Film News

ತನ್ನ ಮುದ್ದಿನ ಮಗಳ ಪೊಟೋ ಹಂಚಿಕೊಂಡ ಬಿಪಾಷ, ಕ್ಯೂಟ್ ಪೊಟೋಸ್ ಸಖತ್ ವೈರಲ್….!

ಬಾಲಿವುಡ್ ನಲ್ಲಿ ಹಾಟ್ ಅಂಡ್ ಬೋಲ್ಡ್ ಬ್ಯೂಟಿಗಳಲ್ಲಿ ಒಬ್ಬರಾದ ಬಿಪಾಶಾ ಬಸು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಆಕೆ ಗರ್ಭಿಣಿಯಾದಾಗಿನಿಂದ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕವೇ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಅದರಲ್ಲೂ ಆಕೆ ಬೇಬಿಬಂಪ್ ಪೊಟೋಶೂಟ್ಸ್ ಟ್ರೋಲ್ ಗಳಿಗೂ ಸಹ ಗುರಿಯಾಗಿತ್ತು. ಅದು ಏನೇ ಇರಲಿ ಇದೀಗ ಬಿಪಾಶಾ ತನ್ನ ಮೊದಲನೇ ಮಗುವಿಗೆ ಜನ್ಮ ಕೊಟ್ಟಿದ್ದು, ತಾಯ್ತನದ ಸಂತಸವನ್ನು ಆನಂದಿಸುತ್ತಿದ್ದಾರೆ. ಮಗಳು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಆಕೆ ತನ್ನ ಮಗುವಿಗೆ ದೇವಿ ಎಂಬ ಹೆಸರನ್ನು ಸಹ ಇಟ್ಟಿದ್ದು, ಇದೀಗ ಮೊದಲ ಬಾರಿಗೆ ತನ್ನ ಮುದ್ದಿನ ಮಗಳ ಮುಖವನ್ನು ತೋರಿಸಿದ್ದಾರೆ.

ಬಿಪಾಶಾ ಬಸು 43ನೇ ವಯಸ್ಸಿನಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಾಲಿವುಡ್ ಸಿನಿರಂಗದ ಹಾಟ್ ನಟಿ ಬಿಪಾಶಾ ಬಸು ಇತ್ತೀಚಿಗಷ್ಟೆ ಗರ್ಭಿಣಿಯಾದ ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಜೊತೆಗೆ ಬೇಬಿ ಬಂಪ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದ್ದರು. ಸುಮಾರು ನಾಲ್ಕೈದು ಬಾರಿ ಆಕೆ ಬೇಬಿ ಬಂಪ್ ಪೊಟೋ ಶೂಟ್ಸ್ ಮಾಡಿಸಿದ್ದು, ಆಕೆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.  ಕಳೆದ ವರ್ಷದ ನವೆಂಬರ್‍ 12 ರಂದು ಬಿಪಾಷಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಇದೀಗ ಮೊದಲ ಬಾರಿಗೆ ತಮ್ಮ ಮಗಳ ಪೊಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಬಿಪಾಷ ಹಂಚಿಕೊಂಡ ತನ್ನ ಮಗಳ ಪೊಟೋದಲ್ಲಿ ಪಿಂಕ್ ಕಲರ್‍ ಡ್ರೆಸ್ ನಲ್ಲಿ ದೇವಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೊಟೋಗಳಿಗೆ ಹಲೋ ವರ್ಲ್ಡ್, ನಾನು ದೇವಿ, ದೇವಿಬಸು ಸಿಂಗ್ ಗ್ರೋವರ್‍ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡ ಕೂಡಲೇ ಪೊಟೋಗಳು ಸಖತ್ ವೈರಲ್ ಆಗಿದೆ. ಆಕೆಯ ಪೊಟೋಗಳಿಗೆ ಅಭಿಮಾನಿಗಳೂ ಸೇರಿದಂತೆ ಅನೇಕ ಸೆಲೆಬ್ರೆಟಿಗಳೂ ಸಹ ಪ್ರಿತಿಯಿಂದ ಕಾಮೆಂಟ್ ಗಳನ್ನು ಮಾಡುತ್ತಾ ಮುದ್ದಾದ ಮಗುವಿಗೆ ಶುಭ ಕೋರಿದ್ದಾರೆ. ಇನ್ನೂ ಸ್ಟಾರ್‍ ಸೆಲೆಬ್ರೆಟಿಗಳಾದ ಕಾಜಲ್ ಅಗರ್ವಾಲ್, ಆರತಿ ಸಿಂಗ್, ದಿಯಾ ಮಿರ್ಜಾ ಸೇರಿದಂತೆ ಅನೇಕರು ಲೈಕ್ಸ್ ಮಾಡಿದ್ದಾರೆ.

ನಟಿ ಬಿಪಾಶಾ ಬಸು ಕಳೆದ 2016 ರಲ್ಲಿ ಕರಣ್ ಸಿಂಗ್ ಎಂಬ ನಟನೊಂದಿಗೆ ಪ್ರೇಮ ಪಯಣ ಸಾಗಿಸಿ ಮದುವೆಯಾದರು. ಅಲೋನ್ ಎಂಬ ಸಿನೆಮಾದಲ್ಲಿ ಇವರಿಬ್ಬರ ನಡುವೆ ಪರಿಚಯವಾಗಿ ಪ್ರೇಮ ಬಳಿಕ ಮದುವೆಯಾಗಿದೆ.  ಮದುವೆಯಾಗಿ ಆರು ವರ್ಷಗಳ ಬಳಿಕ ಆಕೆ ಮಗುವಿಗೆ ಜನ್ಮ ನೀಡಿದ್ದಾರೆ. ಆಕೆ ಮದುವೆಯಾದ ಬಳಿಕ ಆಕೆ ಸಿನೆಮಾಗಳಿಗೆ ಗುಡ್ ಬೈ ಹೇಳಿದರು. ಇದೀಗ ಮಗಳ ಹಾರೈಕೆಯಲ್ಲಿ ಬಿಪಾಷ ಬ್ಯುಸಿಯಾಗಿದ್ದಾರೆ.

Most Popular

To Top