Film News

ಆ ಸಿನೆಮಾ ಅಂದ್ರೆ ನನಗೆ ಕೊಂಚವೂ ಇಷ್ಟ ಇಲ್ಲ ಎಂದು ಬಾಲಕೃಷ್ಣ ಸಿನೆಮಾದ ಬಗ್ಗೆ ಕಾಮೆಂಟ್ ಮಾಡಿದ ಅನುಷ್ಕಾ….!

ಮೊದಲನೇ ಸಿನೆಮಾದ ಮೂಲಕವೇ ಭಾರಿ ಕ್ರೇಜ್ ಪಡೆದುಕೊಂಡ ನಟಿಯರ ಸಾಲಿಗೆ ಅನುಷ್ಕಾ ಶೆಟ್ಟಿ ಸಹ ಸೇರುತ್ತಾರೆ. ಅನೇಕ ಸಿನೆಮಾಗಳ ಮೂಲಕ ಭಾರಿ ಕ್ರೇಜ್ ಪಡೆದುಕೊಂಡ ಈಕೆ ಸ್ಟಾರ್‍ ನಟರಿಂದ ಲೇಡಿ ಓರಿಯೆಂಟೇಂಡ್ ಸಿನೆಮಾಗಳಲ್ಲೂ ಸಹ ನಟಿಸಿದ್ದಾರೆ. ಪ್ರಭಾಸ್, ಅಲ್ಲು ಅರ್ಜುನ್, ರಾಣಾ, ರಾಮ್ ಚರಣ್, ಮಹೇಶ್ ಬಾಬು, ರವಿತೇಜ, ನಾಗಾರ್ಜುನ, ಬಾಲಕೃಷ್ಣ ಮೊದಲಾದವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಕಡಿಮೆ ಸಮಯದಲ್ಲೇ ಆಕೆ ಸ್ಟಾರ್‍ ಡಂ ಗಿಟ್ಟಿಸಿಕೊಂಡರು. ಬಾಹುಬಲಿ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಸಹ ಆಗಿದ್ದಾರೆ. ಇದೀಗ ಬಾಲಕೃಷ್ಣ ಜೊತೆ ನಟಿಸಿದ ಸಿನೆಮಾದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ.

ನಟಿ ಅನುಷ್ಕಾ ಶೆಟ್ಟಿ ಲೇಡಿ ಸ್ಟಾರ್‍ ಆಗಿ ಸೌತ್ ಸಿನೆಮಾಗಳಲ್ಲಿ ತಮ್ಮದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ಸೂಪರ್‍ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಬೇಡಿಕೆಯನ್ನು ಹೆಚ್ಚಿಸಿಕೊಂಡರು. ಬಾಹುಬಲಿ ಸಿನೆಮಾದ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡ ಆಕೆ ಬಳಿಕ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಆಕೆಗೆ ಅಷ್ಟೊಂದು ಸಕ್ಸಸ್ ಕಾಣಲಿಲ್ಲ. ಕೊನೆಯದಾಗಿ ಆಕೆ ನಿಶ್ಯಬ್ದಂ ಎಂಬ ಸಿನೆಮಾದ ಮೂಲಕ ಕಾಣಿಸಿಕೊಂಡರು. ಇನ್ನೂ ಇದಾದ ಬಳಿಕ  ಆಕೆ ಯಾವುದೇ ಸಿನೆಮಾದಲ್ಲಿ ನಟಿಸಿರಲಿಲ್ಲ. ಆಕೆ ಸಿನೆಮಾಗಳಿಂದ ದೂರ ಉಳಿದ ಕಾರಣ ಆಕೆ ಮದುವೆಗೆ ಸಿದ್ದರಾಗಿದ್ದಾರೆ ಆ ಕಾರಣದಿಂದಲೇ ಸಿನೆಮಾಗಳಿಂದ ದೂರ ಉಳಿದಿದ್ದಾರೆ ಎಂಬೆಲ್ಲಾ ರೂಮರ್‍ ಗಳು ಕೇಳಿಬಂದವು. ಇದೀಗ ಆಕೆ ಮಿಸ್ ಶೆಟ್ಟಿ ಮಿಸ್ಟರ್‍ ಪೊಲಿಶೆಟ್ಟಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

ಇನ್ನೂ ಅನುಷ್ಕಾ ಶೆಟ್ಟಿ ಈ ಹಿಂದೆ ಭಾಗಿಯಾಗಿದ್ದ ಸಂದರ್ಶನದ ಕೆಲವೊಂದು ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ಸಮಯದಲ್ಲಿ ಅನುಷ್ಕಾ ನಿಮಗೆ ಇಷ್ಟವಾದ ಸಿನೆಮಾಗಳು ಯಾವುದು, ಇಷ್ಟವಲ್ಲದ ಸಿನೆಮಾಗಳು ಯಾವುದು ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲಾಗಿದ್ದು, ಅದಕ್ಕೆ ಅನುಷ್ಕಾ ಉತ್ತರಿಸಿದ ಹೇಳಿಕೆಗಳು ಇದೀಗ ವೈರಲ್ ಆಗಿದೆ. ಇಷ್ಟವಾದ ಸಿನೆಮಾಗಳು ಎಂದರೇ ವೇದಂ, ಹಾಗೂ ಅರುಂಧತಿ ಸಿನೆಮಾಗಳು ಎಂದಿದ್ದಾರೆ. ಈ ಎರಡೂ ಸಿನೆಮಾಗಳೆಂದರೇ ಆಕೆಗೆ ತುಂಬಾನೆ ಇಷ್ಟವಂತೆ. ಇನ್ನೂ ಇಷ್ಟವಿಲ್ಲದ ಸಿನೆಮಾ ಎಂದರೇ ನಂದಮೂರಿ ಬಾಲಕೃಷ್ಣ ರವರ ಒಕ್ಕ ಮಗಾಡು ಸಿನೆಮಾ ಎಂದು ಹೇಳಿದ್ದಾರೆ. ಅದೇ ರೀತಿ ನಿಮ್ಮ ಕೆರಿಯರ್‍ ನಲ್ಲಿ ಬಂದಂತಹ ದೊಡ್ಡ ಗಾಸಿಪ್ ಬಗ್ಗೆ ಕೇಳಿದರೇ ಐದು ಬಾರಿ ಮದುವೆಯಾಗಿದ್ದು ಎಂದು ಹೇಳಿದ್ದರು. ಸದ್ಯ ಅನುಷ್ಕಾ ಶೆಟ್ಟಿ ಯ ಹಳೆಯ ಸಂದರ್ಶನದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಕೇಳಿಬರುತ್ತಿವೆ.

ಸುಮಾರು ವರ್ಷಗಳ ಕಾಲ ಅನುಷ್ಕಾ ಸಿನೆಮಾಗಳಿಂದ ದೂರವೇ ಉಳಿದಿದ್ದರು. ಇದೀಗ ಆಕೆ ಮತ್ತೆ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ನವೀನ್ ಪೊಲಿಶೆಟ್ಟಿ ಜೊತೆಗೆ ಮಿಸ್ ಶೆಟ್ಟಿ ಮಿಸ್ಟರ್‍ ಪೊಲಿಶೆಟ್ಟಿ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಆಕೆ ಚೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

Most Popular

To Top