Film News

ಪ್ರಭಾಸ್ – ಕೃತಿ ಎಂಗೇಜ್ ಮೆಂಟ್ ರೂಮರ್ ಬಗ್ಗೆ ನಟಿ ಕೃತಿ ಸನನ್ ಹೇಳಿದ್ದೇನು?

ಕಳೆದ ಕೆಲವು ದಿನಗಳಿಂದ ಸ್ಟಾರ್‍ ನಟ ಪ್ರಭಾಸ್ ಹಾಗೂ ಕೃತಿ ಸನನ್ ನಡುವೆ ಅಫೈರ್‍ ನಡೆಯುತ್ತಿದೆ ಎಂದು ಅನೇಕ ರೂಮರ್‍ ಗಳು ಹರಿದಾಡುತ್ತಲೇ ಇದೆ. ಇದು ಸಾಲದು ಎಂಬಂತೆ ಖ್ಯಾತ ಸಿನೆಮಾ ಕ್ರಿಟಿಕ್ ಉಮೈರ್‍ ಸಂಧೂ ಎಂಬಾತ ತನ್ನ ಟ್ವಿಟರ್‍ ಖಾತೆಯಲ್ಲಿ ಮುಂದಿನ ವಾರ ಪ್ರಭಾಸ್-ಕೃತಿ ಎಂಗೇಜ್ ಮೆಂಟ್, ಮಾಲ್ಡೀವ್ಸ್ ನಲ್ಲಿ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಸಖತ್ ವೈರಲ್ ಆಗಿತ್ತು. ಇದೀಗ ಈ ಕುರಿತು ಕೃತಿ ಸನನ್ ರಿಯಾಕ್ಟ್ ಆಗಿದ್ದಾರೆ. ಈ ಬಗ್ಗೆ ಕೃತಿ ಹೇಳಿದ್ದೇನು ಎಂಬ ವಿಚಾರಕ್ಕೆ ಬಂದರೇ,

ತೆಲುಗು ಸಿನಿರಂಗದಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಿಲರ್‍ ಎಂದರೇ ಪ್ರಭಾಸ್ ಎಂದೇ ಹೇಳಬಹುದು. ಪ್ರಭಾಸ್ ಹಾಗೂ ಅನುಷ್ಕಾ ನಡುವೆ ಪ್ರೇಮಾಯಣ ಸಾಗುತ್ತಿದೆ. ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸುಮಾರು ವರ್ಷಗಳಿಂದ ಹರಿದಾಡುತ್ತಲೇ ಇತ್ತು. ಆದರೆ ಅವರಿಬ್ಬರು ಎಂದೂ ಸಹ ಈ ಅಫೈರ್‍ ಗಳ ಬಗ್ಗೆ ರಿಯಾಕ್ಟ್ ಆಗಿರಲಿಲ್ಲ. ಇನ್ನೂ ಪ್ರಭಾಸ್ ಹಾಗೂ ಕೃತಿ ಸನನ್ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ ಆದಿಪುರುಷ್ ಸಿನೆಮಾದಲ್ಲಿ ನಟಿಸಿದ್ದಾರೆ.  ಈ ಸಿನೆಮಾದ ಶೂಟಿಂಗ್ ಸಮಯದಲ್ಲೇ ಪ್ರಭಾಸ್ ಹಾಗೂ ಕೃತಿ ಸನನ್ ನಡುವೆ ಪ್ರೀತಿ ಹುಟ್ಟಿದೆ ಎಂಬ ರೂಮರ್‍ ಶುರುವಾಗಿತ್ತು. ಅದು ಎಂಗೇಜ್ ಮೆಂಟ್ ವರೆಗೂ ಹೋಗಿದೆ ಎಂದು ಸುದ್ದಿಗಳು ಹರಿದಾಡುತ್ತಲೇ ಇದೆ. ಇದಕ್ಕೆ ಬಲ ಕೊಡುವಂತೆ ಬಾಲಿವಿಡ್ ನಟ ವರುಣ್ ಧವನ್ ಸಹ ಕೆಲವೊಂದು ಪರೋಕ್ಷ ಹೇಳಿಕೆಗಳನ್ನು ನೀಡಿದ ಕಾರಣದಿಂದ ರೂಮರ್‍ ಮತಷ್ಟು ಹೆಚ್ಚಾಯಿತು.

ಇನ್ನೂ ಖ್ಯಾತ ಸಿನೆಮಾ ಕ್ರಿಟಿಕ್ ಉಮೈರ್‍ ಸಂಧು ತನ್ನ ಟ್ವಿಟರ್‍ ಖಾತೆಯಲ್ಲಿ ಪ್ರಭಾಸ್ ಹಾಗೂ ಕೃತಿ ಸನನ್ ಎಂಗೇಜ್ ಮೆಂಟ್ ಮುಂದಿನ ವಾರ ಮಾಲ್ಟೀವ್ಸ್ ನಲ್ಲಿ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಈ ಟ್ವೀಟ್ ಸಿನಿವಲಯದಲ್ಲಿ  ಹಾಟ್ ಟಾಪಿಕ್ ಆಗಿತ್ತು. ಇನ್ನೂ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕೃತಿ ಸನನ್ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿಗಳು, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರಭಾಸ್ ಜೊತೆಗೆ ನನಗೆ ಯಾವುದೇ ರೀತಿಯ ಅಪೈರ್‍ ಇಲ್ಲ. ಜೊತೆಗೆ ನಾವು ಮದುವೆ ಸಹ ಆಗುತ್ತಿಲ್ಲ. ಇದೀಗ ಕೇಳಿಬರುತ್ತಿರುವ ಎಲ್ಲಾ ಸುದ್ದಿಗಳು ಕೇವಲ ರೂಮರ್‍ ಗಳಷ್ಟೆ ಎಂದು ರೂಮರ್‍ ಗಳಿಗೆ ಪುಲ್ ಸ್ಟಾಪ್ ಇಟ್ಟಿದ್ದಾರೆ.

ಇನ್ನೂ ಸುಮಾರು ವರ್ಷಗಳಿಂದ ಪ್ರಭಾಸ್ ಮದುವೆಯ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಲೇ ಇದೆ. ಇದೀಗ ಪ್ರಭಾಸ್-ಕೃತಿ ಬಗ್ಗೆ ಸಹ ರೂಮರ್‍ ಗಳು ಹರಿದಾಡುತ್ತಿವೆ. ಈಗಾಗಲೇ ಅನೇಕ ಬಾರಿ ಕೃತಿ ಸನನ್ ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಹ ರೂಮರ್‍ ಗಳು ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಇವರಿಬ್ಬರ ಕಾಂಬಿನೇಷನ್ ನಲ್ಲಿ ಆದಿಪುರುಷ್ ಸಿನೆಮಾ ಬಿಡುಗಡೆಯಾಗಲಿದೆ. ಜೂ.16 ರಂದು ಈ ಸಿನೆಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಜೊತೆಗೆ ಪ್ರಭಾಸ್ ಮತಷ್ಟು ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top