ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಮಾದಕ ನಟಿ ಸನ್ನಿ, ಗಂಗಾರತಿ ವಿಡಿಯೋ ಹಂಚಿಕೊಂಡ ಸನ್ನಿ, ವೈರಲ್ ಆದ ವಿಡಿಯೋ….!

ಬಣ್ಣದ ಲೋಕದಲ್ಲಿ ಮಾದಕ ನಟಿ ಎಂತಲೇ ಕರೆಯಲಾಗುವ ಸನ್ನಿ ಲಿಯೋನ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸಿನೆಮಾ ಶೆಡ್ಯೂಲ್ ಗಳಿಂದ ಖಾಲಿ ಸಮಯ ಸಿಕ್ಕರೇ ಸಾಕು ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷ ಆಗಿಬಿಡುತ್ತಾರೆ. ಮೊದಲಿಗೆ…

ಬಣ್ಣದ ಲೋಕದಲ್ಲಿ ಮಾದಕ ನಟಿ ಎಂತಲೇ ಕರೆಯಲಾಗುವ ಸನ್ನಿ ಲಿಯೋನ್ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಸಿನೆಮಾ ಶೆಡ್ಯೂಲ್ ಗಳಿಂದ ಖಾಲಿ ಸಮಯ ಸಿಕ್ಕರೇ ಸಾಕು ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷ ಆಗಿಬಿಡುತ್ತಾರೆ. ಮೊದಲಿಗೆ ಪೋರ್ನ್ ಸ್ಟಾರ್‍ ಆಗಿದ್ದ ಸನ್ನಿ ಇದೀಗ ಅದರಿಂದ ಹೊರಬಂದು ಪೂರ್ಣ ಪ್ರಮಾಣದಲ್ಲಿ ನಟಿಯಾಗಿದ್ದಾರೆ. ಅನೇಕ ಸಿನೆಮಾಗಳಲ್ಲಿ ಆಕೆ ನಟಿಯಾಗಿ ಹಾಗೂ ಕೆಲವೊಂದು ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ ಗಳ ಮೂಲಕ ಸಹ ಫೇಮ್ ಪಡೆದುಕೊಂಡಿದ್ದಾರೆ. ಇದೀಗ ಆಕೆ ಗಂಗಾರತಿ ಮಾಡುತ್ತಾ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.

ಹಾಟ್ ಬ್ಯೂಟಿ ಸನ್ನಿ ಲಿಯೋನ್ ಪೋರ್ನ್ ಸ್ಟಾರ್‍ ಎಂಬ ಮುದ್ರೆಯನ್ನು ತೊಡೆದು ಹಾಕಿ ಸಿನೆಮಾಗಳಲ್ಲಿ ನಟಿಸುತ್ತಾ ಖ್ಯಾತಿ ಪಡೆದುಕೊಳ್ಳುತ್ತಿದ್ದಾರೆ. ಬಲವಾದ ಪಾತ್ರಗಳುಳ್ಳ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ಸೌತ್ ನಲ್ಲೂ ಸಹ ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಸಹ ಮಾಡಿದ್ದಾರೆ.ಇದೀಗ ಆಕೆ ವಾರಣಾಸಿಗೆ ಹೋಗಿದ್ದು, ಅಲ್ಲಿನ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಾರಣಾಸಿಯಲ್ಲಿ ಆಕೆ ರಾತ್ರಿಯವರೆಗೂ ಇದ್ದು, ಗಂಗಾ ಆರತಿಯಲ್ಲಿ ಭಾಗಿಯಾಗಿದ್ದಾರೆ. ಸನ್ನಿ ತಮ್ಮ ಮ್ಯೂಸಿಕ್ ವಿಡಿಯೋ ಥರ್ಡ್ ಪಾರ್ಟಿ ಪ್ರಚಾರದಲ್ಲಿದ್ದು, ಈ ನಡುವೆ ಆಕೆ ಹಿಂದೂಗಳ ಪವಿತ್ರ ಕ್ಷೇತ್ರವಾದ ವಾರಣಾಸಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಗಂಗಾ ಆರತಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ನಟಿಯ ಈ ವಿಡಿಯೋ ಕಂಡ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇನ್ನೂ ಸನ್ನಿ ಲಿಯೋನ್ ಈ ವಿಡಿಯೋದಲ್ಲಿ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡಿದ್ದಾರೆ. ಗಂಗಾ ಆರತಿಯಲ್ಲಿ ಆಕೆ ಪಿಂಕ್ ಸಲ್ವಾರ್‍ ನಲ್ಲಿ ಮಿಂಚಿದ್ದಾರೆ. ಈ ವೇಳೆ ಆಕೆಯೊಂದಿಗೆ ಮಾಜಿ ಐಎಎಸ್ ಅಧಿಕಾರಿ ಅಭಿಷೇಕ್ ಸೀಂಗ್ ಸಹ ಇದ್ದು, ನಟ, ನಟಿ, ಅರ್ಚಕರು ಸೇರಿದಂತೆ ಹಲವರೊಂದಿಗೆ ಗಂಗಾ ಆರತಿಯಲ್ಲಿ ಪಾಲ್ಗೊಂಡಿರುವ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನನಗೆ ಕಾಶಿ ಪ್ರವಾಸ ತುಂಬಾನೆ ವಿಶೇಷವಾಗಿದೆ. ಗಂಗಾ ನದಿಯಲ್ಲಿ ದೋಣಿ ವಿಹಾರದ ಜೊತೆಗೆ ಚಹಾ ಕುಡಿದೆ. ಬನಾರಸಿ ಪಾನ್ ತಿಂದೆ. ಭಾರತ ವಿಶ್ವಕಪ್ ಗೆಲ್ಲಲಿ ಎಂದು ಶುಭಾಷಯಗಳನ್ನು ಸಹ ಕೋರಿದ್ದಾರೆ.

ಈ ವಿಡಿಯೋವನ್ನು ಸನ್ನಿ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಡಿಮೆ ಸಮಯದಲ್ಲೇ ಭಾರಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಇನ್ನೂ ಸನ್ನಿ ಲಿಯೋನ್ ಥರ್ಡ್ ಪಾರ್ಟಿ ಮ್ಯೂಸಿಕ್ ವಿಡಿಯೋ ನ.15 ರಂದು ಬಿಡುಗಡೆಯಾಗಿದೆ.