Film News

ಇಂಡಿಯಾ ಗೇಟ್ ವೇ ಮುಂದೆ ಲಿಪ್ ಲಾಕ್ ಮಾಡಿದ ಅಮಿ, ಪ್ರಿಯಕರನೊಂದಿಗೆ ಲಿಪ್ ಲಾಕ್ ಮಾಡಿದ ನಟಿ ಅಮಿ ಜಾಕ್ಸನ್…..!

ಸಿನೆಮಾ ಸೆಲೆಬ್ರೆಟಿಗಳಿಗೆ ಅಫೈರ್ಸ್, ಡೇಟಿಂಗ್ಸ್, ಬ್ರೇಕಪ್ಸ್, ಲವ್ ಮ್ಯಾರೇಜ್ ಗಳು ಹೀಗೆ ಎಲ್ಲವೂ ಸಾಮಾನ್ಯವಾದ ವಿಚಾರ ಎಂದೇ ಹೇಳಬಹುದು. ಅದರಲ್ಲೂ ಹಾಲಿವುಡ್ ಸಿನಿರಂಗದ ಕಲಾವಿದರು ಇದೆಲ್ಲವನ್ನೂ ತುಂಬಾನೆ ಲೈಟ್ ಆಗಿ ತೆಗೆದುಕೊಳ್ಳುತ್ತಾರೆ. ಈ ಸಾಲಿಗೆ ಹಾಲಿವುಡ್ ಮೂಲದ ನಟಿ ಅಮಿ ಜಾಕ್ಸನ್ ಸಹ ಸೇರುತ್ತಾರೆ. ಸದ್ಯ ಆಕೆ ಜಾಕ್ ಪೀಟರ್‍ ವೆಸ್ಟ್ ವಿಕ್ ಎಂಬ ಹಾಲಿವುಡ್ ನಟನೊಂದಿಗೆ ಗಾಢವಾದ ಪ್ರೀತಿಯಲ್ಲಿದ್ದಾರೆ. ಇದೀಗ ಆಕೆ ಸಾರ್ವಜನಿಕ ಪ್ರದೇಶದಲ್ಲಿ ಆತನಿಗೆ ಲಿಪ್ ಕಿಸ್ ಮಾಡಿದ್ದಾರೆ. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವಿದೇಶಿ ಮೂಲದ ನಟಿ ಅಮಿ ಜಾಕ್ಸನ್ ಇದೀಗ ಸಿನೆಮಾಗಳಿಂದ ಕೊಂಚ ದೂರವೇ ಉಳಿದರೂ ಸಹ ಆಕೆ ತನ್ನ ವೈಯುಕ್ತಿಕ ವಿಚಾರಗಳ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಇನ್ನೂ ತನ್ನ ಕೆರಿಯರ್‍ ಯಶಸ್ವಿಯಾಗಿ ಸಾಗುತ್ತಿದ್ದ ಸಮಯದಲ್ಲೇ ಆಕೆ ದೊಡ್ಡ ಉದ್ಯಮಿ ಜಾರ್ಜ್ ಪನಿಯಾಟೌತ್ ಎಂಬಾತನೊಂದಿಗೆ ಎಫೈರ್‍ ಇಟ್ಟುಕೊಂಡಿದ್ದರು. ಸುಮಾರು ದಿನಗಳ ಕಾಲ ಡೇಟಿಂಗ್ ಮಾಡಿದರು. ಜೊತೆಗೆ ಒಂದು ಮಗುವಿಗೂ ಸಹ ಜನ್ಮ ನೀಡಿದರು. ಜಾರ್ಜ್ ನೊಂದಿಗೆ ಬೇರೆಯಾದ ಬಳಿಕ ಅಮಿ ಜಾಕ್ಸನ್ ಕೆಲವು ದಿನಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದರು. ಸದ್ಯ ಆಕೆ ಇಂಗ್ಲೀಷ್ ನಟ ವೆಸ್ಟ್ ವಿಕ್ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ. ಸದ್ಯ ಅವರಿಬ್ಬರೂ ಇಂಡಿಯಾ ವೆಕೇಷನ್ ನಲ್ಲಿದ್ದಾರೆ. ಭಾರತದಲ್ಲಿನ ಕೆಲವೊಂದು ತಾಣಗಳಲ್ಲಿ ವಿಹರಿಸುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ಭಾರತಕ್ಕೆ ಹನಿಮೂನ್ ಟ್ರಿಪ್ ಎಂಬಂತೆ ಅವರು ಕೆಲವೊಂದು ಐಕಾನಿಕ್ ಪ್ರದೇಶಗಳಿಗೆ ಭೇಟಿ ನೀಡಿ ಅದಕ್ಕೆ ಸಂಬಂಧಿಸಿದ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಪೈಕಿ ಆಕೆ ಇಂಡಿಯಾ ಗೇಟ್ ಬಳಿ ಪ್ರಿಯಕರನೊಂದಿಗೆ ಲಿಪ್ ಲಾಕ್ ಮಾಡಿದ ಪೊಟೋ ಮಾತ್ರ ಸಖತ್ ವೈರಲ್ ಆಗುತ್ತಿದೆ. ಗೇಟ್ ವೇ ಆಫ್ ಇಂಡಿಯಾ ಮುಂಭಾಗ ಎಡ್ ವೆಸ್ಟ್ ವಿಕ್ ಗೆ ಮುತ್ತಿಡುತ್ತಿರುವ ಪೊಟೋ ಇದೀಗ ಸಂಚಲನ ಸೃಷ್ಟಿಸಿದೆ ಎಂದು ಹೇಳಬಹುದಾಗಿದೆ. ಸಾರ್ವಜನಿಕವಾಗಿ ಈ ರೀತಿ ಮಾಡಿದ ಹಿನ್ನೆಲೆಯಲ್ಲಿ ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ಸದ್ಯ ಇದೀಗ ಈ ಪೊಟೋ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಜೊತೆಗೆ ಒಬ್ಬರನ್ನೊಬ್ಬರು ತಬ್ಬಿಕೊಂಡ ರೊಮ್ಯಾಂಟಿಕ್ ಪೊಟೋ ಸಹ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸಿದೆ.

ಇನ್ನೂ ಅಮಿ ಜಾಕ್ಸನ್ ಸಿನೆಮಾಗಳಿಂದ ದೂರವೇ ಉಳಿದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದರು. ಸೋಷಿಯಲ್ ಮಿಡಿಯಾ ಮೂಲಕವೇ ತಮ್ಮ ಬಗ್ಗೆ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ. ಮದರಾಸಿ ಪಟ್ಟಣಂ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಅನೇಕ ಸಿನೆಮಾಗಳಲ್ಲಿ ನಟಿಸಿ ಫೇಂ ಪಡೆದುಕೊಂಡರು. ಸ್ಟಾರ್‍ ನಟರ ಸಿನೆಮಾಗಳಲ್ಲಿ ನಟಿಸಿದರೂ ಸಹ ಸ್ಟಾರ್‍ ಡಂ ಸಿಗದ ಕಾರಣ ಆಕೆ ಸಿನೆಮಾಗಳಿಂದ ದೂರವಾದರು ಎಂದೂ ಸಹ ಹೇಳಲಾಗುತ್ತಿದೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ.

Most Popular

To Top