ಯುವಕನ ಕೈ ಹಿಡಿದು ಬಂದ ಕಂಗನಾ, ಮಿಸ್ಟರಿ ಮ್ಯಾನ್ ಯಾರು, ಕಂಗನಾ ಮದುವೆಯಾದ್ರಾ? ವೈರಲ್ ಆದ ಪೊಟೋ….!

Follow Us :

ಬಾಲಿವುಡ್ ಫೈರ್‍ ಬ್ರಾಂಡ್ ಕಂಗನಾ ರಾಣಾವತ್ ಬಾಲಿವುಡ್ ಸ್ಟಾರ್‍ ನಟರೂ ಸೇರಿದಂತೆ ಅನೇಕ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಸದಾ ಒಂದಲ್ಲ ಒಂದು ವಿವಾದಿತ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಇದೀಗ ಕಂಗನಾ ವಿದೇಶಿ ಯುವಕನ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆತನ ಕೈ ಹಿಡಿದು ಬಂದಿದ್ದು, ಕಂಗನಾ ಸೀಕ್ರೇಟ್ ಆಗಿ ಮದುವೆಯಾದ್ರಾ ಆ ಮಿಸ್ಟರಿ ಮ್ಯಾನ್ ಯಾರು ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಬಾಲಿವುಡ್ ಸ್ಟಾರ್‍ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಮೇಲೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಜೊತೆಗೆ ರಾಜಕೀಯ ನಾಯಕರನ್ನೂ ಸಹ ಆಕೆ ವಿಮರ್ಶೆ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆಯನ್ನು ಕಾಂಟ್ರವರ್ಸಿ ಕ್ವೀನ್ ಎಂತಲೂ ಕರೆಯುತ್ತಾರೆ. ವಿವಾದಗಳಿಗೆ ಕೇರ್‍ ಆಫ್ ಅಡ್ರೆಸ್ ಎಂದರೇ ಕಂಗನಾ ರಾನೌತ್ ಎಂದು ಹೇಳಬಹುದು. ದೊಡ್ಡ ಸ್ಟಾರ್‍ ಗಳಾಗಲಿ, ಅಥವಾ ದೊಡ್ಡ ರಾಜಕಾರಣಿಗಳಾಗಲಿ ನೇರವಾಗಿ ಅವರ ಮೇಲೆ ಆರೋಪಗಳನ್ನು ಮಾಡಿಬಿಡುತ್ತಾರೆ. ಅವರನ್ನು ಎದುರಿಸಿ ಸಹ ನಿಲ್ಲುತ್ತಾರೆ. ಇನ್ನೂ ಕಂಗನಾ ಮದುವೆಯ ವಯಸ್ಸು ದಾಟಿದರೂ ಸಹ ಆಕೆ ಇನ್ನೂ ಮದುವೆಯಾಗಿಲ್ಲ, ಇದೀಗ ಆಕೆ ಯುವಕನೊಂದಿಗೆ ಕಾಣಿಸಿಕೊಂಡಿದ್ದು, ಆ ವ್ಯಕ್ತಿ ಯಾರು ಎಂಬ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ.

ನಟಿ ಕಂಗನಾ ಓರ್ವ ಮಿಸ್ಟರಿ ಮ್ಯಾನ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಓರ್ವ ಯುವಕನ ಕೈ ಹಿಡಿದು ಸೆಲೂನ್ ನಿಂದ ಹೊರ ಬರುತ್ತಿದ್ದಾಗ ಕಾಣಿಸಿಕೊಂಡಿದ್ದು, ಈ ಪೊಟೋ ಭಾರಿ ವೈರಲ್ ಆಗುತ್ತಿದೆ. ಈ ಪೊಟೋ ಇದೀಗ ಬಾಲಿವುಡ್ ಅಂಗಳದಲ್ಲಿ ಭಾರಿ ಚರ್ಚೆ ಸಹ ಆಗುತ್ತಿದೆ. ಕಂಗನಾ ಮದುವೆಯಾಗಲಿರುವ ವ್ಯಕ್ತ ಆತನೇ ಎಂಬ ಚರ್ಚೆ ಜೋರಾಗಿದೆ. ಕೆಲವರಂತೂ ಆತ ಹೃತಿಕ್ ರೋಷನ್ ಮಾದರಿಯಲ್ಲಿ ಕಾಣಿಸುತ್ತಿದ್ದಾರೆ ಎಂಬ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಮತ್ತೆ ಕೆಲವರು ಕ್ಯೂಟ್ ಪೈರ್‍, ಒಳ್ಳೆಯ ಜೋಡಿ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷದ ಕೊನೆಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಕಂಗನಾ ಮದುವೆಯ ಬಗ್ಗೆ ಮಾತನಾಡಿದ್ದರು. ಇದೀಗ ಮಿಸ್ಟರಿ ಮ್ಯಾನ್ ಜೊತೆಗೆ ಕಾಣಿಸಿಕೊಂಡಿದ್ದ ಕಾರಣದಿಂದ ಮತ್ತೊಮ್ಮೆ ಕಂಗನಾ ಮದುವೆ ಸುದ್ದಿ ವೈರಲ್ ಆಗುತ್ತಿದೆ.

ಇನ್ನೂ ಕಂಗನಾ ಎಮರ್ಜೆನ್ಸಿ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದಲ್ಲಿ ಕಂಗನಾ ನಟಿಸುವುದರ ಜೊತೆಗೆ ಸಿನೆಮಾ ನಿರ್ದೇಶನ ಸಹ ಆಕೆಯೇ ಮಾಡಿರುವುದು ವಿಶೇಷ ಎನ್ನಬಹುದು. ಅಂದುಕೊಂಡಂತೆ ಆಗಿದ್ದರೇ ಈ ಸಿನೆಮಾ ನವೆಂಬರ್‍ 2023 ರಲ್ಲಿ ತೆರೆಕಾಣಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಸಿನೆಮಾ ಬಿಡುಗಡೆಯಾಗಲಿಲ್ಲ. ಇದೀಗ ಈ ಸಿನೆಮಾ ಇದೇ ವರ್ಷದಲ್ಲಿ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ.