ನನ್ನ ಡ್ರೀಮ್ ಹಿರೋ ಆತನೆ, ಆತನೊಂದಿಗೆ ನಟಿಸುವ ಅವಕಾಶ ಮಿಸ್ ಮಾಡಿಕೊಂಡೆ ಎಂದ ಬೋಲ್ಡ್ ಬ್ಯೂಟಿ ಪಾಯಲ್…..!

Follow Us :

ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ನಟಿ ಪಾಯಲ್ ರಾಜ್ ಪೂತ್ ಸೌಂದರ್ಯ, ನಟನೆ ಇದ್ದರೂ ಸ್ಟಾರ್‍ ಡಂ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಆದರೂ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ನಟಿ ಪಾಯಲ್ ಓರ್ವ ಸ್ಟಾರ್‍ ನಟ ತನ್ನ ಡ್ರೀಮ್ ಹಿರೋ ಎಂತಲೂ, ಆತನೊಂದಿಗೆ ನಟಿಸುವ ಅವಕಾಶ ಮಿಸ್ ಮಾಡಿಕೊಂಡೆ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಆಕೆಯ ಆ ಡ್ರೀಮ್ ಹಿರೋ ಯಾರು ಎಂಬ ವಿಚಾರಕ್ಕೆ ಬಂದರೇ,

RX100 ಸಿನೆಮಾದ ಮೂಲಕ ಬಣ್ಣದ ಲೊಕಕ್ಕೆ ಎಂಟ್ರಿ ಕೊಟ್ಟ ಪಾಯಲ್ ಆ ಸಿನೆಮಾದ ಸಕ್ಸಸ್ ಅನ್ನು ಕ್ಯಾಷ್ ಮಾಡಿಕೊಳ್ಳಲು ಕೊಂಚ ಹಿಂದೆ ಬಿದ್ದರು. ಸರಿಯಾದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ಕೆಲವೊಂದು ಸೋಲುಗಳನ್ನು ಕಂಡರು. ಡಿಸ್ಕೋ ರಾಜ್, ವೆಂಕಿ ಮಾಮ ಮೊದಲಾದ ಸಿನೆಮಾಗಳಲ್ಲಿ ನಟಿಸಿದರೂ ಸಹ ಪಾಯಲ್ ಗೆ ಸರಿಯಾದ ಕ್ರೇಜ್ ದೊರೆಯಲಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಪಾಯಲ್ ಟರ್ನಿಂಗ್ ನೀಡುವಂತಹ ಸಿನೆಮಾಗಾಗಿ ಕಾಯುತ್ತಿದ್ದಾರೆ. ಇನ್ನೂ ಪಾಯಲ್ ಸೋಷಿಯಲ್ ಮಿಡಿಯಾದಲ್ಲಂತೂ ಮತಷ್ಟು ಹಾಟ್ ಪೋಸ್ ಗಳನ್ನು ಕೊಡುತ್ತಿರುತ್ತಾರೆ. ಆಕೆಯ ಬ್ಯೂಟಿಗೆ ಯುವಕರ ಫಿದಾ ಆಗುತ್ತಿದ್ದಾರೆ. ಸಿನೆಮಾಗಳ ಸೋಲು ಗೆಲುವಿನೊಂದಿಗೆ ಸಂಬಂಧವಿಲ್ಲದಂತೆ ಸೊಷಿಯಲ್ ಮಿಡಿಯಾದಲ್ಲಂತೂ ಸಖತ್ ಸದ್ದು ಮಾಡುತ್ತಿರುತ್ತಾರೆ.

ಇನ್ನೂ ಪಾಯಲ್ ಮಾಯಾಪೇಟಿಕಾ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಪ್ರಮೊಷನ್ ನಿಮಿತ್ತ ಆಕೆ ಅನೇಕ ಸಂದರ್ಶನಗಳಲ್ಲೂ ಸಹ ಭಾಗಿಯಾಗುತ್ತಿದ್ದಾರೆ. ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹೊರಹಾಕುತ್ತಿದ್ದಾರೆ. ಇತ್ತಿಚಿಗೆ ನಡೆದಂತಹ ಸಂದರ್ಶನವೊಂದರಲ್ಲಿ ಪಾಯಲ್ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಒಬ್ಬ  ಸ್ಟಾರ್‍ ನಟನ ಜೊತೆಗೆ ನಟಿಸುವ ಅವಕಾಶ ಮಿಸ್ ಮಾಡಿಕೊಂಡೆ ಎಂದಿದ್ದಾರೆ. ಆ ಸ್ಟಾರ್‍ ನಟ ಬೇರೆ ಯಾರೂ ಅಲ್ಲ ಸೂಪರ್‍ ಸ್ಟಾರ್‍ ಮಹೇಶ್ ಬಾಬು. ಸರ್ಕಾರಿ ವಾರಿ ಪಾಠ ಸಿನೆಮಾದಲ್ಲಿ ಅವಕಾಶಕ್ಕಾಗಿ ತಾನು ತುಂಬಾನೆ ಎದುರು ನೋಡಿದೆ. ಆದರೆ ಆ ಚಾನ್ಸ್ ಕೀರ್ತಿ ಸುರೇಶ್ ಪಾಲಾಯಿತು. ಈ ಸಿನೆಮಾದಲ್ಲಿ ಕೀರ್ತಿ ಸುರೇಶ್ ತುಂಬಾ ಅದ್ಬುತವಾಗಿ ನಟಿಸಿದ್ದಾರೆ ಎಂದು ಪ್ರಶಂಸೆ ಮಾಡಿದ್ದಾರೆ.

ಅಷ್ಟೇಅಲ್ಲದೇ ಮಹೇಶ್ ಬಾಬು ನನ್ನ ಡ್ರೀಮ್ ಹಿರೋ. ಮಹೇಶ್ ಬಾಬು ಎಂದರೇ ನನಗೆ ತುಂಬಾ ಇಷ್ಟ. ಆತನೊಂದಿಗೆ ನಟಿಸಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಪಾಯಲ್ ಗೆ ಮೊದಲು ಸರ್ಕಾರಿ ವಾರಿ ಪಾಠ ಸಿನೆಮಾದಲ್ಲಿ ಅವಕಾಶ ಬಂದಿತ್ತಾ ಎಂಬ ಪ್ರಶ್ನೆಗಳು ಇದೀಗ ಸೃಷ್ಟಿಯಾಗಿದೆ. ಸದ್ಯ ಪಾಯಲ್ ಹಂಚಿಕೊಂಡ ಕಾಮೆಂಟ್ ಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಹಿಂದೆ ನಡೆದ ಸಂದರ್ಶನದಲ್ಲೂ ಪಾಯಲ್ ತನ್ನನ್ನು ಕೆಲ ನಿರ್ದೇಶಕರು ಮಿಸ್ ಗೈಡ್ ಮಾಡಿದರು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದರು.