News

ಉಂಗುರ ಬದಲಿಸಿಕೊಂಡು ಮದುವೆಯಾದ ಸಲಿಂಗಿಗಳು, ಹವಾಯಿ ದ್ವೀಪದಲ್ಲಿ ಬಾಯ್ ಫ್ರೆಂಡ್ ನನ್ನು ವರಿಸಿದ OpenAI ಸಿಇಒ….!

ಇತ್ತೀಚಿಗೆ ಜಗತ್ತಿನಾದ್ಯಂತ ಅನೇಕ ಕಡೆ ಸಲಿಂಗಿಗಳು ಮದುವೆಯಾಗುತ್ತಿದ್ದಾರೆ. ಈ ಹಾದಿಯಲ್ಲೇ ಇದೀಗ ವಿಶ್ವದಾದ್ಯಂತ ಕ್ರಾಂತಿ ಮಾಡಿರುವ OpenAI ಕಂಪನಿಯ ಸಿಐಒ (CIO of OpenAI) ಸ್ಯಾಮ್ ಆಲ್ಟ್‌ಮ್ಯಾನ್ (Sam Altman) ವಿವಾಹವಾಗಿದ್ದಾರೆ. ತನ್ನ ಬಹುಕಾಲದ ಸ್ನೇಹಿತನನ್ನು ಮದುವೆಯಾಗಿದ್ದಾರೆ. ಹವಾಯಿ ದ್ವೀಪದಲ್ಲಿ ಸ್ಯಾಮ್ ಆಲ್ಟ್‌ಮ್ಯಾನ್ ತನ್ನ ಗೆಳೆಯ ಆಲಿವರ್‍ ಮುಲ್ಹೇರಿನ್ ಎಂಬಾತನನ್ನು ಮದುವೆಯಾಗಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿವೆ.

ಇಡೀ ವಿಶ್ವದಾದ್ಯಂತ ಭಾರಿ ಸದ್ದು ಮಾಡಿದ ಚಾಟ್ ಜಿಪಿಟಿ ಆ್ಯಪ್ ತಯಾರಕ ಸ್ಯಾಮ್ ಆಲ್ಟ್ ಮ್ಯಾನ್ ತನ್ನ ಪುರುಷ ಸ್ನೇಹಿತನನ್ನು ವಿವಾಹವಾಗಿದ್ದಾರೆ. ಉಂಗುರ ಬದಲಿಸಿಕೊಳ್ಳುವ ಮೂಲಕ ಮದುವೆಯಾಗಿದ್ದಾರೆ. ಸ್ಯಾಮ್ ತನ್ನ ಸ್ನೇಹಿತ ಅಲಿವರ್‍ ಜೊತೆಗಿನ ಸಂಬಂಧವನ್ನು ಬಹುತೇಕ ಗೌಪ್ಯವಾಗಿ ಇಟ್ಟಿದ್ದರು. ಜನವರಿ 10ರಂದೇ ಈ ವಿವಾಹ ನಡೆದಿದೆ ಎನ್ನಲಾಗಿದ್ದು, ಇದೀಗ ಈ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಫೋಟೋಗಳು ವೈರಲ್ ಆಗಿವೆ. ಈ ವಿಶೇಷ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಆಲ್ಟ್‌ಮ್ಯಾನ್ ಮತ್ತು ಮುಲ್ಹೆರಿನ್ ವಿವಾಹದ ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇನ್ನೂ ಸ್ಯಾಮ್ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಾನು ಹಾಗೂ ಗೆಳೆಯ ಆಲಿವರ್‍ ಶೀಘ್ರದಲ್ಲೇ ಮಕ್ಕಳನ್ನು ಹೊಂದಲು ಬಯಸುವುದಾಗಿಯೂ ತಿಳಿಸಿದ್ದಾರೆ. ವಾರಾಂತ್ಯದಲ್ಲಿ ಅವರಿಬ್ಬರೂ ಕ್ಯಾಲಿಪೋರ್ನಿಯಾದ ನಾಪಾದಲ್ಲಿನಲ್ಲಿ ಖಾಸಗಿ ರಾಂಚ್ ನಲ್ಲಿರುವ 25 ವರ್ಷ ಹಳೆಯ ಮನೆಯಲ್ಲಿ ಉಳಿದ ದಿನಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಗರದ ರಷ್ಯನ್ ಹಿಲ್ ನಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಾರೆ ಎಂದು ತಿಳಿದುಬಂದಿದೆ.

Most Popular

To Top