Film News

ಬೋಲ್ಡ್ ಬ್ಯೂಟಿ ಪಾಯಲ್ ರಾಜ್ ಪೂತ್ ಗೂ ಗಂಭೀರವಾದ ಆರೋಗ್ಯ ಸಮಸ್ಯೆಯಂತೆ, ಹೆಲ್ತ್ ಅಪ್ಡೇಟ್ ನೀಡಿದ ನಟಿ….!

ಮೊದಲನೇ ಸಿನೆಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಳ್ಳುವ ನಟಿಯರಲ್ಲಿ ಕೆಲವರೇ ಇರುತ್ತಾರೆ. ಅಂತಹ ನಟಿಯರ ಪೈಕಿ ಪಾಯಲ್ ರಾಜ್ ಪುತ್ ಸಹ ಸೇರಿಕೊಳ್ಳುತ್ತಾರೆ. ಆರ್‍.ಎಕ್ಸ್ 100 ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದಲ್ಲಿ ಓವರ್‍ ಬೋಲ್ಡ್ ನೆಸ್ ಶೋ ಮಾಡಿದ್ದಾರೆ. ಈ ಕಾರಣದಿಂದಾಗಿ ಆಕೆ ಓವರ್‍ ನೈಟ್ ಕ್ರೇಜ್ ಸ್ವಂತ ಮಾಡಿಕೊಂಡರು. ಇದೀಗ  ತಾನು ಆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಸೋಷಿಯಲ್ ಮಿಡಿಯಾದ ಮೂಲಕ ವಿಚಾರ ಹಂಚಿಕೊಂಡಿದ್ದಾರೆ.

ಸೌತ್ ಸಿನಿರಂಗದ ಕ್ರೇಜಿ ನಟಿಯರಲ್ಲಿ ಪಾಯಲ್ ರಾಜ್ ಪೂತ್ ಸಹ ಒಬ್ಬರು. ಸ್ಟಾರ್‍ ನಟಿಯಾಗದೇ ಇದ್ದರೂ ಸಹ ಕ್ರೇಜಿ ಆಫರ್‍ ಗಳ ಮೂಲಕ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುತ್ತಾರೆ. ಸಿನೆಮಾ ವಿಚಾರಗಳು, ವೈಯುಕ್ತಿಕ ವಿಚಾರಗಳ ಜೊತೆಗೆ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಇದೀಗ ತನ್ನು ಆರೋಗ್ಯ ಸಮಸ್ಯೆಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಕೆಲವು ದಿನಗಳಿಂದ ಆ ವ್ಯಾಧಿಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿರುವುದಾಗಿ ಮನೆಯಲ್ಲೇ ಸೆಲೈನ್ ಹಾಕಿಸಿಕೊಂಡಿರುವ ಪೊಟೋಗಳ ಜೊತೆಗೆ ಹೆಲ್ತ್ ಬಗ್ಗೆ ನೋಟ್ ಮೂಲಕ ಅಪ್ಡೇಟ್ ನೀಡಿದ್ದಾರೆ. ಅಷ್ಟಕ್ಕೂ ಪಾಯಲ್ ರಾಜ್ ಪೂತ್ ಗೆ ಇರುವಂತಹ ಆರೋಗ್ಯ ಸಮಸ್ಯೆಯಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸದ್ಯ ಪಾಯಲ್ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದಾರಂತೆ. ಈ ಬಗ್ಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾನು ತುಂಬಾ ಕಡಿಮೆ ನೀರು ಕುಡಿಯುತ್ತಿದ್ದೆ. ಅದರಿಂದಾಗಿ ಕಿಡ್ನಿ ಇನ್ಫೆಕ್ಷನ್ ಆಗಿದೆ. ಈ ಕಾರಣದಿಂದ ನಾನು ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಸದ್ಯ ಟ್ರೀಟ್ ಮೆಂಟ್ ಸಹ ಮುಗಿದೆ. ಆಂಟಿಬಯೋಟಿಕ್ ಲಾಸ್ಟ್ ಡೋಸ್ ಪಡೆದುಕೊಂಡಿದ್ದೇನೆ. ಮತ್ತೆ ಬೌನ್ಸ್ ಬ್ಯಾಕ್ ಆಗಲು ಸಿದ್ದವಾಗಿದ್ದೇನೆ. ರಸ್ತೆಯಲ್ಲಿ ಅನೇಕ ತಡೆಗಳು ಇದ್ದರೂ ಎಲ್ಲಾ ಅಡ್ಡಿಗಳನ್ನು ಮೆಟ್ಟಿ ನಿಲ್ಲಬೇಕು. ನನ್ನ ಬರುವ ಪ್ರಾಜೆಕ್ಟ್ ಗಳಿಗಾಗಿ ಶೂಟೀಂಗ್ ನಿಲ್ಲಿಸಲಾಗಲಿಲ್ಲ. ಷೋ ಮಸ್ಟ್ ಗೋ ಆನ್. ಈ ಬಾರಿ ಬಿಗ್ಗರ್‍ ಅಂಡ್ ಬೆಟರ್‍ ಆಗಿರುತ್ತದೆ. ನೀವು ನಿಮ್ಮನ್ನು ಹೈಡ್ರೇಟ್ ಆಗಿ ಇಟ್ಟುಕೊಬೇಕು ಎಂದು ಅಭಿಮಾನಿಗಳಿಗೂ ಸಹ ಹೆಲ್ತ್ ಬಗ್ಗೆ ತಿಳಿಸಿದ್ದಾರೆ.

ಇನ್ನೂ ಪಾಯಲ್ ರಾಜ್ ಪೂತ್ ಸೋಷಿಯಲ್ ಮಿಡಿಯಾದಲ್ಲಿ ಜಿಂಕೆಯಂತೆ ರಂಜಿಸುತ್ತಿದ್ದು, ಸಡನ್ ಆಗಿ ಹೆಲ್ತ್ ಬಗ್ಗೆ ಹೇಳಿದ್ದು, ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಅದರಲ್ಲೂ ಪಾಯಲ್ ಈಗರ್‍ ಅಭಿಮಾನಿಗಳು ಆಕೆಯ ಸ್ಥಿತಿ ಕಂಡು ದುಃಖ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರದಲ್ಲೇ ಗುಣಮುಖರಾಗಿ ಎಂದು ಶುಭ ಹಾರೈಸುತ್ತಿದ್ದಾರೆ. ಇನ್ನೂ ಪಾಯಲ್ ಹಂಚಿಕೊಂಡ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆಯ ಕೈಯಲ್ಲಿ ಕೆಲವೊಂದು ಸಿನೆಮಾಗಳಿದ್ದು, ಕೆಲವು ಶೂಟಿಂಗ್ ಹಂತದಲ್ಲಿದ್ದರೇ, ಕೆಲವು ಬಿಡುಗಡೆಗೆ ಸಿದ್ದವಾಗಿದೆ.

Most Popular

To Top