ಮೊದಲ ಬಾರಿಗೆ ಡ್ರಗ್ಸ್ ಪ್ರಕರಣದ ಬಗ್ಗೆ ಬಾಯಿ ಬಿಚ್ಚಿದ ನಿಹಾರಿಕಾ, ಆ ದಿನ ಏನಾಯ್ತು ಎಂದು ಹೇಳಿದ ಮೆಗಾ ಡಾಟರ್….!

Follow Us :

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಇತ್ತೀಚಿಗೆ ವೈಯುಕ್ತಿಕ ವಿಚಾರಗಳ ಕಾರಣದಿಂದ ಭಾರಿ ಸುದ್ದಿಯಾಗಿದ್ದರು. ಕಳೆದ ವರ್ಷವಷ್ಟೆ ನಟಿ ನಿಹಾರಿಕಾ ಚೈತನ್ಯ ಜೊನ್ನಲಗಡ್ಡ ಜೊತೆಗೆ ವಿಚ್ಚೇದನ ಪಡೆದುಕೊಂಡರು. ಈ ಸುದ್ದಿ ಟಾಲಿವುಡ್ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿತ್ತು. ಇದೀಗ ನಿಹಾರಿಕಾ ಸಂಪೂರ್ಣವಾಗಿ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ನಿಹಾರಿಕಾ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಬಗ್ಗೆ ಮೊದಲ ಬಾರಿಗೆ ರಿಯಾಕ್ಟ್ ಆಗಿದ್ದಾರೆ. ಆಕೆಯ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಕಳೆದ 2022 ರಲ್ಲಿ ನಿಹಾರಿಕಾ ಕೊಣಿದೆಲಾ ಡ್ರಗ್ಸ್ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ಲೇಟ್ ನೈಟ್ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಪಾರ್ಟಿಯಲ್ಲಿ ಡ್ರಗ್ಸ್ ಬಳಸುತ್ತಿರು ಎನ್ನಲಾಗಿತ್ತು. ಈ ಪಾರ್ಟಿಯಲ್ಲಿದ್ದ ನಿಹಾರಿಕಾ, ಸಿಂಗರ್‍ ರಾಹುಲ್ ಸಿಂಪ್ಲಿಗಂಜ್ ಸೇರಿದಂತೆ ಮತಷ್ಟು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅರ್ಧರಾತ್ರಿ ಅರೆಸ್ಟ್ ಆದ ನಿಹಾರಿಕಾ ಬೆಳಿಗ್ಗೆ 7 ಗಂಟೆಯವರೆಗೂ ಬಂಜಾರಾಹಿಲ್ಸ್ ಪೊಲೀಸ್ ಸ್ಟೇಷನ್ ನಲ್ಲಿ ಇದ್ದರು. ವಿಚಾರಣೆಯಾದ ಬಳಿಕ ಆಕೆಯನ್ನು ಬಿಡುಗಡೆ ಮಾಡಿ ಮನೆಗೆ ಕಳುಹಿಸಿದ್ದರು. ಮತ್ತೆ ವಿಚಾರಣೆಗೆ ಬರಬೇಕೆಂದು ಪೊಲೀಸರು ನೊಟೀಸ್ ಸಹ ನೀಡಿದ್ದರು. ಬಳಿ ಈ ಕುರಿತು ನಿಹಾರಿಕಾ ತಂದೆ ನಾಗಬಾಬು ರವರು ವಿವರಣೆ ನೀಡಿದ್ದರು. ಡ್ರಗ್ಸ್ ಕೇಸ್ ನಲ್ಲಿ ನಿಹಾರಿಕಾಗೆ ಯಾವುದೇ ಸಂಬಂಧವಿಲ್ಲ. ಆಕೆ ಯಾವುದೇ ತಪ್ಪು ಮಾಡಲಿಲ್ಲ, ಈ ಕುರಿತು ಪೊಲೀಸರೇ ನಿರ್ಧಾರ ಮಾಡಿದ್ದರು ಎಂದು ಹೇಳಿದ್ದರು.

ಆದರೆ ನಿಹಾರಿಕಾ ಮಾತ್ರ ಎಂದೂ ಈ ಅರೆಸ್ಟ್ ಬಗ್ಗೆ ಮಾತನಾಡಿರಲಿಲ್ಲ. ಆದರೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತ್ರ ನಿಹಾರಿಕ ಈ ಕುರಿತು ಮಾತನಾಡಿದ್ದಾರೆ. ಆ ದಿನ ಏನು ನಡೆಯಿತು ಎಂಬ ಬಗ್ಗೆ ತಿಳಿಸಿದ್ದಾರೆ. ನಿಹಾರಿಕಾ ಮಾತನಾಡುತ್ತಾ ಆ ದಿನ ನಮ್ಮ ಸ್ಕೂಲ್ ಫ್ರೆಂಡ್ಸ್ ಎಲ್ಲರೂ ಸೇರಿದ್ದೆವು. ಸುಮಾರು ಆರು ತಿಂಗಳ ಬಳಿಕ ನಾವು ಭೇಟಿಯಾದೆವು ಆದರೆ ಅಲ್ಲಿ ಸೌಂಡ್ಸ್ ನಮಗೆ ತುಂಬಾನೆ ಕಿರಿಕಿರಿ ಮಾಡಿತ್ತು. ಆ ಕಾರಣದಿಂದ ನಾವು ಮನೆಗೆ ಹೋಗಬೇಕೆಂದು ಬಿಲ್ ಕಟ್ಟಿ ಹೊರಬರುತ್ತಿದ್ದಾಗ. ಆಗಲೇ ರೈಡ್ ನಡೆಯಿತು. ಎಲ್ಲರೊಂದಿಗೆ ನಮ್ಮನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋದರು. ಆದರೆ ಅಲ್ಲಿದ್ದ ಮಿಡಿಯಾ ಮಾತ್ರ ಇದನ್ನೇ ಹೈಲೈಟ್ ಮಾಡಿತ್ತು. ಆದರೆ ನಾನು ಯಾವುದೇ ರೀತಿಯ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಇನ್ನೂ ನಿಹಾರಿಕಾ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

ಸದ್ಯ ನಿಹಾರಿಕಾ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ತನ್ನ ಸ್ವಂತ ನಿರ್ಮಾಣ ಸಂಸ್ಥೆಯಾದ ಫಿಂಕ್ ಎಲಿಫೆಂಟಾ ಬ್ಯಾನರ್‍ ನಡಿ ಸಿನೆಮಾಗಳು, ವೆಬ್ ಸಿರೀಸ್ ಗಳನ್ನು ನಿರ್ಮಾಣ ಮಾಡಲು ಸಿದ್ದತೆಗಳನ್ನು ನಡೆಸುತ್ತಿದ್ದಾರೆ. ಇತ್ತೀಚಿಗಷ್ಟೆ ಆಕೆ ತಮಿಳು ಸಿನೆಮಾಗೂ ಸೈನ್ ಮಾಡಿದ್ದಾರೆ.