ಬಂಪರ್ ಆಫರ್ ಗಿಟ್ಟಿಸಿಕೊಂಡ ಕೆಜಿಎಫ್ ಬ್ಯೂಟಿ, ನಂದಮೂರಿ ಬಾಲಯ್ಯ ಜೊತೆಗೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಶ್ರೀನಿಧಿ ಶೆಟ್ಟಿ….!

Follow Us :

ಬ್ಲಾಕ್ ಬ್ಲಸ್ಟರ್‍ ಹಿಟ್ ಹೊಡೆದ ಕೆಜಿಎಫ್ ಸಿನೆಮಾದ ಮೂಲಕ ಸಿನಿಲೋಕಕ್ಕೆ ಎಂಟ್ರಿಕೊಟ್ಟ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನೆಮಾದ ಮೂಲಕ  ದೊಡ್ಡ ಮಟ್ಟದಲ್ಲಿ ಹೆಸರು ಗಳಿಸಿಕೊಂಡಿದ್ದಾರೆ. ಕೆಜಿಎಫ್ ಸಿನೆಮಾದಲ್ಲಿ ಆಕೆಯ ಪಾತ್ರ ಕಡಿಮೆಯಿದ್ದರೂ ಸಹ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. ಈ ಸಿನೆಮಾದ ಬಳಿಕ ಆಕೆ ತಮಿಳಿನ ಕೋಬ್ರಾ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣಲಿಲ್ಲ ಎಂದು ಹೇಳಬಹುದು. ಇದೀಗ ಟಾಲಿವುಡ್ ನ ಸ್ಟಾರ್‍ ನಟ ನಂದಮೂರಿ ಬಾಲಕೃಷ್ಣ ಜೊತೆಗೆ ನಟಿಸುವ ಬಂಪರ್‍ ಆಫರ್‍ ಪಡೆದುಕೊಂಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದವರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ಕೆಜಿಎಫ್ ನಲ್ಲಿ ಕಾಣಿಸಿಕೊಂಡ ಸಣ್ಣ ಕಲಾವಿದರನ್ನೂ ಸಹ ಸ್ಟಾರ್‍ ಗಳನ್ನಾಗಿ ಮಾಡಿದ ಕೀರ್ತಿ ಕೆಜಿಎಫ್ ಚಿತ್ರತಂಡಕ್ಕೆ ಸಲ್ಲುತ್ತದೆ. ಕೆಜಿಎಫ್ ಸಿನೆಮಾದ ನಟಿ ಶ್ರೀನಿಧಿ ಶೆಟ್ಟಿ ಸಹ ಕೆಜಿಎಫ್ ಸಿನೆಮಾದಲ್ಲಿ ತುಂಬಾನೆ ಅದ್ಬುತವಾಗಿ ನಟಿಸಿದ್ದರು. ಕೆಜಿಎಫ್-1 ಸಿನೆಮಾದ ಬಳಿಕ ಆಕೆಗೆ ದೊಡ್ಡ ಆಫರ್‍ ಗಳು ಬಂದರೂ ಸಹ ಆಕೆ ಕೆಜಿಎಫ್-2 ಸಿನೆಮಾಗಾಗಿ ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿರಲಿಲ್ಲ ಎನ್ನಲಾಗಿದೆ. ಈ ಸಿನೆಮಾದ ಬಳಿಕ ಆಕೆ ತಮಿಳಿನಲ್ಲಿ ವಿಕ್ರಂ ಚಿಯಾನ್ ಜೊತೆಗೆ ಕೋಬ್ರಾ ಸಿನೆಮಾದಲ್ಲಿ ನಟಿಸಿದರು. ಈ ಸಿನೆಮಾ ಆಕೆಗೆ ತೀವ್ರ ನಿರಾಸೆಯನ್ನು ತಂದುಕೊಟ್ಟಿತ್ತು. ಇದೀಗ ಆಕೆಗೆ ತೆಲುಗಿನಲ್ಲಿ ಬಂಪರ್‍ ಆಫರ್‍ ಸಿಕ್ಕಿದಂತಾಗಿದೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ನಟಿಯಾದರೂ ಸಹ ಶ್ರೀನಿಧಿ ಶೆಟ್ಟಿಗೆ ಅಂದುಕೊಂಡಷ್ಟು ಆಫರ್‍ ಗಳು ಬರಲಿಲ್ಲ ಎಂದು ಹೇಳಬಹುದಾಗಿದೆ. ಸದ್ಯ ಆಕೆಯ ಕೈಯಲ್ಲಿ ಒಂದದು ಸಿನೆಮಾ ಸಹ ಇಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಶ್ರೀನಿಧಿ ಶೆಟ್ಟಿಯನ್ನು ಹುಡುಕಿಕೊಂಡು ಒಂದು ಆಫರ್‍ ಬಂದಿದೆಯಂತೆ. ನಂದಮೂರಿ ಬಾಲಕೃಷ್ಣ ರವರ ಸಿನೆಮಾದಲ್ಲಿ ನಟಿಸುವ ಅವಕಾಶ ಬಂದಿದೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ಬಾಬಿ ಹಾಗೂ ನಂದಮೂರಿ ಬಾಲಕೃಷ್ಣ ರವರ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಸಿನೆಮಾದಲ್ಲಿ ಶ್ರೀನಿಧಿ ಶೆಟ್ಟಿಯವರನ್ನು ಆಯ್ಕೆ ಮಾಡಲು ಪ್ಲಾನ್ ಮಾಡಲಾಗಿದೆಯಂತೆ. ಈಗಾಗಲೇ ಕಥೆ ಹೇಳಿದ್ದು, ಅದಕ್ಕೆ ಶ್ರೀನಿಧಿ ಸಹ ಪಾಸಿಟೀವ್ ಆಗಿ ರಿಯಾಕ್ಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ನಿಜವಾಗಿ, ಸಿನೆಮಾ ಹಿಟ್ ಹೊಡೆದರೇ ಶ್ರೀನಿಧಿ ಕೆರಿಯರ್ ಸಹ ಬದಲಾಗಬಹುದು ಎನ್ನಲಾಗಿದೆ.

ಇನ್ನೂ ಈ ಸುದ್ದಿಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎನ್ನಲಾಗಿದೆ. ಭಗವಂತ್ ಕೇಸರಿ ಸಿನೆಮಾ ರಿಲೀಸ್ ಆದ ಬಳಿಕ ಈ ಸಿನೆಮಾದ ಬಗ್ಗೆ ಅಪ್ಡೇಟ್ಸ್ ಸಿಗಲಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಅವಕಾಶಗಳಿಲ್ಲದೇ ಇದ್ದಂತಹ ಶ್ರೀನಿಧಿ ಶೆಟ್ಟಿಗೆ ಬಂಪರ್‍ ಆಫರ್‍ ಬಂದಿದೆ ಎಂಬ ರೂಮರ್‍ ಇದೀಗ ಟಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ.