News

HSRP ನಕಲಿ ಕ್ಯೂ.ಆರ್ ಕೋಡ್ ಗಳ ಹಾವಳಿ, ಗಡುವು ವಿಸ್ತರಣೆ ಬೆನ್ನಲ್ಲೆ ನಕಲಿಗಳ ಹಾವಳಿ ಹೆಚ್ಚಳ……!

ರಾಜ್ಯ ಸರ್ಕಾರ ವಾಹನಗಳಿಗೆ HSRP ನಂಬರ್‍ ಪ್ಲೇಟ್ ಗಳನ್ನು ಅಳವಡಿಸಲು ನೀಡಿದ್ದ ಗಡುವು ಮತ್ತೆ ವಿಸ್ತರಣೆ ಮಾಡಿದ್ದು, ಮೇ.31 ರವರೆಗೂ ನಂಬರ್‍ ಪ್ಲೇಟ್ ಅಳವಡಿಕೆಗೆ ಅವಕಾಶ ನೀಡಿ ರಾಜ್ಯ ಸಾರಿಗೆ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಈ ನಡುವೆ ನಕಲಿ ಕ್ಯೂಆರ್‍ ಕೋಡ್ ಗಳ ಹಾವಳಿ ಸಹ ಹೆಚ್ಚಾಗಿದೆ. ಈ ಕುರಿತು ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.

ರಾಜ್ಯದಲ್ಲಿ ಇನ್ನೂ ಕೋಟಿಗೂ ಅಧಿಕ ವಾಹನಗಳಿಗೆ HSRP ನಂಬರ್‍ ಅಳವಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೆ ನಂಬರ್‍ ಪ್ಲೇಟ್ ಅಳವಡಿಸಿಕೊಳ್ಳಲು ಮೇ.31 ರವರೆಗೂ ಗಡುವು ವಿಸ್ತರಿಸಿದೆ. ಇದೀಗ ಮತ್ತೆ ವಾಹನ ಸವಾರರು HSRP ನಂಬರ್‍ ಪ್ಲೇಟ್ ಅಳವಡಿಸಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ಇದನ್ನು ಬಂಡವಾಳವಾಗಿ ಮಾಡಿಕೊಂಡ ಕೆಲ ಕಿಡಿಗೇಡಿಗಳು ನಕಲಿ ಕ್ಯೂಆರ್‍ ಕೋಡ್ ಗಳನ್ನು ಅಂತರ್ಜಾಲದಲ್ಲಿ ಹಾಕಿ ವಾಹನ ಸವಾರರಿಗೆ ಮೋಸ ಮಾಡುತ್ತಿದ್ದಾರೆ. HSRP ಹೆಸರಿನಲ್ಲಿ ಕೆಲವು ನಕಲಿ ವೆಬ್ ಸೈಟ್ ಗಳು ಕ್ರಿಯೇಟ್ ಮಾಡಿ ಆ ಮೂಲಕ ಹಣ ವಂಚನೆ ಮಾಡುತ್ತಿದ್ದಾರೆ.

ವಾಹನ ಸವಾರರು ಆತುರಪಡದೆ ನಕಲಿ ವೆಬ್ ಸೈಟ್ ಗಳಲ್ಲಿ HSRP ನಂಬರ್‍ ಪ್ಲೇಟ್ ಬುಕ್ ಮಾಡಬಾರದು. ಇನ್ನೂ ಈ ನಕಲಿ ವೆಬ್ ಸೈಟ್ ಗಳು ನೋಡೋಕೆ ಸರ್ಕಾರದ ಅಧಿಕೃತ ವೆಬ್ ಸೈಟ್ ಗಳಂತೆ ಇರುತ್ತವೆ. ಅದೇ ರೀತಿ ಜನರನ್ನು ನಂಬಿಸಿ ಹಣ ಪಡೆದು ಮೋಸ ಮಾಡುತ್ತವೆ. ಆದ್ದರಿಂದ ವಾಹನ ಸವಾರರು ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರ HSRP ನಂಬರ್‍ ಪ್ಲೇಟ್ ನೊಂದಣಿ ಮಾಡಿಸಿಕೊಳ್ಳಬೇಕು. ಇನ್ನೂ HSRP ನಂಬರ್‍ ಪ್ಲೇಟ್ ದರ ದ್ವಿಚಕ್ರ ವಾಹನಗಳಿಗೆ 400-600 ವರೆಗೆ ಇದೆ. ನಾಲ್ಕು ಚಕ್ರದ ವಾಹನಗಳಿಗೆ 650-800 ರೂಪಾಯಿವರೆಗೂ ಇದೆ. ವಾಹನ ಸವಾರರು ಯಾವುದೇ ರೀತಿಯಲ್ಲಿ ನಕಲಿ ವೆಬ್ ಸೈಟ್ ಗಳು, ಕ್ಯೂಆರ್‍ ಕೋಡ್ ಗಳನ್ನು ನಂಬಬಾರದಾಗಿದೆ.

Most Popular

To Top