ಆ ವಯಸ್ಸಿನಲ್ಲಿ ಅಂತಹ ಬಯಕೆ ಇತ್ತು, ಇದೀಗ ಇಲ್ಲ ಎಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ ಹಾಟ್ ಬ್ಯೂಟಿ ಆಂಡ್ರಿಯಾ…..!

Follow Us :

ಮಲ್ಟಿ ಟ್ಯಾಲೆಂಟೆಡ್ ನಟಿಯರಲ್ಲಿ ಸಿಂಗರ್‍ ಕಂ ನಟಿ ಆಂಡ್ರಿಯಾ ಜೆರಿಮಿಯಾ ಸಹ ಒಬ್ಬರಾಗಿದ್ದಾರೆ. ಸಿಂಗರ್‍ ಆಗಿ, ಸಿನೆಮಾಗಳಲ್ಲಿ ನಟಿಯಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ಸಹ ಆಕೆ ಸೈ ಎನ್ನುತ್ತಿರುತ್ತಾರೆ. ಇನ್ನೂ ಆಕೆಯ ಸಿನಿ ಕೆರಿಯರ್‍ ನಲ್ಲಿ ಅನೇಕ ವಿವಾದಗಳೂ ಸಹ ಮನೆ ಮಾಡಿದೆ.  ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗುವ ಈಕೆ ಇದೀಗ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ನಟಿ ಕಂ ಸಿಂಗರ್‍ ಆಂಡ್ರಿಯಾ ಜೀವನದಲ್ಲಿ ತುಂಬಾನೆ ವಿವಾದಗಳಿವೆ. ಸುಚಿ ಲೀಕ್ಸ್ ನಲ್ಲಿ ಆಕೆಯ ಹೆಸರು ತುಂಬಾನೆ ಕೇಳಿಬಂತು. ಸೌತ ಮ್ಯೂಸಿಕ್ ಡೈರೆಕ್ಟರ್‍ ಅನಿರುಧ್ ಜೊತೆಗೆ ಆಕೆ ಡೇಟ್ ನಡೆಸಿದ್ದಾರೆ. ಆತನೊಂದಿಗೆ ತುಂಬಾ ಕ್‌ಓಜ್ ಆಗಿರುವಂತಹ ಪೊಟೋಗಳೂ ಸಹ ಲೀಕ್ ಆಗಿತ್ತು. ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬ ಸುದ್ದಿಗಳೂ ಸಹ ಹರಿದಾಡಿತ್ತು. ಸಿನಿರಂಗದಲ್ಲಿ ಏನೇ ವಿಚಾರವಿದ್ದರೂ ನೇರವಾಗಿಯೇ ಮಾತನಾಡುವಂತಹ ವ್ಯಕ್ತಿತ್ವವುಳ್ಳ ನಟಿಯರಲ್ಲಿ ಆಂಡ್ರಿಯಾ ಸಹ ಒಬ್ಬರಾಗಿದ್ದಾರೆ. ಕಂಡ ಮುದಲ್ ಆಮೆ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಆಯರತಿ ಒರುವನ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡರು. ಈ ಸಿನೆಮಾ ತೆಲುಗಿನಲ್ಲಿ ಯುಗಾನಿಕ ಒಕ್ಕಡು ಟೈಟಲ್ ನಡಿ ಬಿಡುಗಡೆಯಾಗಿತ್ತು. ಕೊನೆಯದಾಗಿ ಆಕೆ ವಿಕ್ಟರಿ ವೆಂಕಟೇಶ್ ರವರ ಸೈಂಧವ್ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

ಸದ್ಯ ಸಿಂಗರ್‍ ಆಗಿ, ನಟಿಯಾಗಿ ಸಕ್ಸಸ್ ಪುಲ್ ಕೆರಿಯರ್‍ ಸಾಗಿಸುತ್ತಿರುವ ಆಂಡ್ರಿಯಾ ಆಗಾಗ ಕೆಲವೊಂದು ಸಂದರ್ಶನಗಳಲ್ಲೂ ಭಾಗಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಪ್ರಶ್ನೆ ಎದುರಾಗಿದ್ದು, ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಒಂದು ವಯಸ್ಸು ಬಂದಾಗ ಪ್ರತಿ ಯುವತಿಗೆ ಮದುವೆಯಾಗಬೇಕೆಂಬ ಬಯಕೆ ಇರುತ್ತದೆ. ನನಗೂ ಸಹ 30ರ ವಯಸ್ಸಿನಲ್ಲಿ ಮದುವೆಯಾಗಬೇಕೆಂಬ ಬಯಕೆ ಬಂತು. ಆದರೆ ಇದೀಗ ಆ ಆಲೋಚನೆ ಇಲ್ಲ. ಆ ವಯಸ್ಸು ಸಹ ದಾಟಿಹೋಗಿದೆ. ಒಂಟಿಯಾಗಿ ಇರುವುದರಿಂದ ನನಗೆ ಯಾವುದೇ ಸಮಸ್ಯೆಯಾಗುತ್ತಿಲ್ಲ. ನನಗೆ ಮದುವೆ ಮಾಡಿಕೊಳ್ಳಬೇಕೆಂಬ ಯೋಚನೆ ಸಹ ಇಲ್ಲ ಎಂದು ಹೇಳಿದ್ದಾರೆ. ಈ ಹೇಳಿಕೆಗಳ ಮೂಲಕ ಆಕೆ ಜೀವನಪರ್ಯಂತ ಒಂಟಿಯಾಗಿ ಜೀವಿಸಲು ಇಷ್ಟ ಪಟ್ಟಿದ್ದಾರೆ ಎಂದು ಹೇಳಬಹುದಾಗಿದೆ.