ಇಂಟರ್ ನೆಟ್ ನಲ್ಲಿ ಭಾರಿ ಸಂಚಲನ ಮೂಡಿಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾರ್ಟಿನ್ ಟೀಸರ್….!

Follow Us :

ಸ್ಯಾಂಡಲ್ ವುಡ್ ನಲ್ಲಿ ತುಂಬಾನೆ ನಿರೀಕ್ಷೆ ಹುಟ್ಟಿಸಿದ ಸಿನೆಮಾಗಳಲ್ಲಿ ಧ್ರುವಾ ಸರ್ಜಾರವರ ಮಾರ್ಟಿನ್ ಸಿನೆಮಾ ಸಹ ಒಂದಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ಮಾರ್ಟಿನ್ ಸಿನೆಮಾದ ಟ್ರೈಲರ್‍ ಅದ್ದೂರಿಯಾಗಿ ಲಾಂಚ್ ಆಗಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಈ ಟೀಸರ್‍ ಮೊದಲಿಗೆ ಬಿಡುಗಡೆಯಾಗಿ ಬಳಿಕ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಯಿತು. ಇನ್ನೂ ಈ ಟೀಸರ್‍ ಬಿಡುಗಡೆಯಾದ ಕಡಿಮೆ ಸಮಯದಲ್ಲೇ ಭಾರಿ ವ್ಯೂವ್ಸ್ ಪಡೆದುಕೊಂಡಿದೆ. ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸಿದೆ ಎನ್ನಬಹುದಾಗಿದೆ.

ಸ್ಯಾಂಡಲ್ ವುಡ್ ನಲ್ಲಿ ಆಕ್ಷನ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದುಕೊಂಡ ಧ್ರುವ ಸರ್ಜಾ ಭಾರಿ ಆಕ್ಷನ್ ಸಿನೆಮಾ ಮಾರ್ಟಿನ್ ಎಂದು ಹೇಳಬಹುದಾಗಿದೆ. ಎ.ಪಿ. ಅರ್ಜುನ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮಾರ್ಟಿನ್ ಸಿನೆಮಾ ಸೆಟ್ಟೇರಿದೆ. ಇನ್ನೂ ಇತ್ತೀಚಿಗಷ್ಟೆ ಈ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿದೆ. ಇನ್ನೂ ಟೀಸರ್‍ ನೋಡಲು ಸಹ ಟಿಕೆಟ್ ಇದ್ದು, ಟೀಸರ್‍ ನೊಡಿದ ಬಳಿಕೆ ಟಿಕೆಟ್ ಹಣಕ್ಕೆ ಯಾವುದೇ ಮೋಸವಿಲ್ಲ ಎಂದು ವೀಕ್ಷಕರು ತಿಳಿಸಿದ್ದಾರೆ. ಇನ್ನೂ ಈ ಸಿನೆಮಾ ಕೆಜಿಎಫ್ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಸಿನೆಮಾ ಸದ್ದು ಮಾಡುತ್ತಿದೆ. ಈ ಸಿನೆಮಾದ ಟೀಸರ್‍ ನೋಡಿದ ಅನೇಕರು ಭಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಪರಭಾಷಾ ನಟರೂ ಸೇರಿದಂತೆ ತಂತ್ರಜ್ಞರೂ ಸಹ ಮನಸಾರೆ ಹಾಡಿ ಹೊಗಳಿದ್ದಾರೆ. ಇನ್ನೂ ಟೀಸರ್‍ ನೋಡಿದ ಬಾಲಿವುಡ್ ಮಂದಿ ಸಹ ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ.

