Film News

ಆಸ್ಪತ್ರೆಯಲ್ಲಿ ಬೋಲ್ಡ್ ಬ್ಯೂಟಿ ಇಷಾ ಗುಪ್ತಾ, ಆಕೆಗೂ ಸಹ ಸಮಂತಾ ಮಾದರಿಯ ವ್ಯಾಧಿ ಸೋಕಿದೆಯಂತೆ…..!

ನಾರ್ತ್‌ನ ಬೋಲ್ಡ್ ಬ್ಯೂಟಿ ಇಷಾ ಗುಪ್ತಾ ತೆರೆದ ಪುಸ್ತಕದಂತೆ ಸೋಷಿಯಲ್ ಮಿಡಿಯಾದಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಿರುತ್ತಾರೆ. ಸಿನೆಮಾಗಳಿಗಿಂತ ಆಕೆ ಸೋಷಿಯಲ್ ಮಿಡಿಯಾದಲ್ಲಿಯೇ ತುಂಬಾ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ಯಾವುದೇ ಅಡ್ಡಿಯನ್ನು ಇಲ್ಲದಂತೆ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಗಾಗ ಸಿನೆಮಾಗಳೂ ಹಾಗೂ ವೆಬ್ ಸಿರೀಸ್ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆಕೆ ಅನಾರೋಗ್ಯಕ್ಕೆ ಗುರಿಯಾಗಿದ್ದು, ಸಮಂತಾ ಮಾದರಿಯಲ್ಲೆ ಆಕೆ ಸಹ ವ್ಯಾಧಿಗೆ ಗುರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾಲಿವುಡ್ ಬೋಲ್ಡ್ ಬ್ಯೂಟಿ ಇಷಾ ಗುಪ್ತಾ ಸೋಷಿಯಲ್ ಮಿಡಿಯಾದಲ್ಲಿ ಸದಾ ಸೆನ್ಷೇಷನ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಸದಾ ಬೋಲ್ಡ್ ಪೊಟೋಗಳ ಮೂಲಕ ನೆಟ್ಟಿಗರಿಗೆ ಕಿಕ್ಕೇರಿಸುತ್ತಿರುತ್ತಾರೆ. ಅದರಲ್ಲೂ ಯುವಕರಲ್ಲಿ ಭಾರಿ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ತನ್ನ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿರುತ್ತಾರೆ. ಸಿನೆಮಾಗಳು, ವೆಬ್ ಸಿರೀಸ್ ಗಳ ಜೊತೆಗೆ ಮ್ಯೂಜಿಕ್ ಆಲ್ಬಮ್ ಗಳ ಮೂಲಕ ತನ್ನದೇ ಆದ ಅಭಿಮಾನಿ ಬಳಗ ಪಡೆದುಕೊಂಡಿದ್ದಾರೆ. ಇಷಾ ಗುಪ್ತಾ ಎಂತಹುದೇ ಡ್ರೆಸ್ ಧರಿಸಿದರು ಸಹ ಆಕೆ ಬೋಲ್ಡ್ ಆಗಿಯೇ ಕಾಣಿಸಿಕೊಳ್ಳುತ್ತಾರೆ. ತನ್ನದೇ ಆದ ಶೈಲಿಯಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾರೆ. ಹಾಟ್ ಪೊಟೋಶೂಟ್ಸ್ ಮೂಲಕ ಕಾಣಿಸಿಕೊಳ್ಳುತ್ತಿದ್ದ ಇಷಾ ಇದೀಗ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಆಕೆಗೆ ಏನಾಗಿದೆ ಎಂದು ಶಾಕ್ ಆಗಿದ್ದಾರೆ.

ಸದಾ ಹಾಟ್ ಅಂಡ್ ಫಿಟ್ ಆಗಿ ಪೋಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದ ಇಷಾ ಗುಪ್ತಾ ಇದೀಗ ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಆಕ್ಸಿಜೆನ್ ಮಾಸ್ಕ್ ಧರಿಸಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಪೋಸ್ಟ್ ಒಂದು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಆಕೆ ಹೈಪರ್ಬೆರಿಕ್ ಥೆರಫಿ ಮಾಡಿಸಿಕೊಳ್ಳುತ್ತಿರುವುದಾಗಿ ಕಾಮೆಂಟ್ ಮಾಡಿದ್ದಾರೆ. ಇನ್ನೂ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸಮಂತಾ ಮಾದರಿಯಲ್ಲೇ ಇಷಾ ಗುಪ್ತಾ ಸಹ ಮಾಂಶ ಖಂಡಗಳಿಗೆ ಸಂಬಂಧಿಸಿದ ವ್ಯಾದಿಗೆ ಗುರಿಯಾಗಿದ್ದಾರೆಯೇ ಎಂಬ ಅನುಮಾನಗಳು ಮೂಡುತ್ತಿವೆ. ಇನ್ನೂ ಈ ಪೋಸ್ಟ್ ಕಂಡ ಆಕೆಯ ಅಭಿಮಾನಿಗಳು ಸಹ ಕಂಗಾಲಾಗಿದ್ದಾರೆ. ಸದಾ ಆಕ್ಟೀವ್ ಆಗಿರುವ ಇಷಾ ಗುಪ್ತಾ ಗೆ ಧಿಡೀರ್‍ ನೇ ಏನಾಯ್ತು ಎಂದು ಅಭಿಮಾನಿಗಳು ಶಾಕ್ ಆಗಿದ್ದಾರೆ. ಜೊತೆಗೆ ಆಕೆ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಸಹ ಮಾಡುತ್ತಿದ್ದಾರೆ.

ಇತ್ತಿಚಿಗಷ್ಟೆ ಸಮಂತಾ ಮಯೋಸೈಟೀಸ್ ಎಂಬ ಮಾರಕ ವ್ಯಾಧಿಗೆ ಗುರಿಯಾಗಿದ್ದರು. ಈ ವ್ಯಾಧಿ ಸಹ ಮಾಂಸ ಖಂಡಗಳಿಗೆ ಸಂಬಂಧಿಸಿದ ವ್ಯಾಧಿಯಾಗಿತ್ತು. ಇದೀಗ ಇಷಾ ಗುಪ್ತಾ ಸಹ ಮಾಂಸಖಂಡಗಳಿಗೆ ಸಂಬಂಧಿಸಿದ ವ್ಯಾಧಿಗೆ ಗುರಿಯಾಗಿದ್ದು, ಆಕೆಗೂ ಸಹ ಮಯೋಸೈಟೀಸ್ ವ್ಯಾಧಿ ಸೋಕಿರಬಹುದು ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಆಕೆಯೇ ಸ್ವತಃ ಸ್ಪಷ್ಟನೆ ನೀಡಬೇಕಿದೆ.

Most Popular

To Top