ಒಂದು ಷರತ್ತಿನೊಂದಿಗೆ ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೇನೆ ಎಂದ ನಟಿ ಶೆರ್ಲಿನ್ ಚೋಪ್ರಾ….!

Follow Us :

ಸಿನಿರಂಗದಲ್ಲಿ ವಿವಾದಗಳ ಮೂಲಕ ಸುದ್ದಿಯಾಗುವಂತಹ ನಟಿಯರಲ್ಲಿ ಶೆರ್ಲಿನ್ ಚೋಪ್ರಾ ಸಹ ಒಬ್ಬರಾಗಿದ್ದಾರೆ. ಬಾಲಿವುಡ್ ರಂಗದಲ್ಲಿ ವಿವಾದಗಳ ಮೂಲಕ ಸದ್ದು ಮಾಡುವ ನಟಿಯರ ಸಾಲಿಗೆ ಆಕೆ ಸಹ ಸೇರುತ್ತಾರೆ. ಬೋಲ್ಡ್ ಬ್ಯೂಟಿಯಾಗಿ ಫೇಂ ಪಡೆದುಕೊಂಡ ಶೆರ್ಲಿನ್ ಆಗಾಗ ಸಂಚಲನಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಶೆರ್ಲಿನ್ ಚೋಪ್ರಾ ರಾಹುಲ್ ಗಾಂಧಿಯವರನ್ನು ಮದುವೆಯಾಗುತ್ತೇನೆ ಆದರೆ ಕಂಡಿಷನ್ ಅಪ್ಲೈ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಬೋಲ್ಡ್ ಬ್ಯೂಟಿ ಶೆರ್ಲಿನ್ ಆಗಾಗ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಇತ್ತೀಚಿಗಷ್ಟೆ ಶೆರ್ಲಿನ್ ಜೊತೆಗೆ ಪೊಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು. ಆಗ ಅಭಿಮಾನಿಗಳ ಜೊತೆಗೆ ಅಲ್ಲಿದ್ದ ಕ್ಯಾಮೆರಾಮೆನ್ ಗಳ ಜೊತೆಗೆ ತಮಾಷೆಯಾಗಿ ಮಾತನಾಡಿದ್ದಾರೆ. ಈ ವೇಳೆ ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರನ್ನು ಮದುವೆಯಾಗುತ್ತೀರಾ ಎಂದು ಕೆಲವರು ಕೇಳಿದ್ದಾರೆ. ಈ ಪ್ರಶ್ನೆಗೆ ಶೆರ್ಲಿನ್ ಸಹ ಫನ್ನಿಯಾಗಿಯೇ ಉತ್ತರ ನೀಡಿದ್ದಾರೆ. ಇದೀಗ ಆಕೆಯ ಹೇಳಿದ ಕಾಮೆಂಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ನಟಿ ಶೆರ್ಲಿನ್ ಚೋಪ್ರಾ ಆಗಾಗ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಶೆರ್ಲಿನ್ ಗುಲಾಬಿ ಬಣ್ಣದ ಫೆದರ್ಡ್ ಸ್ಲೀವ್ ಲೆಸ್ ಕ್ರಾಪ್ ಟಾಪ್ ಹಾಗೂ ಬ್ಲಾಕ್ ಮಿನಿ ಸ್ಕರ್ಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಲ್ಲಿದ್ದ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದಿದ್ದಾರೆ. ಈ ವೇಳೆ ಅಲ್ಲಿದ್ದ ಕ್ಯಾಮೆರಾಮೆನ್ ಶೆರ್ಲಿನ್ ಚೋಪ್ರಾಗೆ ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೀರಾ ಎಂದು ತಮಾಷೆಯಾಗಿ ಕೇಳಿದ್ದಾರೆ. ಅದಕ್ಕೆ ಶೆರ್ಲಿನ್ ಸಹ ರಿಯಾಕ್ಟ್ ಆಗಿದ್ದಾರೆ. ಹೌದು ವೈ ನಾಟ್, ಆದರೆ ಮದುವೆಯ ಬಳಿಕ ನಾನು ನನ್ನ ಸರ್‍ ನೇಮ್ ಬದಲಿಸೊಲ್ಲ ಎಂದು ಹೇಳಿದ್ದಾರೆ. ಇನ್ನೂ ರಾಹುಲ್ ಗಾಂಧಿ ಜೊತೆಗೆ ಮದುವೆಯ ಬಗ್ಗೆ ಮಾಡಿದ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಸದ್ಯ ಶೆರ್ಲಿನ್ ಚೋಪ್ರಾ ಪೌರಾಶಪುರ-2 ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಈ ಸಿರೀಸ್ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಷನ್ ನಿಮಿತ್ತ ಆಕೆ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳಲ್ಲಿ ಸಹ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದೀಗ ರಾಹುಲ್ ಗಾಂಧಿಯವರ ಬಗ್ಗೆ ಕಾಮೆಂಟ್ ಮಾಡಿದ್ದು, ಕಾಮೆಂಟ್ ಗಳ ರಾಹುಲ್ ಗಾಂಧಿ ಯಾವ ರೀತಿ ರಿಯಾಕ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.