Film News

ಅರೇ, ಬಾಲಿವುಡ್ ನಟಿ ಸನ್ನಿ ಲಿಯೋನ್ ಪೊಲೀಸ್ ಪರೀಕ್ಷೆಗೆ ಅರ್ಜಿ ಹಾಕಿದ್ರಾ, ವೈರಲ್ ಆದ ಎಕ್ಸಾಂ ಹಾಲ್ ಟಿಕೆಟ್…….!

ಬಾಲಿವುಡ್ ಸ್ಟಾರ್‍ ನಟಿ ಸನ್ನಿ ಲಿಯೋನ್ ಅನೇಕ ಸಿನೆಮಾಗಳು ಹಾಗೂ ಐಟಂ ಸಾಂಗ್ ಗಳ ಮೂಲಕ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲೂ ಸಹ ಐಟಂ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕುವ ಮೂಲಕ ಕನ್ನಡ ದ ಅಭಿಮಾನಿಗಳನ್ನು ಸಹ ಗಳಿಸಿಕೊಂಡಿದ್ದಾರೆ. ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾ ಮೂಲಕವೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಸನ್ನಿ ಲಿಯೋನ್ ಪೊಲೀಸ್ ಪರೀಕ್ಷೆಯ ಹಾಲ್ ಟಿಕೆಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಹಾಲ್ ಟಿಕೆಟ್ ಹಿಂದಿರುವ ಸತ್ಯಾಂಶ ಏನು ಎಂಬ ವಿಚಾರಕ್ಕೆ ಬಂದರೇ,

ಇತ್ತೀಚಿಗೆ ಕೆಲವು ಸೆಲೆಬ್ರೆಟಿಗಳಿಗೆ ಸಂಬಂಧಿಸಿದಂತಹ ಪೊಟೋಗಳು ಸರ್ಕಾರಿ ಕೆಲಸಗಳ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟ್ ಗಳಲ್ಲಿ ಕಾಣಿಸುವುದುನ್ನು ನೋಡಿರುತ್ತೇವೆ. ಚುನಾವಣಾ ಐಡಿ ಕಾರ್ಡ್‌ಗಳು, ಆಧಾರ್‍ ಕಾರ್ಡ್‌ಗಳಲ್ಲೂ ಸಹ ಕೆಲವೊಂದು ಸೆಲೆಬ್ರೆಟಿಗಳ ಪೊಟೋಗಳನ್ನು ನೋಡಿದ್ದೇವೆ. ಇದೀಗ ಸನ್ನಿಲಿಯೋನ್ ಪೊಟೋ ಒಂದು ಪೊಲೀಸ್ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಕಾಣಿಸಿಕೊಂಡಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್ ಕಾನಿಸ್ಟೇಬಲ್ ಪರೀಕ್ಷೆ ನಡೆಯುತ್ತಿದ್ದು, ಈ ಪರೀಕ್ಷೆಗಾಗಿ ಅಭ್ಯರ್ಥಿ ಯೋರ್ವ ಸನ್ನಿಲಿಯೋನ್ ಪೊಟೋ ಅಪ್ಲೈ ಮಾಡಿದ್ದರು. ಪರೀಕ್ಷೆಗೆ ನೊಂದಣಿ ಮಾಡುವಾಗ ಸನ್ನಿಲಿಯೋನ್ ಪೊಟೋ ಅಪ್ಲೈ ಮಾಡಿದ್ದಾರೆ. ಈ ಅರ್ಜಿಗೆ ಅಡ್ಮಿಟ್ ಕಾರ್ಡ್ ಸಹ ಬಂದಿದೆ. ಸದ್ಯ ಈ ಪ್ರವೇಶ ಪತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.  ಇನ್ನೂ ವೈರಲ್ ಆಗುತ್ತಿರುವ ಪ್ರವೇಶ ಪತ್ರದಲ್ಲಿ ನ್ನೌಜ್ ತಿರ್ವಾಲದಲ್ಲಿರುವ ಶ್ರೀಮತಿ ಸೋನೇಶ್ರಿ ಮೆಮೊರಿಯಲ್ ಬಾಲಿಕೀಯರ ಶಾಲೆಯಲ್ಲಿ ಸನ್ನಿಲಿಯೋನ್ ಗೆ ಪರೀಕ್ಷೆ ಕೇಂದ್ರ ನೀಡಲಾಗಿದ. ಫೆ.17, 18 ರಂದು ಎರಡು ದಿನಗಳ ಕಾಲ ಪೊಲೀಸ್ ಪರೀಕ್ಷೆಗೆ ಪರೀಕ್ಷೆ ನಡೆದಿದೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ಸನ್ನಿಲಿಯೋನ್ ಪೊಟೋ ಇರುವ ಪ್ರವೇಶ ಪತ್ರಕ್ಕೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಯುಪಿ ಪೊಲೀಸ್ ಕಾನಿಸ್ಟೇಬಲ್ ಪರೀಕ್ಷೆಗೆ ಸನ್ನಿಲಿಯೋನ್ ಅಪ್ಲೇ ಮಾಡಿದ್ದಾರಾ ಎಂದು ಅನೇಕರು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ಪೊಟೋಗೆ ಯುಪಿ ಪೊಲೀಸ್ ನೇಮಕಾತಿ ಬೋರ್ಡ್ ಸಹ ರಿಯಾಕ್ಟ್ ಆಗಿದ್ದು, ಸನ್ನಿಲಿಯೋನ್ ಹೆಸರು ಹಾಗೂ ಪೊಟೋ ಇರುವ ಪ್ರವೇಶ ಪತ್ರ ನಕಲಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಸನ್ನಿಲಿಯೋನ್ ಪೊಲೀಸ್ ಪರೀಕ್ಷೆಯ ಪ್ರವೇಶ ಪತ್ರ ಮಾತ್ರ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ.

Most Popular

To Top