Film News

ಫಸ್ಟ್ ಕಿಸ್ ಬಳಿಕೆ ಡೆಟಾಲ್ ನಿಂದ ಬಾಯನ್ನು ತೊಳೆದುಕೊಂಡೆ ಎಂದ ನಟಿ ನಿನಾ ಗುಪ್ತಾ, ವೈರಲ್ ಆದ ಇಂಟ್ರಸ್ಟಿಂಗ್ ಕಾಮೆಂಟ್ಸ್…..!

ಅನೇಕ ನಟಿಯರು ಸಿನೆಮಾಗಳಲ್ಲಿ ಕೆಲವೊಂದು ಕಿರಿಕಿರಿಯನ್ನು ಅನುಭವಿಸಿರುತ್ತಾರೆ. ಕೆಲವೊಂದು ಸಮಯದಲ್ಲಿ ಅಂತಹ ಘಟನೆಗಳ ಬಗ್ಗೆ ಒಪೆನ್ ಆಗುತ್ತಿರುತ್ತಾರೆ. ಇದೀಗ ಸಿನೆಮಾದಲ್ಲಿ ತಾನು ಎದುರಿಸಿದ ಕಹಿ ಘಟನೆಯೊಂದನ್ನು ರಿವೀಲ್ ಮಾಡಿದ್ದಾರೆ ಬಾಲಿವುಡ್ ನಟಿ ನಿನಾ ಗುಪ್ತಾ. ತನ್ನ ಫಸ್ಟ್ ಕಿಸ್ ಅನುಭವದ ಬಗ್ಗೆ ಆಕೆ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆಯ ಕಾಮೆಂಟ್ಸ್ ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ನೀನಾ ಗುಪ್ತಾ ಲಸ್ಟ್ ಸ್ಟೋರಿಸ್ 2 ಸಿರೀಸ್ ನಲ್ಲಿ ನಟಿಸಿದ್ದಾರೆ. ಈ ಸಿರೀಸ್ ನಲ್ಲಿ ವಿಜಯ್ ವರ್ಮಾ, ತಮನ್ನಾ, ಮೃಣಾಲ್ ಠಾಕೂರ್‍, ಕಾಜೋಲ್, ಅಮೃತ ಸುಭಾಷ್ ಮೊದಲಾದವರು ಪ್ರಧಾನ ಪಾತ್ರದಲ್ಲಿ ನಟಿಸಿದ ಈ ಸಿರೀಸ್ ಭಾರಿ ಸದ್ದು ಮಾಡುತ್ತಿದೆ. ಇನ್ನೂ ಈ ಸಿರೀಸ್ ಇಂದು (ಜೂ.29) ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ಹಾದಿಯಲ್ಲೇ ಈ ಚಿತ್ರತಂಡ ಪ್ರಮೋಷನ್ ಸಹ ತುಂಬಾ ಅದ್ದೂರಿಯಾಗಿ ನಿರ್ವಹಿಸಿದ್ದಾರೆ. ಈ ವೇಳೆ ನಟಿ ನೀನಾ ಗುಪ್ತಾ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ತನ್ನ ಫಸ್ಟ್ ಕಿಸ್ ವೇಳೆ ಆಕೆ ಎದುರಿಸಿದ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಷ್ಟಕ್ಕೂ ಫಸ್ಟ್ ಕಿಸ್ ಬಗ್ಗೆ ನೀನಾ ಗುಪ್ತಾ ಹೇಳಿದ್ದು ಏನು ಎಂಬ ವಿಚಾರಕ್ಕೆ ಬಂದರೇ,

