ಉರ್ಫಿಗೆ ಕೊಲೆ, ರೇಪ್ ಮಾಡುವ ಬೆದರಿಕೆ, ಆ ಡ್ರೆಸ್ ಧರಿಸಿದ ಕಾರಣಕ್ಕೆ ಬಂದ ಬೆದರಿಕೆ….!

ವಿಚಿತ್ರ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಏಕೈಕ ನಟಿ ಎಂದರೇ ಉರ್ಫಿ ಜಾವೇದ್ ಎಂದು ಹೇಳಬಹುದು. ವಿಚಿತ್ರ ಬಟ್ಟೆಗಳನ್ನು ಧರಿಸುತ್ತಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ. ಆಕೆ ಧರಿಸುವ ಬಟ್ಟೆಗಳು ಯಾವ ಡಿಸೈನರ್‍…

ವಿಚಿತ್ರ ಬಟ್ಟೆಗಳ ಮೂಲಕ ಸದಾ ಸುದ್ದಿಯಲ್ಲಿರುವ ಏಕೈಕ ನಟಿ ಎಂದರೇ ಉರ್ಫಿ ಜಾವೇದ್ ಎಂದು ಹೇಳಬಹುದು. ವಿಚಿತ್ರ ಬಟ್ಟೆಗಳನ್ನು ಧರಿಸುತ್ತಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಾರೆ. ಆಕೆ ಧರಿಸುವ ಬಟ್ಟೆಗಳು ಯಾವ ಡಿಸೈನರ್‍ ಯಾರೇಂದು ಸೋಷಿಯಲ್ ಮಿಡಿಯಾದಲ್ಲೂ ಸಹ ಕೆಲವರು ಹುಡುಕುತ್ತಾರಂತೆ. ಇದೀಗ ಆಕೆಗೆ ಹದಿಹರೆಯದ ಹುಡುಗರು ಸಹ ಕಿರುಕುಳ ಕೊಡುತ್ತಿದ್ದಾರಂತೆ. ಇದೀಗ ಆಕೆ ಧರಿಸಿದ ಡ್ರೆಸ್ ಕಾರಣದಿಂದ ಆಕೆಗೆ ರೇಪ್ ಮತ್ತು ಕೊಲೆ ಮಾಡುವ ಬೆದರಿಕೆ ಹಾಕಲಾಗಿದೆಯಂತೆ. ಈ ಬಗ್ಗೆ ಉರ್ಫಿ ಸೋಷಿಯಲ್ ಮಿಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಸದಾ ವಿಚಿತ್ರ ಬಟ್ಟೆಗಳ ಮೂಲಕ ಕಾಣಿಸಿಕೊಳ್ಳುವ ಉರ್ಫಿ ಇತ್ತಿಚಿಗೆ ಹಾಲೋವಿನ್ ಪ್ರಯುಕ್ತ ವಿಭಿನ್ನವಾದ ಕಾಸ್ಟ್ಯೂಮ್ ಧರಿಸಿದ್ದರು. ಭೂಲ್ ಭೂಲಯ್ಯ ಸಿನೆಮಾದಲ್ಲಿ ರಾಜ್ ಪಾಲ್ ಯಾದವ್ ಅಭಿನಯಿಸಿದ ಚೋಟಾ ಪಂಡಿತ್ ಎಂಬ ಪಾತ್ರದಂತೆ ಉರ್ಫಿ ವೇಷ ಹಾಕಿಕೊಂಡಿದ್ದರು. ಆ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಈ ಗೆಟಪ್ ಗೆ ಆಕೆ ತುಂಬಾನೆ ಟ್ರೋಲ್ ಆಗಿದ್ದರು. ಆದರೆ ಈ ಬಾರಿ ಟ್ರೋಲ್ ಗಿಂತಲೂ ಕೊಂಚ ಮುಂದೆ ಹೋಗಿದ್ದು, ಕೆಲವರು ಆಕೆಯನ್ನು ರೇಪ್ ಮಾಡುವುದಾಗಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರಂತೆ. ಈ ಬಗ್ಗೆ ಉರ್ಫಿ ತನ್ನ ಇನ್ಸ್ಟಾ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮೂಲಕ ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ ಉರ್ಫಿ, ರಾಜ್ ಪಾಲ್ ಯಾದವ್ ಈ ಡ್ರೆಸ್ ಧರಿಸಿದಾಗ ಯಾರಿಗೂ ಸಮಸ್ಯೆ, ತೊಂದರೆಯಾಗಿಲ್ಲ. ಆದರೆ ನಾನು ಅದೇ ಡ್ರೆಸ್ ಹಾಕಿದಾಗ ನನ್ನಿಂದ ಎಲ್ಲರಿಗೂ ತೊಂದರೆಯಾಗಿದೆ. ಕಾರಣವೇ ಇಲ್ಲದೇ ನನಗೆ ಅನೇಕರು ರೇಪ್, ಕೊಲೆ ಮಾಡುವ ಬೆದರಿಕೆಯಾಕಿದ್ದಾರೆ. 10 ವರ್ಷಗಳ ಹಿಂದೆ ಭೂಲ್ ಭುಲಯ್ಯ ಸಿನೆಮಾ ಬಿಡುಗಡೆಯಾಗಿತ್ತು. ಇದೀಗ ನಾನು ಆ ಬಟ್ಟೆ ಧರಿಸಿದರೇ ಧರ್ಮ ರಕ್ಷಕರಿಗೆ ಧಿಡೀರ್ ನೇ ಎಚ್ಚರಿಕೆಯಾದಂತಿದೆ. ಯಾವುದೇ ಒಂದು ಬಣ್ಣ, ಹೂವು, ಅಗರಭತ್ತಿ ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ ಎಂದು ಉರ್ಫಿ ಪೋಸ್ಟ್ ಮಾಡಿದ್ದಾರೆ.

ಇದರ ಜೊತೆಗೆ ಉರ್ಫಿ ಜಾವೇದ್ ಗೆ ಬಂದಂತಹ ಬೆದರಿಕೆ ಸಂದೇಶಗಳ ಸ್ಕ್ರೀನ್ ಶಾಟ್ ಗಳನ್ನು ಸಹ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಸಹ ಉರ್ಫಿಗೆ ಇದೇ ರೀತಿಯ ಬೆದರಿಕೆಗಳು ಸಹ ಬಂದಿತ್ತು. ಅನೇಕರ ಬಗ್ಗೆ ಉರ್ಫಿ ಎಫ್.ಐ.ಆರ್‍ ಸಹ ದಾಖಲು ಮಾಡಿದ್ದಾರೆ. ಇನ್ನೂ ಉರ್ಫಿ ಇಂತಹ ಬೆದರಿಕೆಗಳಿಗೆ, ಟ್ರೋಲ್ ಗಳನ್ನು ಹೆಚ್ಚಾಗಿ ತಲೆಗೆ ಹಾಕಿಕೊಳ್ಳದೇ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ.