ಪ್ರಿಯಕರನಿಗೋಸ್ಕರ ಪೋಲೆಂಡ್ ನಿಂದ ಮಗಳೊಂದಿಗೆ ಭಾರತಕ್ಕೆ ಬಂದ 49ರ ಮಹಿಳೆ….!

Follow Us :

ಪ್ರೀತಿ ಕುರುಡು, ಪ್ರೀತಿಗೆ ಜಾತಿ, ಗಡಿ, ವಯಸ್ಸು ಎಂಬುದು ಇಲ್ಲವೇ ಇಲ್ಲ ಎಂಬ ಮಾತುಗಳು ಆಗಾಗ ನಿಜ ಆಗುತ್ತಿರುತ್ತವೆ. ದೇಶ ವಿದೇಶಗಳಲ್ಲಿ ಗಾಢವಾದ ಪ್ರೇಮಿಗಳು ಇದಕ್ಕೆ ಉತ್ತಮ ಉದಾಹರಣೆ ಎಂದೇ ಹೇಳಬಹುದಾಗಿದೆ. ಇದೀಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಪೋಲೆಂಡ್ ನ 49 ವರ್ಷದ ಮಹಿಳೆಯೊಬ್ಬರು ತನ್ನ ಮಗಳೊಂದಿಗೆ ಭಾರತದಲ್ಲಿರುವ ಪ್ರಿಯಕರನನ್ನು ಹುಡುಕಿ ಬಂದಿದ್ದಾರೆ. ಇದೀಗ ಈ ಸುದ್ದಿ ಭಾರಿ ಸದ್ದು ಮಾಡುತ್ತಿದೆ.

ಸೋಷಿಯಲ್ ಮಿಡಿಯಾದಲ್ಲಿ ದೇಶದ ಗಡಿಗಳನ್ನು ಮೀರಿ ಸ್ನೇಹ, ಪ್ರೀತಿ ಹುಟ್ಟುತ್ತಿರುತ್ತದೆ. ಇನ್ಸ್ಟಾಗ್ರಾಂ ನಲ್ಲಿ ಪರಿಚಯವಾದ ಗೆಳೆಯನಿಗಾಗಿ 49 ವರ್ಷದ ಪೋಲೆಂಡ್ ಮೂಲದ ಮಹಿಳೆಯ ಭಾರತಕ್ಕೆ ಬಂದಿದ್ದಾರೆ. ಪೋಲೆಂಡ್ ನ ಮಹಿಳೆ ಬಾರ್ಬಾರಾ ಪೋಲಾಕ್ ಹಾಗೂ ಜಾರ್ಖಂಡ್ ನ ಹಜಾರಿಬಾಗ್ ನ ಶಾದಾಬ್ ಮಲ್ಲಿಕ್ ರವರ ನಡುವೆ 2021 ರಲ್ಲಿ ಇನ್ಸ್ಟಾ ಮೂಲಕ ಪರಿಚಯವಾಗಿದೆ. ಅವರ ಪರಿಚಯ ಕೆಲವೇ ದಿನಗಳಲ್ಲಿ ಪ್ರೀತಿಯಾಗಿ ಬದಲಾಗಿದೆ. ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲವೆಂಬಷ್ಟು ಪ್ರೀತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಲೆಂಡ್ ಮಹಿಳೆ ತನ್ನ ಆರು ವರ್ಷದ ಮಗಳಾದ ಅನನ್ಯಾ ಎಂಬಾಕೆಯೊಂದಿಗೆ ಭಾರತಕ್ಕೆ ಬಂದು, ಹಜಾರಿಬಾಗ್ ನಲ್ಲಿ ಪ್ರಿಯಕರನೊಂದಿಗೆ ಜೀವನ ಸಾಗಿಸಿದ್ದಾಳೆ. ಇನ್ನೂ ಆಕೆ ಪ್ರವಾಸಿ ವೀಸಾ ಮೇಲೆ ಭಾರತಕ್ಕೆ ಬಂದಿದ್ದು, 2027 ರವರೆಗೂ ಆಕೆ ಇಲ್ಲಿಯೇ ವಾಸವಿರಬಹುದಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಪೊಲಾಕ್ ಹಾಗೂ ಮಲ್ಲಿಕ್ ಇಬ್ಬರೂ ಮದುವೆಯಾಗಲು ನಿರ್ಧಾರ ಮಾಡಿದ್ದು, ಹಜಾರಿಬಾಗ್ ನಲ್ಲಿರುವ ಉಪ ವಿಭಾಗೀಯ ಮ್ಯಾಜಸ್ಟ್ರೇಟ್ ನ್ಯಾಯಾಲಯದಲ್ಲಿ ಮದುವೆಯಾಗಲು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಪೋಲಾಕ್ ತನ್ನ ಮೊದಲ ಪತಿಯಿಂದ ವಿಚ್ಚೇದನ ಪಡೆದುಕೊಂಡಿದ್ದಾಳೆ. ಪೋಲಾಕ್ ಮಗಳಾದ ಅನನ್ಯಾ ಈಗಾಗಲೇ ಮಲ್ಲಿಕ್ ನನ್ನು ಡ್ಯಾಡಿ ಎಂದೂ ಕರೆಯಲು ಶುರು ಮಾಡಿದ್ದಾಳಂತೆ. ಇನ್ನೂ ಈ ಬಗ್ಗೆ ಪೊಲಾಕ್ ರಿಯಾಕ್ಟ್ ಆಗಿದ್ದು, ಶಾದಾಬ್ ಮಲ್ಲಿಕ್ ತುಂಬಾ ಒಳ್ಳೆಯ ವ್ಯಕ್ತಿ. ಭಾರತ ಸುಂದರವಾದ ದೇಶ. ನಾನು ಹಜಾರಿಬಾಗ್ ಗೆ ಬಂದಾಗ ಅನೇಕರು ನನ್ನ ನೋಡಲು ಬಂದರು. ನನಗೆ ಸ್ವಂತ ಮನೆ, ಕಾರು ಹಾಗೂ ಒಳ್ಳೆಯ ಕೆಲಸ ಇದೆ. ಆದರೆ ನಾನು ಮಲ್ಲಿಕ್ ಗೋಸ್ಕರ ಭಾರತಕ್ಕೆ ಬಂದಿದ್ದೇನೆ. ನಾವಿಬ್ಬರೂ ಸಂತೋಷವಾಗಿ ಜೀವನ ಸಾಗಿಸಲು ಶೀಘ್ರ ಮದುವೆಯಾಗಲಿದ್ದೇವೆ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ ಪೋಲಾಕ್ ಬಾರ್ಬಾರಾ. ಸದ್ಯ ಅವರ ಕೆಲವೊಂದು ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.