Film News

ಕಾರಿನಲ್ಲಿ ಆ ರೀತಿಯ ಪೋಸ್ ಕೊಟ್ಟ ನಿಹಾರಿಕಾ, ನಮ್ಮ ತಂದೆಯಾದರೇ ಚಪ್ಪಲಿಯಲ್ಲಿ ಹೊಡೆಯುತ್ತಿದ್ದರು ಎಂದ ನೆಟ್ಟಿಗ…….!

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಇತ್ತೀಚಿಗೆ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಕಳೆದೆರಡು ವರ್ಷಗಳ ಹಿಂದೆಯಷ್ಟೆ ನಿಹಾರಿಕಾ ಚೈತನ್ಯ ಜೊನ್ನಲಗಡ್ಡ ಎಂಬಾತನೊಂದಿಗೆ ಅದ್ದೂರಿಯಾಗಿ ವಿವಾಹವಾದರು. ಇಬ್ಬರ ನಡುವೆ ವಿಬೇದಗಳ ಕಾರಣದಿಂದ ವಿಚ್ಚೇದನ ಪಡೆಯಲಿದ್ದಾರೆ. ಈಗಾಗಲೇ ಮೆಗಾ ಕುಟುಂಬದವರು ಸಂದಾನ ಸಹ ನಡೆಸಿದರೂ ಪ್ರಯೋಜನವಿಲ್ಲ ಎಂಬೆಲ್ಲಾ ರೂಮರ್‍ ಕೇಳಿಬಂದವು. ವಿಚ್ಚೇದನದ ರೂಮರ್‍ ಶುರುವಾದಾಗಿನಿಂದ ನಿಹಾರಿಕಾ ಏನೆ ಮಾಡಿದರೂ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತದೆ.

ಇನ್ನೂ ವಿಚ್ಚೇದನದ ರೂಮರ್‍ ಶುರುವಾದಾಗಿನಿಂದ ನಿಹಾರಿಕಾ ಆಗಲಿ ಅಥವಾ ಮೆಗಾ ಕುಟುಂಬವಾಗಲಿ ಈ ಬಗ್ಗೆ ರಿಯಾಕ್ಟ್ ಆಗಿಲ್ಲ. ಈ ಕಾರಣದಿಂದ ಈ ರೂಮರ್‍ ಗಳು ಮತಷ್ಟು ಹೆಚ್ಚಾದವು. ಅದರ ಜೊತೆಗೆ ನಿಹಾರಿಕಾ ಸಹ ಆಗಾಗ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಕಾಮೆಂಟ್ ಗಳನ್ನು ಮಾಡುತ್ತಿದ್ದು, ಅವುಗಳನ್ನು ನೋಡಿದರೇ ಅವರ ನಡುವೆ ಏನೋ ನಡೆದಿದೆ ಎಂಬ ಅನುಮಾನಗಳನ್ನು ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ನಿಹಾರಿಕಾ ಸಹ ಅದೆಲ್ಲದರ ಬಗ್ಗೆ ಮೌನ ವಹಿಸಿ ತನ್ನ ಪಾಡಿಗೆ ತಾನು ತನ್ನ ಕೆರಿಯರ್‍ ನತ್ತ ಮುಖ ಮಾಡಿದ್ದಾರೆ. ಇತ್ತೀಚಿಗಷ್ಟೆ ಆಕೆ ಡೆಡ್ ಪಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆನ್ ಲೈನ್ ಗೇಮ್ಸ್ ಕುರಿತಂತೆ ಈ ಡೆಡ್ ಪಿಕ್ಸೆಲ್ಸ್ ಸಿರೀಸ್ ಅನ್ನು ತೆರೆಗೆ ತರಲಾಗಿದೆ.

ಇನ್ನೂ ನಿಹಾರಿಕಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಮೊದಲಗಿಂತಲೂ ಬೋಲ್ಡ್ ಆಗಿ ದರ್ಶನ ಕೊಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಗಳ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿದ್ದಾರೆ. ಇದೀಗ ಆಕೆ ಕಾರಿನಲ್ಲಿ ಕುಳಿತು ವಿಭಿನ್ನವಾದ ರೀತಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಕಾರಿನಲ್ಲಿ ಕುಳಿತು ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೋಗೆ ಕಾರನ್ನು ಸ್ಟುಡಿಯೋ ಆಗಿ ಬದಲಿಸಿದ್ದೇನೆ ಎಂದು ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಇನ್ನೂ ನಿಹಾರಿಕಾರವರ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಆಕೆಯ ಪೊಟೋಗಳಿಗೆ ಅನೇಕರು ಟ್ರೋಲ್ ಸಹ ಮಾಡುತ್ತಿದ್ದಾರೆ. ನಮ್ಮ ತಂದೆಯಾಗಿದ್ದರೇ ಚಪ್ಪಲಿಯಲ್ಲೇ ಹೊಡೆಯುತ್ತಿದ್ದರು. ಆ ರೀತಿ ಹೆಡ್ ರೆಸ್ಟ್ ಮೇಲೆ ಕಾಲುಗಳನ್ನು ಇಟ್ಟರೇ ನಮ್ಮ ತಂದೆ ಚಪ್ಪಲಿಯಲ್ಲಿ ಹಾಕುತ್ತಿದ್ದರು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಸದ್ಯ ನಿಹಾರಿಕಾ ತನ್ನ ಕೆರಿಯರ್‍ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಹೈದರಾಬಾದ್ ನಲ್ಲಿ ಕಚೇರಿಯನ್ನು ಸಹ ಪ್ರಾರಂಭಿಸಿದ್ದಾರೆ. ನಿಹಾರಿಕಾ ಪಿಂಕ್ ಎಲಿಫೆಂಟ್ಸ್ ಪಿಕ್ಚರ್ಸ್ ಎಂಬ ಬ್ಯಾನರ್‍ ಮೂಲಕ ಸಿನೆಮಾಗಳು, ಶಾರ್ಟ್ ಫಿಲಂಸ್, ವೆಬ್ ಸಿರೀಸ್ ಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ತನ್ನ ಸಂಸ್ಥೆಯನ್ನು ಮತಷ್ಟು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಆಕೆ ಹೈದರಾಬಾದ್ ನಲ್ಲಿ ಕೆಲವು ದಿನಗಳ ಹಿಂದೆಯಷ್ಟೆ ಕಚೇರಿ ಸಹ ಪ್ರಾರಂಭಿಸಿದ್ದಾರೆ.

Most Popular

To Top