Film News

ವೈರೆಟಿ ಡ್ರೆಸ್ ನಲ್ಲಿ ಬೋಲ್ಡ್ ಲುಕ್ಸ್ ಕೊಟ್ಟ ಮಿಲ್ಕಿ ಬ್ಯೂಟಿ ತಮನ್ನಾ, ವೈರಲ್ ಆದ ಲೇಟೆಸ್ಟ್ ಪೊಟೋಸ್….!

ಸೌತ್ ಸಿನಿರಂಗದಲ್ಲಿ ದಶಕಗಳ ಕಾಲ ಗ್ಲಾಮರಸ್ ಡ್ಯಾನ್ಸ್ ಮೂಲಕವೇ ಆಳಿದಂತಹ ನಟಿ ತಮನ್ನಾ ಭಾಟಿಯಾ ಮಿಲ್ಕಿ ಬ್ಯೂಟಿ ಎಂತಲೇ ಫೇಮಸ್ ಆಗಿದ್ದಾರೆ. ಕಳೆದ ವರ್ಷ ಆಕೆ ಬಾಲಿವುಡ್ ನಲ್ಲಿ ನಟಿಸಿದ ಎರಡು ವೆಬ್ ಸಿರೀಸ್ ಗಳ ಕಾರಣದಿಂದ ತುಂಬಾನೆ ಸುದ್ದಿಯಾಗಿದ್ದರು. ಈ ವೆಬ್ ಸಿರೀಸ್ ಗಳಲ್ಲಿ ತಮನ್ನಾ ಬೋಲ್ಡ್ ಆಗಿ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ದರು. ಜೊತೆಗೆ ಆಕೆ ಬಾಲಿವುಡ್ ನಟ ವಿಜಯ್ ವರ್ಮಾ ಎಂಬಾತನೊಂದಿಗೆ ಲವ್ ಟ್ರಾಕ್ ನಡೆಸುತ್ತಿದ್ದು, ಈ ಕಾರಣದಿಂದಲೂ ಆಕೆ ಭಾರಿ ಸುದ್ದಿಯಾಗುತ್ತಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಟಾಲಿವುಡ್ ಸಿನೆಮಾಗಳ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡು ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಪಡೆದುಕೊಂಡರು. ಇದೀಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ.  ಸೆಕೆಂಡ್ ಇನ್ನಿಂಗ್ಸ್ ನಲ್ಲಿ ರೂಟ್ ಬದಲಿಸಿರುವ ತಮನ್ನಾ ಬೋಲ್ಡ್ ದೃಶ್ಯಗಳಲ್ಲು ಸಹ ನಟಿಸುತ್ತಾ ಸೈ ಎನ್ನಿಸಿದ್ದಾರೆ. ಕೆರಿಯರ್‍ ಆರಂಭದಲ್ಲಿ ಬೋಲ್ಡ್ ದೃಶ್ಯಗಳಿಂದ ದೂರ ಉಳಿದ ತಮನ್ನಾ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ನಲ್ಲಿ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳ ಮೂಲಕ ಶಾಕ್ ಕೊಟ್ಟಿದ್ದರು. ಈ ಸಿರೀಸ್ ಬಳಿಕ ಆಕೆ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುತ್ತಾರೆ.

ಇನ್ನೂ ತಮನ್ನಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಿನೆಮಾ ಅಪ್ಡೇಟ್ ಗಳು, ಪೊಟೋಶೂಟ್ಸ್ ಗಳು, ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಾ ಹಾಟ್ ಟಾಪಿಕ್ ಆಗುತ್ತಿರುತ್ತಾರೆ. ಟ್ರೆಂಡಿ, ಮಾಡ್ರನ್, ಟ್ರೆಡಿಷನಲ್ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಡುತ್ತಿದ್ದಾರೆ.  ಈ ಕಾರಣದಿಂದಲೇ ಆಕೆಯನ್ನು ಫ್ಯಾಷನ್ ಐಕಾನ್ ಎಂದೇ ಕರೆಯಲಾಗುತ್ತಿದೆ. ಈ ಹಾದಿಯಲ್ಲೇ ಆಕೆ ಇದೀಗ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೋಟೋಗಳಲ್ಲಿ ಆಕೆ ಬೋಲ್ಡ್ ಲುಕ್ಸ್ ಕೊಟ್ಟಿದ್ದಾರೆ. ವಿಭಿನ್ನವಾದ ಮಾದರಿಯ ಗ್ರೀನ್ ಕಲರ್‍ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟಿದ್ದಾರೆ. ಅದರಲ್ಲೂ ಆಕೆ ಟಾಪ್ ಗ್ಲಾಮರ್‍ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಈ ಪೊಟೋಗಳಿಗೆ ಆಕೆ ಗ್ರೀನ್ ಫ್ಲಾಗ್ ಎನರ್ಜಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನೂ ತಮನ್ನಾ ಹಂಚಿಕೊಂಡ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಪೊಟೋಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಶೀಘ್ರದಲ್ಲೇ ಆಕೆ ತನ್ನ ಪ್ರಿಯಕರ ವಿಜಯ್ ವರ್ಮಾ ಜೊತೆಗೆ ಸಪ್ತಪದಿ ತುಳಿಯಲಿದ್ದಾಳೆ ಎಂದು ಹೇಳಲಾಗುತ್ತಿದೆ.

Most Popular

To Top