ಕಾಸ್ಟಿಂಗ್ ಕೌಚ್ ಬಗ್ಗೆ ಸಂಚಲನಾತ್ಮಕ ಕಾಮೆಂಟ್ಸ್ ಮಾಡಿದ ನಟಿ ಶೆರ್ಲಿನ್ ಚೋಪ್ರಾ, ಅದರ ಸೈಜ್ ಎಷ್ಟು ಎಂದ್ರಿದಂತೆ ನಿರ್ದೇಶಕ…..!

ಬಾಲಿವುಡ್ ರಂಗದಲ್ಲಿ ವಿವಾದಗಳ ಮೂಲಕ ಸದ್ದು ಮಾಡುವ ನಟಿಯರ ಸಾಲಿಗೆ ಶೆರ್ಲಿನ್ ಚೋಪ್ರಾ ಸಹ ಸಹ ಒಬ್ಬರಾಗಿದ್ದಾರೆ. ಬೋಲ್ಡ್ ಬ್ಯೂಟಿಯಾಗಿ ಫೇಂ ಪಡೆದುಕೊಂಡ ಶೆರ್ಲಿನ್ ಆಗಾಗ ಸಂಚಲನಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆಯ…

ಬಾಲಿವುಡ್ ರಂಗದಲ್ಲಿ ವಿವಾದಗಳ ಮೂಲಕ ಸದ್ದು ಮಾಡುವ ನಟಿಯರ ಸಾಲಿಗೆ ಶೆರ್ಲಿನ್ ಚೋಪ್ರಾ ಸಹ ಸಹ ಒಬ್ಬರಾಗಿದ್ದಾರೆ. ಬೋಲ್ಡ್ ಬ್ಯೂಟಿಯಾಗಿ ಫೇಂ ಪಡೆದುಕೊಂಡ ಶೆರ್ಲಿನ್ ಆಗಾಗ ಸಂಚಲನಾತ್ಮಕ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಆಕೆಯ ಕಾಮೆಂಟ್ ಗಳು ಸದಾ ವಿವಾದಗಳನ್ನು ಸೃಷ್ಟಿ ಮಾಡುತ್ತಿರುತ್ತವೆ. ಇದೀಗ ಆಕೆ ತಾನು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಆ ನಿರ್ದೇಶಕ ಅದರ ಸೈಜ್ ಎಷ್ಟು, ಅದನ್ನು ಮುಟ್ಟಲಾ ಎಂದು ಕೇಳಿದ್ದ ಎಂದು ಶೆರ್ಲಿನ್ ಚೋಪ್ರಾ ಕಾಮೆಂಟ್ಸ್ ಮಾಡಿದ್ದು, ಅವು ವೈರಲ್ ಆಗುತ್ತಿವೆ.

ಸದ್ಯ ಶೆರ್ಲಿನ್ ಚೋಪ್ರಾ ಪೌರಾಶಪುರ-2 ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಈ ಸಿರೀಸ್ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಮೋಷನ್ ನಿಮಿತ್ತ ಆಕೆ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳಲ್ಲಿ ಸಹ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕೆರಿಯರ್‍ ಆರಂಭದಲ್ಲಿ ಆಕೆಯೊಂದಿಗೆ ಕೆಲವರು ಅಸಭ್ಯವಾಗಿ ವರ್ತನೆ ಮಾಡಿದ್ದರಂತೆ. ಆದರೆ  ಕೆಲವು ನಿರ್ದೇಶಕರು ಆಕೆಯ ಎದೆಯ ಸೈಜ್ ಬಗ್ಗೆ ನೇರವಾಗಿಯೇ ಕೇಳಿದ್ದರಂತೆ. ಜೊತೆಗೆ  ಅವನ್ನು ಟಚ್ ಮಾಡಬೇಕು ಎಂದೂ ಸಹ ಹೇಳಿದ್ದರಂತೆ. ನೀನು ನಿನ್ನ ಬ್ರೆಸ್ಟ್ ಗಾಗಿ ಆಪರೇಷನ್ ಮಾಡಿಸಿಕೊಂಡಿದ್ದೀಯಾ ಎಂದೂ ಕೇಳಿದ್ದರಂತೆ. ಈ ರೀತಿಯಾಗಿ ಆಕೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

