ಆಧಾರ್ ನಲ್ಲಿ ಕನ್ನಡ ಅಕ್ಷರಗಳಿಲ್ಲ ಎಂದು ವಿದ್ಯಾರ್ಥಿನಿಗೆ ಕಿರುಕುಳ ಕೊಟ್ಟ ಬಿಎಂಟಿಸಿ ಕಂಡಕ್ಟರ್, ಡ್ರೈವರ್……!

Follow Us :

ಆಧಾರ್‍ ಕಾರ್ಡ್‌ನಲ್ಲಿ ಕನ್ನಡ ಅಕ್ಷರಗಳಿಲ್ಲ ಎಂದು ಬಿಎಂಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕ ವಿದ್ಯಾರ್ಥಿನಿಯೊಬ್ಬರನ್ನು ನಿಂಧಿಸಿದ ಘಟನೆ ನಡೆದಿದೆ.  ಬಿಎಂಟಿಸಿ ಕಂಡಕ್ಟರ್‍, ಇಬ್ಬರು ಪುರುಷ ಪ್ರಯಾಣಿಕರಿಂದ 9ನೇ ತರಗತಿಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕಳೆದ ಆ.11 ರಂದು ಶಾಲೆ ಮುಗಿಸಿಕೊಂಡು ವಿದ್ಯಾರ್ಥಿನಿ ಬಿಎಂಟಿಸಿ ಬಸ್ ಹತ್ತಿದ್ದಾರೆ. ಕರ್ನಾಟಕ ಸರ್ಕಾರ ಶಕ್ತಿ ಯೋಜನೆ ಎಂಬ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟಿದೆ. ಅದರಂತೆ ವಿದ್ಯಾರ್ಥಿನಿ ಆಧಾರ್‍ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣಿಸಲು ಮುಂದಾಗಿದ್ದಾಳೆ. ಈ ವೇಳೆ ಬಸ್ ಕಂಡಕ್ಟರ್‍ ಆಧಾರ್‍ ಕಾರ್ಡ್ ನೋಡಿ ಅಕ್ಷರಗಳು ಹಿಂದಿಯಲ್ಲಿವೆ ಎಂದು, ಆಧಾರ್‍ ಕಾರ್ಡ್‌ನಲ್ಲಿ ಕರ್ನಾಟಕದ ವಿಳಾಸ ಇದ್ದರೂ ಕನ್ನಡ ಇಲ್ಲ ಎಂದು ಫ್ರೀ ಟಿಕೆಟ್ ನೀಡಲು ನಿರಾಕರಿಸಿದ್ದಾರೆ. ಜೊತೆಗೆ ಆಕೆಯ ಆಧಾರ್‍ ಕಾರ್ಡ್ ಕಿತ್ತುಕೊಂಡು ಎಲ್ಲಾ ಪ್ರಯಾಣಿಕರಿಗೆ ತೋರಿಸಿ ಆಧಾರ್‍ ಕಾರ್ಡ್ ನಲ್ಲಿ ಕನ್ನಡ ಇಲ್ಲ ಎಂದು ಪ್ರದರ್ಶನ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿನಿ ನನ್ನ ಆಧಾರ್‍ ಕಾರ್ಡ್ ಎಲ್ಲರಿಗೂ ಏಕೆ ತೋರಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ವಿದ್ಯಾರ್ಥಿನಿಗೆ ಬಸ್ ನಲ್ಲಿದ್ದ ಇಬ್ಬರು ಪ್ರಯಾಣಿಕರೂ ಸಹ ನಿಂಧಿಸಿದ್ದಾರೆ.

ಇದಾದ ಬಳಿಕ  ವಿದ್ಯಾರ್ಥಿನಿ ಹಣ ಕೊಟ್ಟು ಟಿಕೆಟ್ ತೆಗೆದುಕೊಂಡಿದ್ದಾರೆ. ಟಿಕೆಟ್ ಅನ್ನು ಹರಿದು ಬಸ್ ನಿಂದ ನಾನು ಇಳೀಯುತ್ತೇನೆ ಬಸ್ ನಿಲ್ಲಿಸಿ ಎಂದು ವಿದ್ಯಾರ್ಥಿನಿ ಹೇಳಿದ್ದರಂತೆ. ಆದರೆ ಕಂಡಕ್ಟರ್‍ ಹಾಗೂ ಡ್ರೈವರ್‍ ಬಸ್ ನಿಲ್ಲಸದೇ ಬೇರೆ ಕಡೆ ನಿಲ್ಲಿಸಿದ್ದಾರೆ. ಬಸ್ ನಲ್ಲಿರುವ ಎಲ್ಲಾ ಪ್ರಯಾಣಿಕರಿಗೆ ಆಕೆಯ ಆಧಾರ್‍ ಕಾರ್ಡ್ ತೋರಿಸಿ ವಿದ್ಯಾರ್ಥಿನಿಯನ್ನು ಬೈದಿದ್ದಾನೆ. ಹಣ ನೀಡಿ ಟಿಕೆಟ್ ಪಡೆದರೂ ಬಸ್ ನಿಂದ ಆಕೆಯನ್ನು ಕೆಳಗೆ  ಇಳಿಸಿದ್ದಾರೆ. ಇನ್ನೂ ಈ ಸಂಬಂಧ ವಿದ್ಯಾರ್ಥಿನಿ ತಾಯಿ ಮಂಜುಳಾ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅವರ ವಿರುದ್ದ ಕ್ರಮ ವಹಿಸುವಂತೆ ಆಕೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.