ಟೀಕೆ ಮಾಡಿದವನಿಗೆ ಸ್ಟ್ರಾಂಗ್ ಕೌಂಟರ್ ಕೊಟ್ಟ ಸೋನು ಗೌಡ, ಚಪ್ಪರ್ ನನ್ನ ಮಗನೇ ಎಂದ ಬಿಗ್ ಬಾಸ್ ಬ್ಯೂಟಿ…..!

Follow Us :

ಸೋಷಿಯಲ್ ಮಿಡಿಯಾ ಮೂಲಕ ಫೇಂ ಪಡೆದುಕೊಂಡ ಸೋನು ಗೌಡ ಬಿಗ್ ಬಾಸ್ ನಲ್ಲಿ ಹೋದ ಬಂದ ಬಳಿಕ ಮತಷ್ಟು ಫೇಂ ಪಡೆದುಕೊಂಡರು. ಸೋಷಿಯಲ್ ಮಿಡಿಯಾದಲ್ಲಿ ಆಕೆ ಎಷ್ಟು ಫೇಮಸ್ ಆದರೋ ಅದೇ ಮಾದರಿಯಲ್ಲಿ ಟ್ರೋಲ್ ಸಹ ಆಗುತ್ತಿದ್ದಾರೆ. ಇದೀಗ ಆಕೆಯ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದವನಿಗೆ ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ. ಚಪ್ಪರ್‍ ನನ್ನ ಮಗನೇ ಎಂದು ಸೋನು ಗೌಡ ಟೀಕೆ ಮಾಡಿದವನಿಗೆ ಹೇಳಿದ್ದು, ಆಕೆಯ ಕಾಮೆಂಟ್ ಇದೀಗ ವೈರಲ್ ಆಗುತ್ತಿವೆ.

