Film News

ಆ ಸ್ಟಾರ್ ಕ್ರಿಕೆಟರ್ ಅನುಷ್ಕಾ ಶೆಟ್ಟಿ ಕ್ರಷ್ ಆಗಿದ್ದರಂತೆ, ಆತನೆಂದರೇ ಆಕೆಗೆ ತುಂಬಾ ಇಷ್ಟವಂತೆ, ಆತ ಯಾರು ಗೊತ್ತಾ?

ಸೌತ್ ಸಿನಿರಂಗದಲ್ಲಿ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ನಟಿ ಅನುಷ್ಕಾ ಶೆಟ್ಟಿಯವರನ್ನು ದೊಡ್ಡ ಪರದೆಯ ಮೇಲೆ ಕಂಡು ತಿಂಗಳುಗಳು ಕಳೆಯುತ್ತಿವೆ. ಬಾಹುಬಲಿ ಬಳಿಕ ಈಕೆ ಸಕ್ಸಸ್ ಕಂಡು ತಿಂಗಳುಗಳೇ ಕಳೆಯುತ್ತಿದೆ ಬಾಹುಬಲಿ ಸಿನೆಮಾ ಬಳಿಕ ಭಾಗಮತಿಯಲ್ಲಿ ಕಾಣಿಸಿಕೊಂಡ ಈಕೆ ತಮ್ಮ ಸ್ಪೀಡ್ ಕಡಿಮೆ ಮಾಡಿಕೊಂಡಿದ್ದಾರೆ. ಕೊನೆಯದಾಗಿ ಆಕೆ ನಿಶ್ಯಬ್ದಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನೂ ಸ್ಟಾರ್‍ ನಟಿ ಅನುಷ್ಕಾ ರವರಿಗೆ ಆ ಸ್ಟಾರ್‍ ಕ್ರಿಕೆಟಿಗ ಎಂದರೇ ತುಂಬಾ ಇಷ್ಟವಂತೆ. ಅಷ್ಟಕ್ಕೂ ಆ ಸ್ಟಾರ್‍ ಕ್ರಿಕೆಟಿಗ ಯಾರು ಎಂಬ ವಿಚಾರಕ್ಕೆ ಬಂದರೇ,

ನಟಿ ಅನುಷ್ಕಾ ಶೆಟ್ಟಿ ಸೂಪರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಅಂದಿನಿಂದ ಆಕೆ ಒಳ್ಳೆಯ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಕಡಿಮೆ ಸಮಯದಲ್ಲೇ ಆಕೆ ಸ್ಟಾರ್‍ ಡಂ ಪಡೆದುಕೊಂಡರು. ಅರುಂದತಿ, ಪಂಚಾಕ್ಷರಿ, ಭಾಗಮತಿ, ನಿಶ್ಯಬ್ದಂ ಸೇರಿದಂತೆ ಹಲವು ಲೇಡಿ ಓರಿಯೆಂಟೆಡ್ ಸಿನೆಮಾಗಳಲ್ಲೂ ಸಹ ನಟಿಸಿ ಸೈ ಎನ್ನಿಸಿಕೊಂಡರು. ಲೇಡಿ ಓರಿಯೆಂಟೆಡ್ ಸಿನೆಮಾಗಳಿಗೆ ಕೇರಾಫ್ ಅಡ್ರೆಸ್ ಸಹ ಆದರು ಎಂದರೇ ತಪ್ಪಾಗಲಾರದು. ಅನೇಕರ ಕ್ರಷ್ ಆಗಿರುವಂತಹ ಅನುಷ್ಕಾಗೆ ಆ ಸ್ಟಾರ್‍ ಕ್ರಿಕೆಟರ್‍ ಎಂದರೇ ತುಂಬಾ ಇಷ್ಟವಂತೆ. ಈ ವಿಚಾರವನ್ನು ಆಕೆ ಇತ್ತೀಚಿಗೆ ನಡೆದಂತಹ ಸಂದರ್ಶನವೊಂದರಲ್ಲಿ ಆಕೆ ರಿವೀಲ್ ಮಾಡಿದ್ದಾರೆ.

