ಮತ್ತೆ ಮದುಮಗಳಂತೆ ಕಾಣಿಸಿಕೊಂಡ ಕಾಂಟ್ರವರ್ಸಿ ನಟಿ ರಾಖಿ ಸಾವಂತ್, ಮೂರನೇ ಮದುವೆಯಾಗುತ್ತಾರಾ?

Follow Us :

ಬಾಲಿವುಡ್ ನ ಐಟಂ ಬಾಂಬ್ ಎಂತಲೇ ಖ್ಯಾತಿ ಪಡೆದುಕೊಂಡ ರಾಖಿ ಸಾವಂತ್ ಪ್ರತಿನಿತ್ಯ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಕಳೆದೆರಡು ತಿಂಗಳಿನಿಂದ ಸದಾ ಅವರ ಹೆಸರು ಕೇಳಿಬರುತ್ತಲೇ ಇದೆ. ಸಿನೆಮಾ ಕಥೆಯಂತೆ ಆಕೆಯ ಲವ್ ಸ್ಟೋರಿ ಸಹ ಸಾಗಿದೆ. ಮೈಸೂರು ಮೂಲದ ಆದಿಲ್ ಖಾನ್ ದುರಾನಿ ಎಂಬಾತನೊಂದಿಗೆ ಪ್ರೇಮಪಯಣ, ಬಳಿಕ ನಿಗೂಡ ಮದುವೆ, ಬಳಿಕ ಆರೋಪಗಳು ಮಾಡಿದ್ದು, ಇದಾದ ನಂತರ ಆದಿಲ್ ನನ್ನು ಜೈಲಿಗೆ ಕಳುಹಿಸಿದ್ದು, ಹೀಗೆ ಅವರ ಲವ್ ಸ್ಟೋರಿ ಅನೇಕ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಇದೆ. ಇದೀಗ ಆಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮದುಮಗಳಂತೆ ಕಾಣಿಸಿಕೊಂಡಿದ್ದು ಮೂರನೇ ಮದುವೆ ಆಗುತ್ತಿದ್ದಾರಾ ರಾಖಿ ಎಂಬ ಅನುಮಾನ ಬರುವಂತೆ ಮಾಡಿದ್ದಾರೆ.

ಆದಿಲ್ ಖಾನ್ ಗೆ ಅನೈತಿಕ ಸಂಬಂಧ ಇದೆ. ಬೇರೆ ಯುವತಿಯ ಜೊತೆ ತಿರುಗಾಡುತ್ತಿದ್ದಾನೆ. ಆಕೆಯನ್ನು ಬಿಟ್ಟು ಬಿಡುತ್ತೇನೆ ಎಂದು ನನ್ನ ಮೇಲೆ ಆಣೆ ಮಾಡಿದ್ದ. ಆದರೂ ಸಹ ಆತ ಆ ಯುವತಿಯನ್ನು ಬಿಡದೇ ಆಕೆಯೊಂದಿಗೆ ಅಫೈರ್‍ ನಡೆಸುತ್ತಿದ್ದಾನೆ. ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂಬೆಲ್ಲಾ ಗಂಭೀರ ಆರೋಪಗಳನ್ನು ಮಾಡಿ ಆದಿಲ್ ವಿರುದ್ದ ಎಫ್‌.ಐ.ಆರ್‍ ದಾಖಲಿಸಿದರು. ಬಳಿಕ ಆದಿಲ್ ನನ್ನು ಜೈಲಿಗೆ ಸಹ ಕಳುಹಿಸಿದ್ದರು. ಅಷ್ಟೇಅಲ್ಲದೇ ಆದಿಲ್ ನನ್ನನ್ನು ಮದುವೆಯಾಗಿದ್ದಾರೆ. ನನಗೆ ನ್ಯಾಯ ಬೇಕು, ನಾನು ಹಿಂದೂ ಆಗಿರುವ ಕಾರಣ ನನ್ನನ್ನು ಒಪ್ಪಿಕೊಳ್ಳುವುದಿಲ್ಲ. ನಾನು ಇಸ್ಲಾಂಗೆ ಮತಾಂತರವಾಗಿಯೇ ಆಆದಿಲ್ ನನ್ನು ಮದುವೆಯಾಗಿದ್ದೇನೆ. ಆದರೆ ಅವರ ತಂದೆ ನನ್ನನ್ನು ಒಪ್ಪುತ್ತಿಲ್ಲ. ತಲಾಖ್ ಕೊಡುವುದಾಗಿಯೂ ಸಹ ಬೆದರಿಕೆ ಹಾಕುತ್ತಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದರು.

ಇದೀಗ ರಾಖಿ ಮೂರನೇ ಮದುವೆಗೆ ಸಿದ್ದರಾಗಿದ್ದಾರೆ ಎಂಬಂತೆ ಮದುಮಗಳಂತೆ ಕಾಣಿಸಿಕೊಂಡಿದ್ದಾರೆ.  ಮದುಮಗಳಂತೆ ಕಾಣಿಸಿಕೊಂಡಿದ್ದು ಪುಲ್ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾ ಖಾತೆಯಲ್ಲಿ ವೈರಲ್ ಆಗಿದೆ. ಕೈಯಲ್ಲಿ ಬಣ್ಣದ ಬಳೆಗಳು, ಸುಂದರವಾದ ಡ್ರೆಸ್ ಧರಿಸಿ ಮಾದ್ಯಮಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಗೋಲ್ಡನ್ ಬ್ರೈಡಲ್ ಲೆಹಂಗಾ ಧರಿಸಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳನ್ನು ನೋಡಿದರೇ ರಾಖಿ ಮೂರನೇ ಮದುವೆಯಾಗಲಿದ್ದಾರೆ ಎಂಬ ಅನುಮಾನಗಳು ಮೂಡದೇ ಇರಲಾರದು. ಆದರೆ ರಾಖಿ ಈ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ. ನೀವು ಯಾರೂ ಊಹಿಸದಂತೆ ನನ್ನ ಮದುವೆಯ ಪೊಟೋಶೂಟ್ ಅಲ್ಲ. ನನ್ನ ಗಂಡ ಮೋಸ ಮಾಡಿದ್ದಾನೆ. ನಾನು ಸತ್ತರೂ ಮತ್ತೊಂದು ಮದುವೆಯಾಗುವುದಿಲ್ಲ. ನನ್ನ ಹೊಸ ಹಾಡು ಒಂದು ಬರಲಿದ್ದು, ಅದಕ್ಕಾಗಿ ಈ ಗೆಟಪ್ ಅಷ್ಟೆ ಎಂದು ಹೇಳಿದ್ದಾರೆ.

ಇನ್ನೂ ಆದಿಲ್ ಬಗ್ಗೆ ಸಹ ಆಕ್ರೋಷ ಹೊರಹಾಕಿದ್ದಾರೆ. ಆದಿಲ್ ಒಬ್ಬ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಮೋಸಗಾರ. ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿದ್ದ, ನಂತರ ನನ್ನ ಹಣ ತೆಗೆದುಕೊಂಡು ಓಡಿಹೋದವನು. ಅವನಿಗೆ ನಾನು ಹಣ ಕೊಟ್ಟಿದ್ದೆ. ಅದರಿಂದ ನನ್ನ ತಾಯಿಗೆ ಚಿಕಿತ್ಸೆ ಕೊಡಿಸಲು ಆಗಲಿಲ್ಲ. ಆಕೆ ತೀರಿಕೊಂಡರು ಎಂದೂ ಆದಿಲ್ ಬಗ್ಗೆ ಆಕ್ರೋಷ ಹೊರಹಾಕಿದ್ದಾರೆ.