ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ ನಿರ್ಮಾಪಕ ರವಿಂದರ್, ಉಸಿರಾಡಲು ಸಹ ಕಷ್ಟದ ಸ್ಥಿತಿಯಲ್ಲಿದ್ದಾರಂತೆ…..!

Follow Us :

ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕ ರವಿಂದರ್‍ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮೀ ಕಳೆದ ವರ್ಷ ಮದುವೆಯಾದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದರು.  ಸ್ಟಾರ್‍ ಸೆಲೆಬ್ರೆಟಿಗಳಿಗಿಂತಲೂ ಈ ಜೋಡಿಯ ಮದುವೆ ತುಂಬಾನೆ ಸದ್ದು ಮಾಡಿತ್ತು. ಅನೇಕ ವಿವಾದಗಳಿಗೂ ಸಹ ಈ ಜೋಡಿ ಕಾರಣವಾಗಿತ್ತು. ಇದೀಗ ರವಿಂದರ್‍ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ.

ರವಿಂದರ್‍ ಹಾಗೂ ನಟಿ ಮಹಾಲಕ್ಷ್ಮೀ ಮದುವೆಯಾದಾಗಿನಿಂದ ಟ್ರೋಲ್ ಆಗುತ್ತಲೇ ಇದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಮೊದಲಿಗೆ ಮಹಾಲಕ್ಷ್ಮೀ ಸಹ ತಮ್ಮನ್ನ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಟ್ರೋಲ್ ಗಳು ನಿಲ್ಲದ ಕಾರಣ ಯಾವ ಟ್ರೋಲ್ ಗಳನ್ನು ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ರವಿಂಧರ್‍ ವಂಚನೆ ಆರೋಪದ ಮೇರೆಗೆ ಜೈಲು ಪಾಲಾಗಿದ್ದರು. ಈ ವೇಳೆ ಮಹಾಲಕ್ಷ್ಮೀ ನನಗೆ ರವಿಂದರ್‍ ಮೋಸ ಮಾಡಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂಬ ರೂಮರ್‍ ಸಹ ಕೇಳಿಬಂದಿತ್ತು. ಇದೀಗ ರವೀಂದರ್‍ ಆರೋಗ್ಯದ ಸುದ್ದಿಯೊಂದು ಕೇಳಿಬರುತ್ತಿದೆ.

ಸದ್ಯ ತಮಿಳಿನ ಬಿಗ್ ಬಾಸ್ ಸೀಸನ್ 7 ರ ಬಗ್ಗೆ ರವಿಂದರ್‍ ವಿಮರ್ಶೆಗಳನ್ನು ಮಾಡುವುದು ಶುರು ಮಾಡಿಕೊಂಡಿದ್ದು, ಈ ಸಂಬಂಧ ಬಿಗ್ ಬಾಸ್ ಶೋ ಸಮೀಕ್ಷೆಗೆ ಬಂದಿದ್ದರು. ಈ ವೇಳೆ ಆತ ಅನಾರೋಗ್ಯದಿಂದ ಕಾಣಿಸಿದ್ದರು. ಉಸಿರು ತೆಗೆದುಕೊಳ್ಳುವುದಕ್ಕೂ ತುಂಬಾನೆ ಸಮಸ್ಯೆಪಡುತ್ತಿದ್ದರು. ಆದರೂ ಆತ ತನ್ನ ಯೂಟ್ಯೂಬ್ ಚಾನಲ್ ನಲ್ಲಿ ರಿವ್ಯೂ ಕೊಟ್ಟಿದ್ದಾರೆ. ಮೂಗಿನಲ್ಲಿ ಆಕ್ಸಿಜನ್ ಟ್ಯೂಬ್ ಇಟ್ಟುಕೊಂಡು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಆತನ ಶ್ವಾಸಕೋಶಗಳಲ್ಲಿ ಸಮಸ್ಯೆಯಿದೆ. ಇದರಿಂದ ಒಂದು ವಾರ ಐಸಿಯು ನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಗಿ ರವಿಂದರ್‍ ಹೇಳಿದ್ದಾರೆ. ಈ ಸುದ್ದಿಯನ್ನು ಕೇಳಿದ ರವಿಂದರ್‍ ಅಭಿಮಾನಿಗಳು ಶೀಘ್ರ ಆತ ಗುಣಮುಖರಾಗಲಿ ಎಂದು, ಗುಣಮುಖರಾಗುವವರೆಗೂ ಬಿಗ್ ಬಾಸ್ ಮೇಲೆ ವಿಮರ್ಶೆ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.

ಇನ್ನೂ ರವಿಂದರ್‍ ಲಿಬ್ರಾ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಈ ಸಂಸ್ಥೆಯ ಮೂಲಕ ಕೆಲವೊಂದು ಸಿನೆಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ಶೋ ಬಗ್ಗೆ ವಿಮರ್ಶೆ ಸಹ ಮಾಡುತ್ತಿರುತ್ತಾರೆ. ವಂಚನೆ ಆರೋಪದಡಿ ರವಿಂದರ್‍ ಕೆಲವು ದಿನಗಳ ಹಿಂದೆಯಷ್ಟೆ ಜೈಲು ಪಾಲಾಗಿದ್ದರು. ಬಳಿಕ ಜಾಮೀನಿನ ಮೇಲೆ ಆತ ಹೊರಬಂದಿದ್ದಾರೆ.