ಇನ್ನೂ ಅನುಷ್ಕಾ ಟೀನೇಜ್ ನಲ್ಲಿರುವಾಗ ಓರ್ವ ಸ್ಟಾರ್‍ ಕ್ರಿಕೆಟರ್‍ ರನ್ನು ತುಂಬಾ ಇಷ್ಟ ಪಟ್ಟಿದ್ದರಂತೆ. ಆತ ಬೇರೆಯಾರೂ ಅಲ್ಲ ಸ್ಟಾರ್‍ ಕ್ರಿಕೆಟರ್‍ ರಾಹುಲ್ ದ್ರಾವಿಡ್ ರವರಂತೆ. ಅನುಷ್ಕಾಗೆ ರಾಹುಲ್ ದ್ರಾವಿಡ್ ಎಂದರೇ ತುಂಬಾ ಇಷ್ಟವಿತ್ತಂತೆ. ಆತ ಎಂದರೇ ಆಕೆಗೆ ಪಂಚಪ್ರಾಣವಾಗಿತ್ತಂತೆ. ಆತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರಂತೆ. ಈ ಸುದ್ದಿಯನ್ನು ಆಕೆ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಆದರೆ ಸದ್ಯ ಆಕೆ ಯಾರೊಂದಿಗೂ ಸಹ ಪ್ರೀತಿಯಲ್ಲಿಲ್ಲವಂತೆ. ಜೊತೆಗೆ ಆಕೆಗೆ ಮದುವೆಯ ಬಗ್ಗೆ ಆಲೋಚನೆ ಮಾಡುವ ಸಮಯ ಸಹ ಇಲ್ಲ ಎಂದು ಅನೇಕ ಸಂದರ್ಶನಗಳಲ್ಲಿ ಆಕೆ ಹೇಳಿಕೊಂಡಿದ್ದಾರೆ. ಇದೀಗ ಅನುಷ್ಕಾ ರಾಹುಲ್ ದ್ರಾವಿಡ್ ತನ್ನ ಕ್ರಷ್ ಎಂದು ಹೇಳಿದ್ದು, ವೈಲರ್‍ ಆಗುತ್ತಿದೆ.

ಇನ್ನೂ ಆಕೆಯ ಸಂಪೂರ್ಣ ಗಮನ ಸಿನೆಮಾಗಳ ಮೇಲೆ ಇದೆಯಂತೆ. ಇನ್ನೂ ಅನುಷ್ಕಾ ಹಾಗೂ ಪ್ರಭಾಸ್ ನಡುವೆ ಲವ್ ಅಫೈರ್‍ ನಡೆಯುತ್ತಿದೆ ಎಂದು ಸುಮಾರು ವರ್ಷಗಳಿಂದ ಸುದ್ದಿ ಕೇಳಿಬರುತ್ತಲೇ ಇದೆ. ಆದರೆ ನಾವಿಬ್ಬರು ಒಳ್ಳೆಯ ಸ್ನೇಹಿತರು ಅಷ್ಟೆ ಬೇರೆ ಯಾವುದೇ ಸಂಬಂಧವಿಲ್ಲ ಎಂದು ಅನುಷ್ಕಾ ಹಾಗೂ ಪ್ರಭಾಸ್ ಸಹ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸದ್ಯ ಅನುಷ್ಕಾ ಶೆಟ್ಟಿ ಮಿಸ್ಟರ್‍ ಅಂಡ್ ಮಿಸ್ ಪೊಲಿಶೆಟ್ಟಿ ಸಿನೆಮಾದಲ್ಲಿ ಬ್ಯುಸಿಯಾಗಿದ್ದು, ಶೀಘ್ರದಲ್ಲೇ ಈ ಸಿನೆಮಾ ತೆರೆಗೆ ಬರಲಿದೆ.

Most Popular

To Top