ಓರ್ವ ನಿರ್ದೇಶಕ ಆಕೆಗೆ ನಿನ್ನ ಎದೆಯ ಸೈಜ್ ಎಷ್ಟು, ಅದಕ್ಕೆ ಸರ್ಜರಿ ಮಾಡಿಸಿಕೊಂಡಿದ್ದೀಯಾ, ಅವುಗಳನ್ನು ನಾನು ಒಮ್ಮೆ ಮುಟ್ಟಬಹುದಾ ಎಂದು ಅಸಭ್ಯವಾಗಿ ಮಾತನಾಡಿದ್ದನಂತೆ. ಆ ನಿರ್ದೇಶಕ ಹಾಗೇ ಮಾತನಾಡಿದ ಕೂಡಲೇ ನಾನು ಶಾಕ್ ಆಗಿಬಿಟ್ಟೆ. ನಿಜಕ್ಕೂ ನಟಿಯ ಸೈಜ್ ತಿಳಿದುಕೊಂಡ ಬಳಿಕ ಪ್ರೇಕ್ಷಕರು ಸಿನೆಮಾಗಳನ್ನು ನೋಡ್ತಾರಾ ಎಂದು ಆತನಿಗೆ ಪ್ರಶ್ನೆ ಕೇಳಿದ್ದೆ. ನಿಮಗೆ ಮದುವೆಯಾಗಿದೆ ಅಲ್ವಾ, ನಿಮಗೆ ಲೇಡಿಸ್ ಬಾಡಿ ಸೈಜ್ ಗಳ ಬಗ್ಗೆ ತಿಳಿಯದೇ ಎಂದು ಪ್ರಶ್ನೆ ಮಾಡಿದ್ದೆ. ಅದಕ್ಕೆ ಆತ ಹೌದಾ ನಾನು ನನ್ನ ಪತ್ನಿಯೊಂದಿಗೆ ಹೆಚ್ಚಾಗಿ ಮಾತನಾಡಲ್ಲ ಎಂದು ಆತ ಉತ್ತರ ನೀಡಿದ್ದನಂತೆ. ಹೀಗೆ ಆಕೆ ತನ್ನ ಕೆರಿಯರ್‍ ನಲ್ಲಿ ಅನುಭವಿಸಿದ ಕೆಲವೊಂದು ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಇನ್ನೂ ಅನೇಕ ಬಾರಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಂತೆ ಶೆರ್ಲಿನ್. ನಮ್ಮಲ್ಲಿ ಅನೇಕ ಮಂದಿ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅಂತಹ ಪರಿಸ್ಥಿತಿಗಳನ್ನು ಎದುರಿಸಿ ಮುಂದೆ ಸಾಗಬೇಕು. ಜತೆಗೆ 2021 ರಲ್ಲಿ ನನ್ನ ಕಿಡ್ನಿ ಫೈಲ್ ಆಗಿತ್ತು. ಆಗಲೇ ನನ್ನ ಜೀವನ ಮುಗಿತು ಎಂದು ಕೊಂಡಿದ್ದೆ, ಆ ಸಮಯದಲ್ಲಿ ನನ್ನ ಕುಟುಂಬ ಸಹ ನನ್ನೊಂದಿಗೆ ಇರಲಿಲ್ಲ. ಆದರೂ ಧೈರ್ಯವಾಗಿ ಸಮಸ್ಯೆಗಳನ್ನು ಎದುರಿಸಿದ್ದೇನೆ ಎಂದು ಆಕೆ ಹೇಳಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.