ಮಂಚು ಬ್ರದರ್ಸ್ ಕೋಲ್ಡ್ ವಾರ್ ಬಗ್ಗೆ ಸಂಚಲನಾತ್ಮಕ ಹೇಳಿಕೆ ಕೊಟ್ಟ ತಂದೆ ಮಗ, ತುರಿಕೆ ಆಗುತ್ತಿದೆ ನೀವು ಕೆರೆಯುತ್ತೀರಾ ಎಂದ ಮನೋಜ್….!

Follow Us :

ಇತ್ತೀಚಿಗೆ ಕೆಲವು ದಿನಗಳಿಂದ ಮಂಚು ಬ್ರದರ್ಸ್ ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ ಎಂಬ ರೂಮರ್‍ ಗಳು ಹರಿದಾಡುತ್ತಿದ್ದು, ಇದರ ಜೊತೆಗೆ ಮಂಚು ಮನೋಜ್, ಮಂಚು ಲಕ್ಷ್ಮೀ ಪೋಸ್ಟ್ ಗಳು ಮತಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಇದೀಗ ಸೀನಿಯರ್‍ ನಟ ಮೋಹನ್ ಬಾಬು ಹಾಗೂ ಮಂಚು ಮನೋಜ್ ಮೈಂಡ್ ಬ್ಲೋಯಿಂಗ್ ಕಾಮೆಂಟ್ಸ್ ನೀಡಿದ್ದಾರೆ. ಅದರಲ್ಲೂ ಮನೋಜ್ ತುರಿಕೆ ಆಗುತ್ತಿದೆ ನೀವು ಬಂದು ಕೆರೆಯುತ್ತೀರಾ ಎಂದು ಹೇಳಿದ್ದು, ಅವರ ಹೇಳಿಕೆಗಳು ಇದೀಗ ಸಖತ್ ವೈರಲ್ ಆಗುತ್ತಿವೆ.

ಕೆಲವು ದಿನಗಳಿಂದ ಮಂಚು ಬ್ರದರ್ಸ್ ನಡುವೆ ವಿಬೇದಗಳು ಉಂಟಾಗಿದೆ. ಇದರ ಜೊತೆಗೆ ಮನೋಜ್ ಹಂಚಿಕೊಂಡ ವಿಡಿಯೋ, ಕೆಲವೊಂದು ಪೋಸ್ಟ್ ಗಳು ಈ ರೂಮರ್‍ ಗಳಿಗೆ ಮತಷ್ಟು ಹೈಪ್ ಕ್ರಿಯೇಟ್ ಮಾಡುತ್ತಿವೆ. ಸುಮಾರು ಆರು ತಿಂಗಳುಗಳಿಂದ ಮಂಚು ಕುಟುಂಬದಲ್ಲಿ ವಿಬೇದಗಳು ಸೃಷ್ಟಿಯಾಗಿದೆ ಅದರಿಂದ ಅನೇಕ ಪರಿಣಾಮಗಳು ಎದುರಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಮಂಚು ಮನೋಜ್ ಭೂಮಾ ಮೋನಿಕಾ ರೆಡ್ಡಿ ರವರನ್ನು ಮದುವೆಯಾಗಿದ್ದು, ಮೋಹನ್ ಬಾಬು ಹಾಗೂ ವಿಷ್ಣು ರವರಿಗೆ ಇಷ್ಟವಿಲ್ಲ. ಈ ಕಾರಣದಿಂದಲೇ ವಿಬೇದಗಳು ಹುಟ್ಟಿಕೊಂಡಿವೆ. ಸುಮಾರು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ಮಂಚು ಬ್ರದರ್ಸ್ ರವರದ್ದೇ ಹಾಟ್ ಟಾಪಿಕ್ ಆಗಿದೆ.

ಮಂಚು ಮನೋಜ್ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಮಂಚು ಲಕ್ಷ್ಮೀ ಯವರೇ ತೆಗೆದುಕೊಂಡಿದ್ದರು. ಈ ಮದುವೆಗೆ ಮೋಹನ್ ಬಾಬು ಹಾಗೂ ಮಂಚು ವಿಷ್ಣು ದೂರವೇ ಇದ್ದರು. ಮದುವೆಯ ಮೂಹೂರ್ತ ಸಮಯದಲ್ಲಿ ಮಾತ್ರ ಮೋಹನ್ ಬಾಬು ಹಾಗೂ ಮಂಚು ವಿಷ್ಣು ಹಾಜರಾಗಿದ್ದರು. ಇದರಿಂದ ಮಂಚು ಬ್ರದರ್ಸ್ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಮತಷ್ಟು ಬಲವಾಯಿತು. ಇನ್ನೂ ಮನೋಜ್ ಸಹ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಕಾರಣದಿಂದ ಅವರಿಬ್ಬರ ನಡುವೆ ಗಲಾಟೆಗಳು ಇರುವುದು ಖಚಿತ ಎಂದು ಹೇಳಲಾಯಿತು. ಬಳಿಕ ಆ ವಿಡಿಯೋ ಡಿಲೀಟ್ ಮಾಡಿದ್ದು, ಬಳಿಕ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಮಂಚು ವಿಷ್ಣು ಇದೆಲ್ಲಾ ಹೌಸ್ ಆಫ್ ಮಂಚೂಸ್ ಎಂಬ ರಿಯಾಲಿಟಿ ಶೋನ ಭಾಗವಾಗಿದೆ ಎಂದು ಪೋಸ್ಟ್ ಹಂಚಿಕೊಂಡರು. ಅದನ್ನು ಸಹ ಜನ ನಂಬುತ್ತಿಲ್ಲ.

ಇನ್ನೂ ಇತ್ತೀಚಿಗೆ ಮೋಹನ್ ಬಾಬು, ಮನೋಜ್, ಭೂಮಾ ಮೋನಿಕಾ ತಿರುಪತಿಯಲ್ಲಿ ಹೊಸದಾಗಿ ನಿರ್ಮಾಣಗೊಂಡ ಆಸ್ಪತ್ರೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರು. ಈ ವೇಳೆ ಮಿಡಿಯಾದೊಂದಿಗೆ ಮೋಹನ್ ಬಾಬು ಹಾಗೂ ಮನೋಜ್ ಮಾತನಾಡಿದರು. ಈ ವೇಳೆ ಮಂಚು ಬ್ರದರ್ಸ್ ಕೋಲ್ಡ್ ವಾರ್‍ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಮೋಹನ್ ಬಾಬು ಮಿಡಿಯಾದವರ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ನಿಮ್ಮ ಮನೆಯಲ್ಲಿ ನಿಮ್ಮ ಪತ್ನಿಯೊಂದಿಗೆ ನಿನಗಿರುವ ಸಂಬಂಧ ಏನು ಹೇಳುತ್ತೀರಾ ಎಂದಿದ್ದಾರೆ. ನಿವೆಲ್ಲರೂ ಪ್ರಜ್ಞಾವಂತರು ಯಾವ ಸಂದರ್ಭದಲ್ಲಿ ಏನು ಪ್ರಶ್ನೆ ಮಾಡಬೇಕು ಎಂಬುದು ಗೊತ್ತಿಲ್ಲವೇ ಎಂದು ಬೇಸರದೊಂದಿಗೆ ಆಕ್ರೋಷ ಹೊರಹಾಕಿದ್ದಾರೆ. ಬಳಿಕ ಈ ಬಗ್ಗೆ ಮನೋಜ್ ಆದರೂ ರಿಯಾಕ್ಟ್ ಆಗುತ್ತಾರಾ ಎಂದು ಮಿಡಿಯಾದವರು ಕಾಯುತ್ತಿದ್ದರು. ಇದಕ್ಕೆ ಮನೋಜ್ ಮತಷ್ಟು ಧಾರುಣವಾದ ಉತ್ತರ ನೀಡಿದ್ದಾರೆ. ನನಗೆ ತುರಿಕೆ ಆಗುತ್ತಿದೆ, ಅದೇ ನನ್ನ ಸಮಸ್ಯೆ, ನೀವು ಬಂದು ಕೆರೆಯುತ್ತೀರಾ ಎಂದು ಉತ್ತರಿಸಿದ್ದಾರೆ. ಬಳಿಕ ಮತ್ತದೆ ಪ್ರಶ್ನೆ ಕೇಳಿದಾಗ ಮನೋಜ್ ಸೈಲೆಂಟ್ ಆಗಿದ್ದಾರೆ. ಇನ್ನೂ ತನ್ನ ಸಿನೆಮಾದ ಬಗ್ಗೆ ಸಹ ಮನೋಜ್ ಅಪ್ಡೇಟ್ ನೀಡಿದ್ದಾರೆ.