ರಾಹುಲ್ ಒಳ್ಳೆಯ ಹುಡುಗಿಯನ್ನು ಹುಡುಕಿಕೊಂಡಿ ಎಂದ ಸೋನಿಯಾ ಗಾಂಧಿ, ಹರಿಯಾಣ ರೈತ ಮಹಿಳೆಯರಿಗೆ ಸೋನಿಯಾ ಬೇಡಿಕೆ…!

Follow Us :

ಕಾಂಗ್ರೇಸ್ ಯುವ ನಾಯಕ ರಾಹುಲ್ ಗಾಂಧಿ ಯವರಿಗೆ ಮದುವೆ ವಯಸ್ಸು ದಾಟಿದ್ದು, ಇನ್ನೂ ಮದುವೆಯಾಗಿಲ್ಲ. ಸಕ್ರೀಯ ರಾಜಕಾರಣದಲ್ಲಿ ತೊಡಗಿಕೊಂಡಿರುವ ರಾಹುಲ್ ಗಾಂಧಿಯವರ ಮದುವೆ ಪ್ರಸ್ತಾಪ ಆಗಾಗ ಕೇಳಿಬರುತ್ತಿರುತ್ತದೆ. ಈ ಹಾದಿಯಲ್ಲೇ ಹರಿಯಾಣ ಪ್ರವಾಸದಲ್ಲಿರುವ ಸೋನಿಯಾ ಗಾಂಧಿ ಅಲ್ಲಿನ ರೈತ ಮಹಿಳೆಯರನ್ನು ಭೇಟಿಯಾಗಿದ್ದಾರೆ. ಈ ವೇಳೆ ರೈತ ಮಹಿಳೆಯರು ರಾಹುಲ್ ಗಾಂಧಿ ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ಸೋನಿಯಾ ನೀವೆ ಹುಡುಗಿಯನ್ನು ಹುಡುಕಿ ಎಂದು ಹೇಳಿದ್ದಾರೆ.

ಕಾಂಗ್ರೇಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಸದ್ಯ ಮುಂದಿನ ಲೋಕಸಭಾ ಚುನಾವಣೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಅಧಿಕಾರಕ್ಕೆ ಬರಲು ನಾನಾ ಕಸರತ್ತುಗಳನ್ನು ಸಹ ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಇತ್ತೀಚಿಗಷ್ಟೆ ಹರಿಯಾಣಗೆ ಭೇಟಿ ನೀಡಿದ್ದರು. ಆಗ ಅಲ್ಲಿನ ರೈತ ಮಹಿಳೆಯರ ಜೊತೆಗೆ ಕೆಲ ಸಮಯ ಸಂವಾದ ನಡೆಸಿದ್ದಾರೆ. ಈ ವೇಳೆ ಅಲ್ಲಿನ ರೈತ ಮಹಿಳೆಯರು ನಗುತ್ತಾ ರಾಹುಲ್ ಗಾಂಧಿಯವರ ಮದುವೆ ಯಾವಾಗ ಎಂದು ಕೇಳಿದ್ದಾರೆ. ಅದಕ್ಕೆ ಸೋನಿಯಾ ನಗುತ್ತಲೇ ನೀವೆ ಅವನಿಗೆ ಹುಡುಗಿಯನ್ನು ಹುಡುಕಿಕೊಡಿ ಎಂದು ಉತ್ತರ ನೀಡಿದ್ದಾರೆ. ಜೊತೆಗೆ ಪಕ್ಕದಲ್ಲೇ ನಿಂತಿದ್ದ ರಾಹುಲ್ ಗಾಂಧಿ ಸಹ ಮುಂದೆ ನೋಡೋನಾ ಎಂದು ನಗುತ್ತಾ ರಿಯಾಕ್ಟ್ ಆಗಿದ್ದಾರೆ.

ಇನ್ನೂ ಸೋನಿಯಾ ಗಾಂಧಿಯವರ ನಿವಾಸದಲ್ಲಿ ಉಪಾಹಾರ ಕೂಟವನ್ನು ಆಯೋಜಿಸಲಾಗಿತ್ತು. ಈ ಉಪಾಹಾರ ಕೂಟಕ್ಕೆ ಸೋನಿಪತ್ ರೈತ ಮಹಿಳೆಯರು ಭಾಗವಹಿಸಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ತನ್ನ ಟ್ವಿಟರ್‍ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಾನು, ಅಮ್ಮ, ಪ್ರಿಯಾಂಕ ಈ ದಿನವನ್ನು ನೆನಪಿಟ್ಟುಕೊಳ್ಳುವಂತಹ ದಿನವಾಗಿದೆ. ಏಕೆಂದರೇ ನಾವು ದೆಹಲಿಯಲ್ಲಿ ಇದು ಬೆಳಿಗ್ಗೆ ಸೋನಿಪತ್ ರೈತ ಸಹೋದರಿಯನ್ನು ಭೇಟಿ ಆಗಿದ್ದೇವೆ. ಅವರೊಂದಿಗೆ ಆಹಾರ ಸೇವಿಸಿ, ಹಾಸ್ಯ, ಹರಟೆ ಸಂವಾದ ಎಲ್ಲವೂ ನಡೆದಿದೆ. ಜೊತೆಗೆ ನಮ್ಮ ತಾಯಿಯನ್ನು ಭೇಟಿ ಮಾಡಿ ಕೆಲವೊಂದು ಗಿಫ್ಟ್ ಸಹ ನೀಡಿದ್ದಾರೆ. ದೇಸಿ ತುಪ್ಪ ಸೇರಿದಂತೆ ಮನೆಯಲ್ಲಿ ತಯಾರಿಸಿದ ಹಲವು ತಿನ್ನಿಸುಗಳನ್ನು ನೀಡಿ ಪ್ರೀತಿ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.