Film News

ಸ್ಟೈಲಿಷ್ ಅಂಡ್ ಗ್ಲಾಮರಸ್ ಆಗಿ ಪೋಸ್ ಕೊಟ್ಟ ಬಿಗ್ ಬಾಸ್ ಬ್ಯೂಟಿ ರತಿಕಾ ರೋಜ್, ವೈರಲ್ ಆದ ಪೊಟೋಸ್…..!

ಬಿಗ್ ಬಾಸ್ ಸೀಜನ್ 7 ತೆಲುಗಿನಲ್ಲಿ ಸ್ಪರ್ಧಿಯಾಗಿದ್ದ ರತಿಕಾ ರೋಜ್ ತುಂಬಾನೆ ಫೇಮಸ್ ಆದರು. ಬಿಗ್ ಬಾಸ್ ಮನೆಯಲ್ಲಿ ಗ್ಲಾಮರಸ್ ಬ್ಯೂಟಿಯಾಗಿ ಸದ್ದು ಮಾಡಿದರು. ಅದರಲ್ಲೂ ರತಿಕಾ ರೋಜ್ ಹಾಗೂ ಪಲ್ಲವಿ ಪ್ರಶಾಂತ್ ನಡುವೆ ನಡೆದ ಲವ್ ಟ್ಯ್ರಾಕ್ ತುಂಬಾನೆ ಸುದ್ದಿಯಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ರತಿಕಾ ತುಂಬಾನೆ ಫೇಮಸ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಂತೂ ಆಕೆಯ ಕ್ರೇಜ್ ನೆಕ್ಸ್ಟ್ ಲೆವೆಲ್ ಎಂದೇ ಹೇಳಬಹುದಾಗಿದೆ. ಇದೀಗ ಆಕೆ ಕೆಲವೊಂದು ಪೊಟೊಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ತೆಲುಗಿನ ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿ ರತಿಕಾ ರೋಜ್ ಮನೆಯಲ್ಲಿ ತುಂಬಾನೆ ಸದ್ದು ಮಾಡಿದ್ದರು. ಅದರಲ್ಲೂ ರತಿಕಾ ರೋಜ್ ಹಾಗೂ ಪಲ್ಲವಿ ಪ್ರಶಾಂತ್ ನಡುವಣ ಲವ್ ಟ್ಯ್ರಾಕ್ ಮಾತ್ರ ಭಾರಿ ವೈರಲ್ ಆಗಿತ್ತು. ಮನೆಯಲ್ಲಿ ಮೊದಲಿಗೆ ರತಿಕಾ ತುಂಬಾ ಅಗ್ರೇಸಿವ್ ಆಗಿ ವರ್ತಿಸಿದ್ದರು. ಆ ಕಾರಣದಿಂದ ಮನೆಯಲ್ಲಿ ಎಲ್ಲರ ಜೊತೆಗೆ ಜಗಳ ಮಾಡಿಕೊಂಡರು. ಇದು ಆಕೆಗೆ ನೆಗೆಟಿವಿಟಿ ತಂದುಕೊಟ್ಟಿತ್ತು. ಆದರೆ ಪಲ್ಲವಿ ಪ್ರಶಾಂತ್ ಜೊತೆಗೆ ಲವ್ ಟ್ರಾಕ್ ಶುರು ಮಾಡಿದ್ದೇ ಆಕೆ ಪಾಪ್ಯಲರ್‍ ಆಗಲು ಕಾರಣವಾಯ್ತು. ಕೆಲವೇ ವಾರಗಳಿಗೆ ಆಕೆ ಎಲಿಮಿನೇಟ್ ಆದರು. ಬಳಿಕ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೊಮ್ಮೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು. ಆದರೆ ಆ ಅವಕಾಶವನ್ನು ಆಕೆ ಸದ್ಬಳಕೆ ಮಾಡಿಕೊಳ್ಳಲು ವಿಫಲರಾದರು. ಜೊತೆಗೆ ಭಾರಿ ಟ್ರೋಲ್ ಸಹ ಆಗಿದ್ದರು.

ಇನ್ನೂ ರತಿಕಾ ರೋಜ್ ಮನೆಯಿಂದ ಹೊರಬಂದ ಬಳಿಕ ತುಂಬಾನೆ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಫ್ಯಾನ್ ಫಾಲೋಯಿಂಗ್ ಅಪಾರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಆಕೆ ಯೂತ್ ನಲ್ಲಿ ಭಾರಿ ಕ್ರೇಜ್ ಪಡೆದುಕೊಂಡು ಅನೇಕರ ಕನಸಿನ ರಾಣಿಯಾಗಿದ್ದಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಇಂಟರ್‍ ನೆಟ್ ನಲ್ಲಿ ಭಾರಿ ವೈರಲ್ ಆಗುತ್ತಿವೆ. ಸ್ಟೈಲಿಷ್ ಅಂಡ್ ಗ್ಲಾಮರಸ್ ಆಗಿ ಕಾಣಿಸಿಕೊಂಡ ರತಿಕಾ ರೋಜ್ ಪೊಟೋಗಳನ್ನು ನೋಡಿ ಫಿದಾ ಆದ ಅನೇಕರು ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳು ಹಾಗೂ ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ. ಅಂದಹಾಗೇ ರತಿಕಾ ರೋಜ್ ಕಾಲಿವುಡ್ ಸ್ಟಾರ್‍ ನಟ ದಳಪತಿ ವಿಜಯ್ ಜೊತೆಗೆ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಿದೆ.

Most Popular

To Top