೆಲ್ಲಾ ಸಮಾಜ ತಲೆತಗ್ಗಿಸುವಂತಹ ಕೆಲಸ ಗಳು ನಡೆಯುತ್ತಲೇ ಇದೆ. ಇದೀಗ ಕೊಡಗಿನ ಸರ್ಕಾರಿ ಮೆಡಿಕಲ್ ಕಾಲೇಜಿನ ಮುಂಭಾಗದಲ್ಲೇ ಯುವಕನೋರ್ವ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಅದರ 40 ಸೆಕೆಂಡ್ ಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೆಡಿಕಲ್ ಕಾಲೇಜಿನ ಬಳಿ ಸೂಕ್ತ ಭದ್ರತೆಯಿಲ್ಲದ ಕಾರಣ ಪುಂಡ ಪೋಕರಿಗಳ ಕಾಟ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ರಾಜ್ಯದ ಕೊಡಗಿನಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ವಿಕೃತ ಕಾಮಿಗಳು, ಪುಂಡರ ಕಾಟ ಹೆಚ್ಚಾಗಿದೆ. ನಗರದ ಹೊರವಲಯದ ಕರ್ಣಂಗೇರಿಯಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿನ ಬಳಿಕ ಕತ್ತಲಾದರೇ ಸಾಕು ಹಾಸ್ಟಲ್ ಬಳಿ ಪೊಲೀಗಳು ಬಂದು ವಿದ್ಯಾರ್ಥಿಗಳಿಗೆ ಕಿರುಕುಳ ಕೊಡುತ್ತಾರಂತೆ. ಈ ಸಂಬಂಧ ದೂರು ನೀಡಿದರೂ ಕಾಲೇಜು ಆಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪ ಸಹ ಮಾಡಲಾಗಿದೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೇ ಕೆಲವು ದಿನಗಳ ಹಿಂದೆಯಷ್ಟೆ ಹಾಸ್ಟಲ್ ಬಳಿ ಬಂದ ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದೆ. ಆತ ನಲವತ್ತು ಸೆಕೆಂಡ್ ಗಳ ಕಾಲ ಹಾಸ್ಟಲ್ ಮುಂಭಾಗದಲ್ಲೇ ನಿಂತಿದ್ದಾನೆ. ಹಾಸ್ಟಲ್ ಬಳಿ ಸುತ್ತಾಡುತ್ತಿರುವ ದೃಶ್ಯಗಳು ಹಾಸ್ಟಲ್ ಸಿಸಿ ಕ್ಯಾಮೆರಾದಲ್ಲಿ ಸಹ ಸೆರೆಯಾಗಿದೆ ಎಂದು ಹೇಳಲಾಗಿದೆ.

ಅಷ್ಟೇಅಲ್ಲದೇ ಹಾಸ್ಟಲ್ ಬಳಿ ಬೈಕ್, ಆಟೋಗಳಲ್ಲಿ ಬರುವಂತಹ ಪೊಲಿ ಹುಡುಗರು ಹಾಸ್ಟಲ್ ಹುಡುಗಿಯರ ಮುಂದೆಯೇ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ತೋರುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೇ ಸ್ಥಳೀಯ ವ್ಯಕ್ತಿಗಳಿಂದ ಬೆದರಿಕೆ ಸಹ ಬರುತ್ತಿದೆ. ಇಂತಹ ಘಟನೆಗಳಿಂದ ವಿದ್ಯಾರ್ಥಿಗಳು ಭಯಬೀತರಾಗಿದ್ದಾರೆ. ಈ ಸಂಬಂಧ ವಿದ್ಯಾರ್ಥಿನಿಯರು ದೂರು ಕೊಟ್ಟರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಮೆಡಿಕಲ್ ಕಾಲೇಜಿನ ಆಡಳಿತ ಮಂಡಳಿ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಸಂಬಂಧ ವಿದ್ಯಾರ್ಥಿನಿಯರು ಪ್ರತಿಭಟನೆ ಸಹ ನಡೆಸಿದ್ದಾರೆ. ಕಾಲೇಜಿನ ಪರಿಮಿತಿಯೊಳಗೆ ಅನಾಮಿಕರ ಪ್ರವೇಶವನ್ನು ನಿರ್ಭಂದ ಮಾಡಿ ಎಂದು ಆಗ್ರಹಿಸಿದ್ದಾರೆ. ಸೂಕ್ತ ಭದ್ರತೆ ನೀಡಿ ಆರೋಪಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವವರೆಗೂ ನಾವು ಕಾಲೇಜಿಗೆ ಹೋಗೊಲ್ಲ ಎಂದು ಬಹಿಷ್ಕಾರ ಸಹ ಹಾಕಿದ್ದಾರೆ.

Most Popular

To Top