Film News

ವಿವಾದದ ಸುಳಿಯಲ್ಲಿ ನಟಿ ಐಶ್ವರ್ಯ ರಾಜೇಶ್, ಆಕೆಯ ಮನೆಗೆ ಬಿಗಿ ಭದ್ರತೆ, ಅಷ್ಟಕ್ಕೂ ಆಗಿದ್ದೇನು?

ಖ್ಯಾತ ಸೀನಿಯರ್‍ ನಟಿ ಶ್ರೀಲಕ್ಷ್ಮಿ ಯವರ ಕುಟುಂಬಕ್ಕೆ ಸೇರಿದ ಐಶ್ವರ್ಯ ರಾಜೇಶ್ ವಿಭಿನ್ನ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದಕೊಂಡಿದ್ದಾರೆ. ಆಕೆ ತೆಲುಗು ನಟಿಯಾದರೂ ಸಹ ಆಕೆ ತಮಿಳು ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ವಿವಾದಲ್ಲೊಂದು ಸಿಲುಕಿಕೊಂಡಿದ್ದು, ಆಕೆಯ ಮೇಲೆ ಧಾಳಿ ನಡೆಯುವ ಸಾಧ್ಯತೆಯಿರುವ ಕಾರಣದಿಂದ ಆಕೆಯ ಮನೆಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಆಕೆ ಯಾವ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ವಿಚಾರಕ್ಕೆ ಬಂದರೇ,

ನಟಿ ಐಶ್ವರ್ಯ ರಾಜೇಶ್ ವಿಭಿನ್ನ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆ ಸಿನಿರಂಗದಲ್ಲಿ ತುಂಬಾನೆ ಕಷ್ಟಪಟ್ಟು ಬಂದಿದ್ದಾರೆ. ಆಕೆಯ ತಂದೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದರು. ಆಕೆಯ ಬಾಲ್ಯದಲ್ಲೇ ತಂದೆ ಅನಾರೋಗ್ಯದ ಕಾರಣದಿಂದ ಮೃತಪಟ್ಟರು. ಇನ್ನೂ ತಂದೆಯ ಮರಣದ ಬಳಿಕ ಆಕೆಯ ಕುಟುಂಬದಲ್ಲೂ ಸಹ ಅನೇಕ ಕಷ್ಟಗಳು ಎದುರಾದವು. ತುಂಬಾ ಸಮಸ್ಯೆಗಳನ್ನು ಎದುರಿಸಿ ಸಿನಿರಂಗದಲ್ಲಿ ಸಕ್ಸಸ್ ಆದರು. ಸಿನಿರಂಗದಲ್ಲಿ ಆಕೆ ಸ್ಟಾರ್‍ ನಟಿಯಾಗಿ ಹೆಸರು ಗಳಿಸಿಕೊಳ್ಳಲು ತುಂಬಾನೆ ಕಷ್ಟಪಟ್ಟರು. ತಮಿಳು ಹಾಗೂ ತೆಲುಗಿನಲ್ಲಿ ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಾ, ಹಿರೋಯಿನ್ ಆಗಿ, ಸ್ಪೇಷಲ್ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ಆಕೆ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.

ಕಾಲಿವುಡ್ ನಿರ್ದೇಶಕ ನೆಲ್ಸನ್ ವೆಂಕಟೇಶ್ ನಿರ್ದೇಶನದ ಫರ್ಹಾನಾ ಎಂಬ ಸಿನೆಮಾದಲ್ಲಿ ಐಶ್ವರ್ಯ ರಾಜೇಶ್ ನಟಿಸಿದ್ದಾರೆ. ಈ ಸಿನೆಮಾ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಸಿನೆಮಾ ಒಂದು ಸಮುದಾಯವನ್ನು ಕೀಳಾಗಿ ನೋಡುವಂತಿದೆ ಎಂದು ಕಾಲಿವುಡ್ ನಲ್ಲಿ ದೊಡ್ಡ ವಿವಾದ ಹುಟ್ಟಿಕೊಂಡಿದೆ. ಈ ಕಾರಣದಿಂದ ನಟಿ ಐಶ್ವರ್ಯ ರಾಜೇಶ್ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆಕೆಯ ಮೇಲೆ ಯಾವಾಗಾದರೂ ಧಾಳಿ ನಡೆಯುವ ಅವಕಾಶಗಳಿದ್ದು, ಐಶ್ವರ್ಯ ರಾಜೇಶ್ ಮನೆಯ ಬಳಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದಾರೆ. ಇನ್ನೂ ಫರ್ಹಾನಾ ಸಿನೆಮಾದಲ್ಲಿ ಐಶ್ವರ್ಯ ಮುಸ್ಲೀಂ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ. ಬುರ್ಖಾ ಧರಿಸಿಕೊಂಡು ಆಕೆ ಪ್ರಪಂಚವನ್ನು ಸುತ್ತಾಡುತ್ತಾ ಕಾಲ್ ಸೆಂಟರ್‍ ನಲ್ಲಿ ಕೆಲಸ ಮಾಡುವಂತಹ ಪಾತ್ರದಲ್ಲಿ ಆಕೆ ನಟಿಸಿದ್ದಾರೆ. ಈ ಕಾರಣದಿಂದಲೇ ವಿವಾದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದ ಬಗ್ಗೆ ಈಗಾಗಲೇ ನಿರ್ದೇಶಕ ನೆಲ್ಸನ್ ವೆಂಕಟೇಶ್ ಸಹ ಸ್ಪಷ್ಟನೆ ನೀಡಿದ್ದಾರೆ. ಈ ಸಿನೆಮಾಗೆ ಕೆಲವರು ಮಾತ್ರ ವಿರೋಧಿಸುತ್ತಿದ್ದಾರೆ. ಸೆನ್ಸಾರ್‍ ಬೋರ್ಡ್ ಕ್ಲೀನ್ ಚೀಟ್ ಕೊಟ್ಟ ಬಳಿಕ ಇದೀಗ ಸಿನೆಮಾ ಮೇಲೆ ವಿವಾದ ಮಾಡುವುದು ಏಕೆ, ಅಷ್ಟಕ್ಕೂ ನಮ್ಮ ಸಿನೆಮಾ ಯಾವುದೇ ಧರ್ಮ ಅಥವಾ ಮತಕ್ಕೆ ಸೇರಿದ್ದಲ್ಲ. ಒಂದು ಒಳ್ಳೆಯ ಸಿನೆಮಾ ಮಾಡಬೇಕು ಎಂಬುದು ನಮ್ಮ ಗುರಿ ಅಷ್ಟೆ. ಮಾನವೀಯತೆಯನ್ನು ಸಾರುವುದು ನಮ್ಮ ಪ್ರಯತ್ನ ಎಂದು ಹೇಳಿದ್ದಾರೆ. ಇನ್ನೂ ಈ ಸಿನೆಮಾ ಕಳೆದ ಮೇ.12 ರಂದು ಬಿಡುಗಡೆಯಾಗಿದೆ.

Most Popular

To Top