ಬಿಗ್ ಬಾಸ್ ಬ್ಯೂಟಿ ಸೋನು ಶ್ರೀನಿವಾಸ್ ಗೌಡ ಇತ್ತೀಚಿಗಷ್ಟೆ ಸೇವಂತಿ ಎಂಬ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದರು. ಬಡ ಕುಟುಂಬದ ಹುಡುಗಿಯನ್ನು ದತ್ತು ತೆಗೆದುಕೊಂಡಿರುವ ಸೋನು ಗೌಡ ಪ್ರತಿನಿತ್ಯ ವಿಭಿನ್ನವಾದ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ. ಸೇವಂತಿಗೆ ಬಟ್ಟೆ, ತಿಂಡಿ-ತಿನಿಸು, ಪುಸ್ತಕ, ಒಡವೆ ಕಾನ್ವೆಂಟ್ ಸ್ಕೂಲ್ ಗೆ ಸೇರಿಸಬೇಕು ಎಂಬೆಲ್ಲಾ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಈ ಕುರಿತು ಸಹ ಟ್ರೋಲ್ ಮಾಡುತ್ತಿದ್ದು, ಟ್ರೋಲರ್‍ ಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ನನ್ನ ಬಗ್ಗೆ ಜಾಸ್ತಿ ಪಾಸಿಟೀವ್ ಟ್ರೋಲ್ ಆಗುತ್ತಿದೆ. ಅದಕ್ಕೆ ಕಾರಣ ಸೇವಂತಿಯನ್ನು ದತ್ತು ತೆಗೆದುಕೊಂಡಿರುವುದಕ್ಕೋ ಅಥವಾ ಬೇರೆ ಕಾರಣದಿಂದಲೋ ಗೊತ್ತಿಲ್ಲ. ನಾನು ನೆಗೆಟೀವ್ ಟ್ರೋಲ್ ಮಾಡಿದಾಗಲೂ ಅಥವಾ ಪಾಸಿಟೀವ್ ಆಗಿ ಟ್ರೋಲ್ ಮಾಡಿದಾಗಲೂ ನಾನು ಏನು ಮಾಡಿಲ್ಲ. ಆದರೆ ಕೆಲವು ದಿನಗಳ ಹಿಂದೆ ಒಂದು ಟ್ರೋಲ್ ಪೇಸ್ ನಲ್ಲಿ ಹಾಕಿರುವ ಪೋಸ್ಟ್ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ತನ್ನ ಯೂಟ್ಯೂಬ್ ಚಾನಲ್ ನಲ್ಲಿ ಈ ಟ್ರೋಲ್ ಬಗ್ಗೆ ಸ್ಟ್ರಾಂಗ್ ಆಗಿಯೇ ಕೌಂಟರ್‍ ಕೊಟ್ಟಿದ್ದಾರೆ. ಒಂದು ಟ್ರೋಲ್ ಪೇಜ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಹಣ ಮಾಡಲು ಹಾಗೂ ವ್ಯೂಸ್ ಪಡೆಯಲು ಒಂದು ಬಡ ಕುಟುಂಬದ ಹುಡುಗಿಯನ್ನು ಬಳಸಿಕೊಳ್ಳುತ್ತಿರುವೆ. ದತ್ತು ಅಂತ ಪದ ಬಳಸಿ ಮೋಸ ಮಾಡುತ್ತಿರುವೆ ಎಂದು ಟ್ರೋಲ್ ಮಾಡಿದ್ದರು. ಗುರು ನಾನು ಕೆಟ್ಟ ಪದ ಬಳಸಬಾರದು ಎಂದುಕೊಂಡಿದ್ದೇನೆ. ಆದರೆ ನಿನ್ನಂತ ಚಪ್ಪರ್‍ ನನ್ನ ಮಗ ನನ್ನಿಂದ ವ್ಯಸ್ ಪಡೆದುಕೊಳ್ಳುತ್ತಿರುವೆ. ನಾನು ಸೇವಂತಿಯನ್ನು ದತ್ತು ತೆಗೆದುಕೊಳ್ಳಬೇಕು ಅನ್ನೊ ಯೋಚನೆ ಬರೋದಕ್ಕೂ ಮುಂಚೆಯೇ ನಾನು ಆಕೆಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ. ಸೇವಂತಿಗೆ ಮಾತ್ರವಲ್ಲದೇ ಅವರ ಕುಟುಂಬವನ್ನು ನೋಡಿಕೊಂಡಿದ್ದೇನೆ. ದತ್ತು ತೆಗೆದುಕೊಳ್ಳುವುದು ಒಂದು ಪ್ರೋಸಿಸರ್‍ ಇದೆ. ಈ ಕಾರಣದಿಂದ ಆ ಬಗ್ಗೆ ಮಾತನಾಡಿಲ್ಲ. ಆಕೆಯನ್ನು ನನ್ನ ಮನೆಗೆ ಕರೆದುಕೊಂಡು ಬಂದು 15 ದಿನ ಆಗಿಲ್ಲ, ಆಗಲೇ ಈ ಬಗ್ಗೆ ನೆಗೆಟೀವ್ ಆಗಿ ಮಾತನಾಡಬೇಡಿ ಎಂದು ಕೌಂಟರ್‍ ಕೊಟ್ಟಿದ್ದಾರೆ.

ಇನ್ನೂ ಬಡ ಮಕ್ಕಳನ್ನು ಬಳಸಿಕೊಂಡು ಹಣ ಮಾಡುತ್ತಿದ್ದಿಯಾ ಅಂತಾ ಹೇಳ್ತಾ ಇದ್ದೀರಾ, ಸೇವಂತಿಯಿಂದ ಬರುವ ಹಣವನ್ನು ನಾನು ಬಳಸಿಕೊಳ್ಳುವುದಿಲ್ಲ. ಅದನ್ನು ಅವರ ಅಪ್ಪ-ಅಮ್ಮಗೆ ಕೊಡಬೇಕೆಂದು ನಿರ್ಧಾರ ಮಾಡಿದ್ದೀನಿ. ಅಷ್ಟೇ ಅಲ್ಲದೇ ವಿಡಿಯೋ ಮಾಡಬೇಕು ಎಂಬುದು ನನಗಿಂತ ಸೇವಂತಿಗೆ ತುಂಬಾ ಆಸೆ. ಜೊತೆಗೆ ಪ್ರತಿನಿತ್ಯ ವಿಡಿಯೋ ಮಾಡಿ ಅಂತಾನೂ ಜನರು ಕಾಮೆಂಟ್ ಮಾಡುತ್ತಾರೆ. ಸೇವಂತಿ ನನ್ನ ತಂಗಿ ಯಾರೂ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ ಎಂದು ಸೋನು ಗೌಡ ಹೇಳಿದ್ದು, ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.