ಸಾಹಸ ಪ್ರಧಾನ ಸಿನೆಮಾ ಆಗಿರುವ ಮಾರ್ಟಿನ್ ಟೀಸರ್‍ ಮೂಲಕ ಸಿನೆಮಾದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಭಾರಿ ದೇಹದ ಮೈಕಟ್ಟು ಹೊಂದಿರುವ ಧ್ರುವ ಸರ್ಜಾ ಹೊಸದಾಗಿ ಬಲಶಾಲಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಟೀಸರ್‍ ನಲ್ಲಿರುವಂತೆ ಹೊಡೆದಾಟ, ಗನ್ ಶೂಟ್, ಬಾಂಬುಗಳು ಭಾರಿ ಸದ್ದು ಮಾಡಿದೆ. ಅದರಲ್ಲೂ ಕಾರುಗಳ ಚೇಸ್ ಮಾಡುವಂತಹ ದೃಶ್ಯಗಳು ಮತಷ್ಟು ಹೈಪ್ ಕ್ರಿಯೇಟ್ ಮಾಡಿದೆ. ಪಾಕಿಸ್ಥಾನದಲ್ಲಿ ಬಂಧಿಯಾಗಿರುವ ವ್ಯಕ್ತಿಯ ಪಾತ್ರದಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಇನ್ನೂ ಭಾರತಕ್ಕೂ ಹಾಗೂ ಪಾಕಿಸ್ಥಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಸಂಬಂಧ ಏನು ಎಂಬುದರ ಬಗ್ಗೆ ಮತಷ್ಟು ಕುತೂಹಲ ಮೂಡಿದೆ. ಇನ್ನೂ ಭಾರಿ ನಿರೀಕ್ಷೆಯೊಂದಿಗೆ ಈ ಸಿನೆಮಾ ತೆರೆಗೆ ತರಲಿದ್ದಾರೆ. ಇಡೀ ಚಿತ್ರತಂಡ ಭಾರಿ ನಿರೀಕ್ಷೆಯಿಂದ ಕಠಿಣ ಪರಿಶ್ರಮದಿಂದ ಸಿನೆಮಾವನ್ನು ತೆರೆಗೆ ತಂದಿದ್ದಾರೆ. ಇನ್ನೂ ಪ್ಯಾನ್ ಇಂಡಿಯಾ ಸಿನೆಮಾ ಇದಾಗಿದ್ದು, ದೇಶದ ಸಿನಿರಂಗದಲ್ಲಿ ಮತ್ತೊಂದು ಕನ್ನಡದ ಸಿನೆಮಾ ಧೂಳೆಬ್ಬಿಸಲಿದೆ ಎನ್ನಲಾಗುತ್ತಿದೆ.

ಇನ್ನೂ ಟೀಸರ್‍ ಬಿಡುಗಡೆಯಾದ 24 ಗಂಟೆಗಳಲ್ಲೇ ಭಾರಿ ವೀಕ್ಷಣೆ ಪಡೆದುಕೊಂಡಿದೆ. ಅಷ್ಟೇಅಲ್ಲದೇ ಕೆಜಿಎಫ್-2 ಟೀಸರ್‍ ವೀಕ್ಷಣೆಯ ದಾಖಲೆ ಸಹ ಮುರಿಯುತ್ತದೆ ಎಂಬ ನಿರೀಕ್ಷೆ ಸಹ ಇತ್ತು. ಆದರೆ ಕೆಜಿಎಫ್-2 ರೆಕಾರ್ಡ್ ಮುರಿಯುವಲ್ಲಿ ವಿಫಲವಾಗಿದೆ. ಆದರೆ 24 ಗಂಟೆಗಳಲ್ಲಿ 33 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಸ್ಯಾಂಡಲ್ ವುಡ್ ನಲ್ಲಿ 24  ಗಂಟೆಗಳಲ್ಲಿ ಹೆಚ್ಚು ವೀಕ್ಷಣೆ ಪಡೆದುಕೊಂಡ ಕನ್ನಡದ ಟೀಸರ್‍ ಪಟ್ಟಿಯಲ್ಲಿ ಮಾರ್ಟಿನ್ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನೂ ಇಂಟರ್‍ ನೆಟ್ ನಲ್ಲಿ ಮಾರ್ಟಿನ್ ಟೀಸರ್‍ ಭಾರಿ ಸದ್ದು ಮಾಡುತ್ತಿದೆ.