Film News

ಪತಿಯನ್ನು ಬಿಟ್ಟು ಒಂಟಿ ಪಯಣ ಮಾಡುತ್ತೇನೆ ಎಂದ ನಟಿ ಅನಸೂಯ, ಈ ನಿರ್ಣಯದ ಬಗ್ಗೆ ಆಕೆ ಹೇಳಿದ್ದು ಇಷ್ಟು…….!

ತೆಲುಗು ನಟಿ ಅನಸೂಯ ಭಾರದ್ವಾಜ್ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ಕಿರುತೆರೆಯಿಂದ ದೂರವಾಗಿ ಆಕೆ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ವರ್ಷಕ್ಕೆ ಐದಾರು ಸಿನೆಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಬಹುತೇಕ ಎಲ್ಲಾ ಸಿನೆಮಾಗಳಲ್ಲೂ ಆಕೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಸಿನೆಮಾಗಳ ಜೊತೆಗೆ ವೈಯುಕ್ತಿಕ ವಿಚಾರಗಳ ಕುರಿತು ಸುದ್ದಿ ಕೇಳಿಬರುತ್ತಿರುತ್ತದೆ. ಅನಸೂಯ ಪತಿಯ ಮೇಲೆ ಅಪಾರ ಪ್ರೀತಿ ಹೊಂದಿರುವ ಅನಸೂಯ ಇದೀಗ ಒಂಟಿಯಾಗಿ ಪಯಣ ಸಾಗಿಸಬೇಕು ಎಂಬ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಅಷ್ಟಕ್ಕೂ ಈ ನಿರ್ಧಾರದ ಬಗ್ಗೆ ಅನಸೂಯ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ನಟಿ ಅನಸೂಯ ಭಾರದ್ವಾಜ್ ಸಿನೆಮಾಗಳ ಜೊತೆಗೆ ಶಾಪಿಂಗ್ ಮಾಲ್ಸ್ ಓಪೆನ್ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿರುತ್ತಾರೆ. ಕೆಲವೊಂದು ಪ್ರಮೋಷನ್ ಈವೆಂಟ್ ಗಳಲ್ಲೂ ಸಹ ಭಾಗಿಯಾಗುತ್ತಾ ಪುಲ್ ಬ್ಯುಸಿಯಾಗಿರುತ್ತಾರೆ. ಈ ಬ್ಯುಸಿಯ ನಡುವೆ ಆಕೆ ವೈಯುಕ್ತಿಕ ಜೀವನದಲ್ಲೂ ಬ್ಯುಸಿಯಾಗಿರುತ್ತಾರೆ. ತಮ್ಮ ಕುಟುಂಬಕ್ಕೆ ತುಂಬಾನೆ ಪ್ರಾಧಾನ್ಯತೆ ಕೊಡುತ್ತಾರೆ. ಶೂಟಿಂಗ್ ನಿಂದ ಬಿಡುವು ಸಿಕ್ಕಾಗಲೆಲ್ಲಾ ತನ್ನ ಪತಿ ಸುಶಾಂಕ್ ಹಾಗೂ ತಮ್ಮ ಇಬ್ಬರು ಮಕ್ಕಳ ಜೊತೆಗೆ ವೆಕೇಷನ್ ಗಳಿಗೂ ಹಾರುತ್ತಿರುತ್ತಾರೆ. ಕುಟುಂಬಸ್ಥರ ಹುಟ್ಟುಹಬ್ಬವನ್ನು ಸಹ ವಿಶೇಷವಾಗಿ ಸೆಲೆಬ್ರೇಟ್ ಮಾಡುತ್ತಿರುತ್ತಾರೆ. ಮದುವೆ ವಾರ್ಷಿಕೋತ್ಸವದ ಸಮಯದಲ್ಲಿ ಪತಿಯೊಂದಿಗೆ ರೊಮ್ಯಾಂಟಿಕ್ ಟೂರ್‍ ಗೂ ಸಹ ಹೋಗುತ್ತಿರುತ್ತಾರೆ. ಇದೀಗ ಆಕೆ ಒಂಟಿ ಪಯಣ ಮಾಡಬೇಕು ಅಂದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಇತ್ತೀಚಿಗೆ ಆಕೆ ಅಭಿಮಾನಿಗಳೊಂದಿಗೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ನಟ್ಟಿಗನೋರ್ವ ಪ್ರಶ್ನೆಯೊಂದನ್ನು ಕೇಳಿದ್ದಾರೆ. ನೀವು ಒಂಟಿಯಾಗಿ ಟ್ರಿಪ್ ಪ್ಲಾನ್ ಮಾಡಬಹುದಲ್ಲವೇ ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಆಕೆ ಉತ್ತರಿಸುತ್ತಾ, ನಾನು ಒಂಟಿಯಾಗಿ ಎಲ್ಲಿಗಾದರೂ ಹೋಗಬೇಕೆಂದರೇ ನನಗೆ ತುಂಬಾ ಭಯ. ಆದರೆ ಇದೀಗ ಆಲೋಚನೆ ಮಾಡುತ್ತೇನೆ. ಎಲ್ಲಿಗೆ ಹೋದರೇ ಸೂಕ್ತ? ನೀವೆ ಒಂದು ಸಲಗೆ ಕೊಡಿ ಎಂದು ಕೇಳಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಅನಸೂಯ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಬಳಿಕ ಆಕೆಯ ಕ್ರೇಜ್ ಮತಷ್ಟು ಏರಲಿದೆ ಎನ್ನಲಾಗುತ್ತಿದೆ. ಮತಷ್ಟು ಸಿನೆಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ.

Most Popular

To Top