ಸಂದರ್ಶನದಲ್ಲಿ ಮಾತನಾಡಿದ ನೀನಾ ಗುಪ್ತಾ ತನ್ನ ಕೆರಿಯರ್‍ ನಲ್ಲಿ ಆನ್ ಸ್ಕ್ರೀನ್ ನಲ್ಲಿ ಮೊದಲ ಲಿಪ್ ಕಿಸ್ ಅನುಭವವನ್ನು ಹಂಚಿಕೊಂಡಿದ್ದಾರೆ. ಆದರೆ ಆಕೆಯ ಕಾಮೆಂಟ್ಸ್ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ತಾನು ಕಿಸ್ ದೃಶ್ಯದಲ್ಲಿ ನಟಿಸಿದ ಬಳಿಕ ನಾನು ಡೆಟಾಲ್ ನಲ್ಲಿ ಬಾಯನ್ನು ತೊಳೆದುಕೊಂಡೆ. ನಟಿ ನಟರು ಎಂದು ಕೊಂಡವರು ಎಂತಹುದೇ ಸೀನ್ಸ್ ಗಳಲ್ಲಾದರೂ ಮಾಡಲೇ ಬೇಕಾಗುತ್ತದೆ. ಅದಕ್ಕಾಗಿ ಕೆಲವೊಮ್ಮೆ ಕೆಸರಿನಲ್ಲಿ ಇಳಿಯಬೇಕಾಗುತ್ತದೆ. ಕೆಲವೊಮ್ಮೆ ಗಂಟೆಗಟ್ಟಲೇ ಬಿಸಿಲಿನಲ್ಲಿ ನಿಲ್ಲಬೇಕಾಗುತ್ತದೆ. ಇನ್ನೂ ತಾನು ಲಿಪ್ ಕಿಸ್ ಮಾಡಿದ್ದು ಯಾರ ಜೊತೆ ಎಂಬ ವಿಚಾರವನ್ನೂ ಸಹ ಹೊರಹಾಕಿದ್ದಾರೆ. ಕೆಲವು ವರ್ಷಗಳ ಹಿಂದೆ ದಿಲೀಪ್ ಧಾವನ್ ಜೊತೆಗೆ ಒಂದು ಸೀರಿಯಲ್ ನಲ್ಲಿ ನಟಿಸಿದ್ದೇ. ಈ ವೇಳೆ ನಮ್ಮ ನಡುವೆ ಲಿಪ್ ಕಿಸ್ ದೃಶ್ಯವೊಂದನ್ನು ಚಿತ್ರೀಕರಿಸಲಾಗಿತ್ತು. ದೇಶದ ಟಿವಿ ಚರಿತ್ರೆಯಲ್ಲಿ ಇದೆ ಮೊದಲ ಲಿಪ್ ಕಿಸ್ ಎನ್ನಬಹುದು. ಈ ದಿನ ರಾತ್ರಿ ನನಗೆ ನಿದ್ದೆ ಮಾಡಲು ಸಹ ಆಗಲಿಲ್ಲ ಎಂದಿದ್ದಾರೆ.

ಅಷ್ಟೇಅಲ್ಲದೇ ಆ ಸಮಯದಲ್ಲಿ ನಾನು ದಿಲೀಪ್ ಸ್ನೇಹಿತರಲ್ಲ. ಅಂತಹ ಸಮಯದಲ್ಲಿ ಲಿಪ್ ಕಿಸ್ ದೃಶ್ಯ ಮಾಡಲು ತುಂಬಾ ಅಸೌಕರ್ಯವಾಗಿರುತ್ತದೆ. ಆದರೆ ಆತ ಸುಂದರವಾಗಿರುತ್ತಾನೆ. ಆದರೆ ಆ ಪರಿಸ್ಥಿತಿಯಲ್ಲಿ ಸೌಂದರ್ಯದೊಂದಿಗೆ ಕೆಲಸವಿರಲಿಲ್ಲ. ಆ ದೃಶ್ಯದ ಶೂಟಿಂಗ್ ವೇಳೆ ನಾನು ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಸಹ ಸಿದ್ದವಾಗಿರಲಿಲ್ಲ. ಆದರೂ ಸಹ ನಟಿಸಲೇ ಬೇಕಾದ ಸ್ಥಿತಿಯಿತ್ತು. ಕಿಸ್ ಶೂಟಿಂಗ್ ಬಳಿಕ ನಾನು ಡೆಟಾಲ್ ಮೂಲಕ ಬಾಯಿ ತೊಳೆದುಕೊಂಡೆ ಎಂದು ಹೇಳಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

Most Popular

To Top